Viral: ಗೆಳತಿಯರೊಂದಿಗೆ ಸ್ಕೂಟಿಯಲ್ಲಿ ಬೆಂಗಳೂರು ಸುತ್ತಿದ ಗಿಳಿರಾಯ; ವಿಡಿಯೋ ವೈರಲ್
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ಕೆಲವೊಂದು ದೃಶ್ಯಗಳು ವೈರಲ್ ಆಗುವುದರ ಜೊತೆಗೆ ಚರ್ಚೆಗೆ ಗ್ರಾಸವಾಗುತ್ತವೆ. ಇದೀಗ ಅಂತಹದ್ದೊಂದು ದೃಶ್ಯ ವೈರಲ್ ಆಗಿದ್ದು, ಯುವತಿಯೊಬ್ಬಳು ಗಿಳಿಯನ್ನು ಹೆಗಲ ಮೇಲೆ ಕೂರಿಸಿಕೊಂಡು ಸ್ಕೂಟಿಯಲ್ಲಿ ಸವಾರಿ ಹೊರಟ ದೃಶ್ಯ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಗಿಳಿಯ ಕಾರಣದಿಂದಲ್ಲ, ಆಕೆ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದ್ದಕ್ಕೆ ಸದ್ಯ ಈ ದೃಶ್ಯ ಚರ್ಚೆಗೆ ಗ್ರಾಸವಾಗಿದೆ.

ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲಿ ಸಂಚರಿಸುವಾಗ ಕಡ್ಡಾಯವಾಗಿ ಸುರಕ್ಷತೆಯ ದೃಷ್ಟಿಯಿಂದ ಹೆಲ್ಮೆಟ್ ಧರಿಸಿ ಎಂಬ ರೂಲ್ಸ್ ತಂದ್ರೂ ಇಂದಿಗೂ ಎಷ್ಟೋ ಜನ ಹೆಲ್ಮೆಟ್ ಧರಿಸದೆಯೇ ವಾಹನ ಓಡಿಸುತ್ತಾರೆ. ಫೈನ್ ಹಾಕಿದ್ರೂ ಕ್ಯಾರೇ ಅನ್ನದೆ ಹೆಲ್ಮೆಟ್ ಧರಿಸದೆ ವಾಹನ ಓಡಿಸುವವರಿದ್ದಾರೆ. ಇಲ್ಲೊಬ್ಬಳು ಯುವತಿ ಕೂಡಾ ಹೆಲ್ಮೆಟ್ ಧರಿಸದರೆ ಬೆಂಗಳೂರು ಸುತ್ತಿದ್ದು, ಈ ದೃಶ್ಯ ಇದೀಗ ಭಾರೀ ವೈರಲ್ ಆಗುತ್ತಿದೆ. ವಿಶೇಷ ಏನಪ್ಪಾ ಅಂದ್ರೆ ಆಕೆ ಗಿಳಿಯನ್ನು ಹೆಗಲ ಮೇಲೆ ಕೂರಿಸಿಕೊಂಡು ಸ್ಕೂಟಿಯಲ್ಲಿ ಸವಾರಿ ಹೊರಟಿದ್ದು, ಹೆಲ್ಮೆಟ್ ಧರಿಸದೆ ರಸ್ತೆ ಸುರಕ್ಷತಾ ನಿಯಮವನ್ನು ನಿರ್ಲಕ್ಷ್ಯ ಮಾಡಿದ್ದಕ್ಕೆ ನೆಟ್ಟಿಗರು ಆಕೆಯನ್ನು ಟೀಕಿಸಿದ್ದಾರೆ.
ಪೀಕ್ ಬೆಂಗಳೂರು ಮೊಮೆಂಟ್‌ಗೆ ಸಂಬಂಧಿಸಿದ ಸಾಕಷ್ಟು ಪೋಸ್ಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಅಂತಹದ್ದೊಂದು ವಿಡಿಯೋ ಇದೀಗ ವೈರಲ್ ಆಗಿದ್ದು, ಯುವತಿಯೊಬ್ಬಳು ಗಿಳಿಯನ್ನು ಹೆಗಲ ಮೇಲೆ ಕೂರಿಸಿಕೊಂಡು, ಹೆಲ್ಮೆಟ್ ಧರಿಸದೆ ಸಿಟಿ ಸುತ್ತಿದ್ದಾಳೆ. ಹೆಲ್ಮೆಟ್ ಧರಿಸದೆ ರಸ್ತೆ ಸುರಕ್ಷತಾ ನಿಯಮವನ್ನು ನಿರ್ಲಕ್ಷ್ಯ ಮಾಡಿದ್ದಕ್ಕೆ ನೆಟ್ಟಿಗರು ಆಕೆಯನ್ನು ಟೀಕಿಸಿದ್ದಾರೆ.
Never a dull moment in Bangalore pic.twitter.com/IzUr5nRaP8
— Rahul Jadhav (@iRahulJadhav) February 28, 2025
ಈ ಕುರಿತ ವಿಡಿಯೋವನ್ನು ರಾಹುಲ್ ಜಾಧವ್ (Rahul Jadhav) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಇಬ್ಬರು ಯುವತಿಯರು ಹೆಲ್ಮೆಟ್ ಧರಿಸದೆ ಸ್ಕೂಟಿಯಲ್ಲಿ ಸವಾರಿ ಹೊರಟಿರುವ ದೃಶ್ಯವನ್ನು ಕಾಣಬಹುದು. ವಿಶೇಷ ಏನಾಪ್ಪ ಅಂದ್ರೆ ಸ್ಕೂಟಿ ಓಡಿಸುತ್ತಿದ್ದ ಯುವತಿಯ ಹೆಗಲ ಮೇಲೆ ಗಿಳಿಯೊಂದು ಸಮಾಧಾನದಿಂದ ಕುಳಿತಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ವರ್ಷಕ್ಕೆ ಕೊಡೋದು 3.8 ಲಕ್ಷ ರೂ ಸಂಬಳವಾದ್ರೂ ದಿನಕ್ಕೆ 12 ಗಂಟೆ ಕೆಲಸ ಮಾಡ್ಲೇಬೇಕಂತೆ, ಇದು ಬಾಸ್ ಆದೇಶ
ಫೆಬ್ರವರಿ 28 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದು ನಿಜವಾಗಿಯೂ ಪೀಕ್ ಮೊಮೆಂಟ್ ಆಗಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼದಯವಿಟ್ಟು ಈ ಮಹಿಳೆಗೆ ದಂಡ ವಿಧಿಸಿ, ಈ ರೀತಿಯ ವರ್ತನೆಯನ್ನು ಯಾರೂ ಪ್ರೋತ್ಸಾಹಿಸಬೇಡಿʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದ ಆ ಯುವತಿಯ ವಿರುದ್ಧ ಗರಂ ಆಗಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ