‘ಮಕ್ಕಳನ್ನು ಶಾಲೆಗೆ ಕಳುಹಿಸುವುದು ಸಮಯ ವ್ಯರ್ಥ’; ವಿಡಿಯೋ ವೈರಲ್
ಕೋಲ್ಕತ್ತಾದ ದಂಪತಿಯೊಂದು 'ಮಕ್ಕಳನ್ನು ಶಾಲೆಗೆ ಕಳುಹಿಸುವುದು ಸಮಯ ವ್ಯರ್ಥ' ಎಂಬ ಹೇಳಿಕೆ ನೀಡಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೊಗೆ ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಶಾಲಾ ವ್ಯವಸ್ಥೆ ಮತ್ತು ಪರ್ಯಾಯ ಕಲಿಕಾ ವಿಧಾನಗಳ ಬಗ್ಗೆ ಚರ್ಚೆಗೆ ಕಾರಣವಾಗಿದೆ. ಕೆಲವರು ಈ ವಿಧಾನವನ್ನು ಸ್ವಾಗತಿಸಿದರೆ, ಇನ್ನು ಕೆಲವರು ಶಾಲಾ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿದ್ದಾರೆ.

ತಮ್ಮ ಮಕ್ಕಳನ್ನು ಒಂದು ಒಳ್ಳೆಯ ಶಾಲೆಗೆ ಸೇರಿಸಬೇಕು, ಅವರಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು ಎಂಬುದು ಪ್ರತೀ ಪೋಷಕರ ಕನಸು. ಇದಕ್ಕಾಗಿ ಎಲ್ಕೆಜಿ, ಯುಕೆಜಿ ಹಂತದಲ್ಲೇ ಲಕ್ಷ ಲಕ್ಷ ಹಣ ಖರ್ಚು ಮಾಡುವ ಪೋಷಕರೂ ಇದ್ದಾರೆ. ಆದರೆ ಇದೀಗ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾದ ದಂಪತಿಯೊಂದು ಹೇಳಿಕೆಯನ್ನು ನೀಡಿದ್ದು, ಸದ್ಯ ಈ ಘಟನೆ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಕೋಲ್ಕತ್ತಾದ ದಂಪತಿಯೊಂದು ‘ಮಕ್ಕಳನ್ನು ಶಾಲೆಗೆ ಕಳುಹಿಸುವುದು ಸಮಯ ವ್ಯರ್ಥ’ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಜೊತೆಗೆ ಮಕ್ಕಳಿಗೆ ಸಾಂಪ್ರದಾಯಿಕ ಶಾಲಾ ಶಿಕ್ಷಣದ ಮೂಲಕವಲ್ಲ, ಬದಲಾಗಿ ಪ್ರಾಯೋಗಿಕ ಅನುಭವದ ಮೂಲಕ ಕಲಿಸಬೇಕು ಎಂದು ದಂಪತಿಗಳು ವೀಡಿಯೊದಲ್ಲಿ ವಿವರಿಸಿದ್ದಾರೆ. ನಟಿ ಶೆನಾಜ್ ಟ್ರೆಷರಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಸದ್ಯ ವಿಡಿಯೋ ಎಲ್ಲೆಡೆ ಭಾರೀ ವೈರಲ್ ಆಗುತ್ತಿದೆ.
ವಿಡಿಯೋ ಇಲ್ಲಿದೆ ನೋಡಿ:
View this post on Instagram
ಶಾಲೆಗೆ ಹೋಗುವ ಮಕ್ಕಳು ತುಂಬಾ ದಣಿದಿರುತ್ತಾರೆ, ಅವರು ನಿಜವಾದ ಜ್ಞಾನದ ಮೇಲೆ ಗಮನಹರಿಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ನಾವು ‘ಶಾಲೆಯಿಂದ ಹೊರಗುಳಿಯುವ’ ಕಲ್ಪನೆಯನ್ನು ನಮ್ಮ ಮಕ್ಕಳಿಗೆ ಕಲಿಸಿ ಕೊಡುತ್ತೀದ್ದೇವೆ ಎಂದು ದಂಪತಿ ಹೇಳಿಕೊಂಡಿದ್ದಾರೆ.
ವೀಡಿಯೊದ ಶೀರ್ಷಿಕೆಯಲ್ಲಿ, ಶೆನಾಜ್ ಟ್ರೆಷರಿ ಇದು UNSCHOOLING ಎಂಬ ಹೊಸ ಪ್ರವೃತ್ತಿ, ಇದನ್ನು ಮನೆ ಶಾಲೆ ಎಂದು ಪರಿಗಣಿಸಬೇಡಿ ಎಂದು ಬರೆದಿದ್ದಾರೆ. ಶಾಲೆಯಿಂದ ಹೊರಗುಳಿಯುವುದು ಮಕ್ಕಳ ಆಸಕ್ತಿ ಆಧಾರಿತ ಕಲಿಕಾ ವಿಧಾನವಾಗಿದೆ. ಇದರಲ್ಲಿ ಯಾವುದೇ ರಚನಾತ್ಮಕ ಕೋರ್ಸ್‌ಗಳಿಲ್ಲ. ಆದರೆ ಮನೆ ಶಾಲಾ ಶಿಕ್ಷಣದಲ್ಲಿ, ಶಿಕ್ಷಣವನ್ನು ಮನೆಯಲ್ಲಿಯೇ ನಿಗದಿತ ಪಠ್ಯಕ್ರಮದೊಂದಿಗೆ ನೀಡಲಾಗುತ್ತದೆ. ಇದು ಸಾಂಪ್ರದಾಯಿಕ ಶಾಲಾ ಶಿಕ್ಷಣಕ್ಕೆ ಹೋಲುತ್ತದೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಬಡತನವನ್ನು ಮೆಟ್ಟಿನಿಂತು ಸಹೋದರಿಯರ ಸಾಧನೆ; ಅಕ್ಕ IAS, ತಂಗಿ IPS ಅಧಿಕಾರಿ
ಈ ವೀಡಿಯೊಗೆ ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಒಬ್ಬ ಬಳಕೆದಾರರು ಶಾಲಾ ಶಿಕ್ಷಣವನ್ನು ಟೀಕಿಸುತ್ತಾ, ‘ಶಾಲಾ ಶಿಕ್ಷಣವು ಕೇವಲ ಒಂದು ವ್ಯವಹಾರವಾಗಿದೆ’ ಎಂದು ಹೇಳಿದ್ದಾರ. ಮತ್ತೊಬ್ಬರು ‘ಶಾಲೆಗಳ ಉದ್ದೇಶ ಕೇವಲ ವಿಷಯಗಳನ್ನು ಕಲಿಸುವುದಲ್ಲ, ಬದಲಿಗೆ ಶಾಲೆಯು ಒಂದೇ ವಯಸ್ಸಿನ ಅನೇಕ ಮನಸ್ಸುಗಳು ಭೇಟಿಯಾಗುವ ಮತ್ತು ಪರಸ್ಪರ ಸಂವಹನದ ಮೂಲಕ ಜೀವನ ಪಾಠಗಳು ಮತ್ತು ನಡವಳಿಕೆಯ ಬೆಳವಣಿಗೆ ನಡೆಯುವ ಸ್ಥಳವಾಗಿದೆ’ ಎಂದು ಬರೆದುಕೊಂಡಿದ್ದಾರೆ. ಸದ್ಯ ವಿಡಿಯೋ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಶಿಕ್ಷಣಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:58 pm, Sun, 2 March 25




