Viral: ನನ್ನನ್ನು ಹುಡುಕುವ ಪ್ರಯತ್ನ ಬೇಡ; ಔಷಧಿ ತರಲು ಹೋಗ್ತೇನೆಂದು ಬಾಯ್‌ಫ್ರೆಂಡ್ ಜೊತೆ ಓಡಿ ಹೋದ ಮೂರು ಮಕ್ಕಳ ತಾಯಿ
ಇತ್ತೀಚಿನ ದಿನಗಳಲ್ಲಿ ಮದುವೆಯಾದವರೇ ಗಂಡ, ಮಕ್ಳನ್ನೇ ಬಿಟ್ಟು ಪ್ರಿಯಕರನ ಜೊತೆ ಓಡಿ ಹೋದಂತಹ, ಹೆಂಡ್ತಿ ಇದ್ರೂ ಇನ್ನೊಬ್ಬ ಮಹಿಳೆಯ ಜೊತೆ ಸಂಬಂಧ ಇಟ್ಟುಕೊಂಡಂತಹ ಸುದ್ದಿಗಳು ಕೇಳಿ ಬರುತ್ತಿರುತ್ತವೆ. ಅಂತಹದ್ದೇ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದ್ದು, ಮೂರು ಮಕ್ಕಳ ತಾಯಿಯೊಬ್ಬಳು ತನ್ನ ಪ್ರಿಯಕರನ ಜೊತೆ ಓಡಿ ಹೋಗಿ ನಮ್ ತಂಟೆಗೆ ಬರ್ಬೇಡಿ, ದಯವಿಟ್ಟು ನನ್ನನ್ನು ಹಿಂಬಾಲಿಸಬೇಡಿ ಎಂದು ಗಂಡನಿಗೆ ಖಡಕ್ ಎಚ್ಚರಿಕೆ ನೀಡಿದ್ದಾಳೆ. ಈ ಕುರಿತ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಉತ್ತರ ಪ್ರದೇಶ, ಮಾ.03: ಇತ್ತೀಚಿಗೆ ವಿವಾಹೇತರ ಸಂಬಂಧದ ಪ್ರಕರಣಗಳು ತೀರಾ ಹೆಚ್ಚಾಗಿದ್ದು, ವಿವಾಹಿತ ಪುರುಷ ಇನ್ನೊಬ್ಬ ಮಹಿಳೆಯ ಜೊತೆ ಸಂಬಂಧ ಇಟ್ಟುಕೊಂಡಂತಹ, ವಿವಾಹಿತ ಮಹಿಳೆ ತನ್ನ ಸ್ವಾರ್ಥಕ್ಕಾಗಿ ಗಂಡ ಮಕ್ಳನ್ನು ಬಿಟ್ಟು ಬಾಯ್‌ಫ್ರೆಂಡ್ ಜೊತೆ ಓಡಿ ಹೋದಂತಹ ಘಟನೆಗಳ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದ್ದು, ಮೂರು ಮಕ್ಕಳ ತಾಯಿಯೊಬ್ಬಳು ಔಷಧಿ ತರಲು ಹೋಗ್ತೇನೆಂದು ಹೇಳಿ ಪ್ರೇಮಿಯೊಂದಿಗೆ ಓಡಿ ಹೋಗಿದ್ದಾಳೆ. ಅಷ್ಟೇ ಅಲ್ಲದೆ ಈಗ ಮೋದಿ ಸರ್ಕಾರ ನಡಿತಿದೆ, ನಮ್ ತಂಟೆಗೆ ಬರ್ಬೇಡಿ, ದಯವಿಟ್ಟು ನನ್ನನ್ನು ಹಿಂಬಾಲಿಸಬೇಡಿ ಎಂದು ಗಂಡ, ಅತ್ತೆ-ಮಾವನಿಗೆ ಖಡಕ್ ಎಚ್ಚರಿಕೆ ನೀಡಿದ್ದಾಳೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಬಾಧಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ವಿವಾಹಿತ ಮಹಿಳೆಯೊಬ್ಬಳು ಔಷಧಿ ತರುವ ನೆಪದಲ್ಲಿ ಮನೆಯಿಂದ ಹೊರ ಹೋಗಿ ಗಂಡ ಮಕ್ಕಳನ್ನು ಬಿಟ್ಟು ತನ್ನ ಪ್ರಿಯಕರನೊಂದಿಗೆ ಓಡಿ ಹೋಗಿದ್ದಾಳೆ. ಅಷ್ಟೇ ಅಲ್ಲದೆ ಒಂದು ವಿಡಿಯೋ ಮಾಡಿ ಹರಿಬಿಟ್ಟಿದ್ದಾಳೆ. ನಾನು ನನ್ನ ಪ್ರಿಯಕರನೊಂದು ನ್ಯಾಯಾಲಯದಲ್ಲಿ ಮದುವೆಯಾಗಿರುವುದಾಗಿ ಹೇಳಿಕೊಂಡಿದ್ದಾಳೆ. ಅಷ್ಟೇ ಅಲ್ಲದೆ ತನ್ನ ಪತಿ ಕಿರುಕುಳ ನೀಡುತ್ತಿದ್ದಾನೆ ಎಂದು ಆಕೆ ಆರೋಪಿಸಿದ್ದಾಳೆ. ಜೊತೆಗೆ ನನಗೂ ನನ್ನ ಪ್ರೇಮಿಗೆ ಯಾರೂ ತೊಂದರೆ ಕೊಡಬಾರದು, ಹಾಗೇನಾದ್ರೂ ಆದ್ರೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದ್ದಾಳೆ. ಅದೇ ಸಮಯದಲ್ಲಿ, ಆಕೆಯ ಪತಿ ತನ್ನ 3 ಲಕ್ಷ ರೂ. ಮೌಲ್ಯದ ನಗದು ಮತ್ತು 6 ತೊಲ ಚಿನ್ನವನ್ನು ತೆಗೆದುಕೊಂಡು ಹೋಗಿದ್ದಾಳೆ ಎಂದು ಆರೋಪಿಸಿದ್ದಾನೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
In UP’s Bijnor’s Badhapur, a mother of 3 children left her husband’s house for her boyfriend. She also released a video in which she is instructing her in-laws to stop following her pic.twitter.com/iHJRH7Dvsh
— Ghar Ke Kalesh (@gharkekalesh) March 2, 2025
gharkekalesh ಹೆಸರಿನ ಎಕ್ಸ್ ಖಾತೆಯಲ್ಲಿ ಈ ಕುರಿತ ವಿಡಿಯೋವನ್ನು ಶೇರ್ ಮಾಡಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಹಿಳೆ ನಿನ್ನನ್ನು ಹುಡುಕುವುದು ವ್ಯರ್ಥ. ನೀವು ನಿನ್ನ ಹಣ ಮತ್ತು ಸಮಯವನ್ನು ವ್ಯರ್ಥ ಮಾಡುತ್ತೀರಿ ಅಷ್ಟೇ. ನನ್ನನ್ನು ನನ್ನಷ್ಟಕ್ಕೆ ಬದುಕಲು ಬಿಡಿ ನೀವು ನನಗೆ ತುಂಬಾ ತೊಂದರೆ ಕೊಟ್ಟರೆ, ಪ್ರಕರಣ ದಾಖಲಿಸಬೇಕಾಗುತ್ತದೆ. ನಿಮಗೆ ಗೊತ್ತು ತಾನೇ ಈಗ ಮೋದಿ ಸರ್ಕಾರ ನಡೆಯುತ್ತಿದೆ ನನ್ನ ತಂಟೆಗೆ ಬರ್ಬೇಡಿ ಎಂದು ಎಚ್ಚರಿಕೆ ನೀಡುತ್ತಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ನಡುರಸ್ತೆಯಲ್ಲೇ ಗಂಡನನ್ನು ಥಳಿಸಿದ ಹೆಂಡತಿ!
ಮಾರ್ಚ್ 02 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.3 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನರೇಂದ್ರ ಮೋದಿಯವರನ್ನು ಟ್ಯಾಗ್ ಮಾಡಿ, ನೋಡಿ ಹೇಗೆ ಮಾತಾಡ್ತಿದ್ದಾಳೆ ಆಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಸಮಾಜ ಎತ್ತ ಸಾಗುತ್ತಿದೆʼ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








