AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿತ್ಯಾನಂದನಿಗೆ ನೀಡಿದ್ದ ಬ್ಲೂ ನೋಟೀಸ್ ಪ್ರಜ್ವಲ್ ವಿರುದ್ಧ ಬಳಕೆ ಸಾಧ್ಯತೆ; ಏಳು ಇಂಟರ್ಪೋಲ್ ನೋಟೀಸ್ ಬಗ್ಗೆ ತಿಳಿಯಿರಿ

Prajwal Revanna sex scandal case, Blue Corner Notice by Interpol: ಜರ್ಮನಿಯಲ್ಲಿರುವ ಜೆಡಿಎಸ್ ಸಂಸದ ಹಾಗೂ ಅತ್ಯಾಚಾರ ಆರೋಪಿ ಪ್ರಜ್ವಲ್ ರೇವಣ್ಣ ವಿರುದ್ಧ ಇಂಟರ್ಪೋಲ್​ನಲ್ಲಿ ಬ್ಲೂ ಕಾರ್ನರ್ ನೋಟೀಸ್ ಸಲ್ಲಿಸುವ ಸಾಧ್ಯತೆ ಇದೆ. ಒಂದು ದೇಶದಲ್ಲಿ ಅಪರಾಧ ಎಸಗಿ ಬೇರೆ ದೇಶದಲ್ಲಿರುವ ಆರೋಪಿ ಬಗ್ಗೆ ಹಾಗೂ ಅಲ್ಲಿನ ಆತನ ಚಟುವಟಿಕೆ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಪೊಲೀಸರು ಬ್ಲೂ ನೋಟೀಸ್ ನೀಡುತ್ತಾರೆ. ಇಂಟರ್ಪೋಲ್ ಎಂಬುದು ಅಂತಾರಾಷ್ಟ್ರೀಯವಾಗಿ ವಿವಿಧ ದೇಶಗಳ ಪೊಲೀಸರು ಮಾಡಿಕೊಂಡ ಸಹಕಾರವಾಗಿದೆ. ರೆಡ್, ಬ್ಲೂ ಸೇರಿದಂತೆ ಏಳು ಇಂಟರ್ಪೋಲ್ ನೋಟೀಸ್​ಗಳಿವೆ.

ನಿತ್ಯಾನಂದನಿಗೆ ನೀಡಿದ್ದ ಬ್ಲೂ ನೋಟೀಸ್ ಪ್ರಜ್ವಲ್ ವಿರುದ್ಧ ಬಳಕೆ ಸಾಧ್ಯತೆ; ಏಳು ಇಂಟರ್ಪೋಲ್ ನೋಟೀಸ್ ಬಗ್ಗೆ ತಿಳಿಯಿರಿ
ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟೀಸ್ ಜಾರಿ ಸಾಧ್ಯತೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 05, 2024 | 11:44 AM

Share

ಬೆಂಗಳೂರು, ಮೇ 5: ಅತ್ಯಾಚಾರ ಆರೋಪ ಮತ್ತು ಅಶ್ಲೀಲ ವಿಡಿಯೋ ರೆಕಾರ್ಡಿಂಗ್ ಪ್ರಕರಣಗಳಲ್ಲಿ ಪ್ರಮುಖ ಆರೋಪಿ ಹಾಗೂ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧ ಇಂಟರ್ಪೋಲ್​ನಲ್ಲಿ ಬ್ಲೂ ಕಾರ್ನರ್ ನೋಟೀಸ್ (Interpol blue corner notice) ಜಾರಿ ಮಾಡುವ ಸಾಧ್ಯತೆ ಇದೆ. ಪ್ರಜ್ವಲ್ ವಿರುದ್ಧ ನೀಲಿ ಬಣ್ಣದ ನೋಟೀಸ್ ಸಲ್ಲಿಸಲು ಸಿಬಿಐ ನಿರ್ಧರಿಸಿರುವುದು ಗೊತ್ತಾಗಿದೆ. ಎಂಪಿಯಾಗಿರುವ ಪ್ರಜ್ವಲ್ ತಮ್ಮ ರಾಜತಾಂತ್ರಿಕ ಪಾಸ್​​ಪೋರ್ಟ್ ಸೌಲಭ್ಯ ಬಳಸಿ ಜರ್ಮನಿಗೆ ಹೋಗಿದ್ದಾರೆ. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ದೃಶ್ಯಗಳಿರುವ ಪೆನ್ ಡ್ರೈವ್ ಪ್ರಕರಣ ಬೆಳಕಿಗೆ ಬಂದಿದೆ. ಏಪ್ರಿಲ್ 28ರಂದು ಈ ಪೆನ್ ಡ್ರೈವ್​ನಲ್ಲಿರುವ ಅನೇಕ ವಿಡಿಯೋಗಳು ಸಾರ್ವಜನಿಕರಿಗೆ ಲೀಕ್ ಆಗಿದೆ. ಎಸ್​ಐಟಿ ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ಪ್ರಜ್ವಲ್ ರೇವಣ್ಣಗೆ ವಿಚಾರಣೆಗೆ ಹಾಜರಾಗಬೇಕೆಂದು ನೋಟೀಸ್ ಕೊಟ್ಟಿದೆ. ಆದರೆ, ಜರ್ಮನಿಯಿಂದ ಪ್ರಜ್ವಲ್ ಇನ್ನೂ ಕೂಡ ಬಂದಿಲ್ಲ. ಈ ಕಾರಣಕ್ಕೆ ಇಂಟರ್​ಪೋಲ್​ನಲ್ಲಿ ಆತನ ವಿರುದ್ಧ ಬ್ಲೂ ಕಾರ್ನರ್ ನೋಟೀಸ್ ಕೊಡಲಾಗಿದೆ.

ಏನಿದು ಇಂಟರ್ಪೋಲ್ ಬ್ಲೂ ಕಾರ್ನರ್ ನೋಟೀಸ್?

ಇಂಟರ್ಪೋಲ್ ಎಂಬುದು ಪೊಲೀಸರ ಅಂತಾರಾಷ್ಟ್ರೀಯ ಸಹಕಾರದ ಒಂದು ವ್ಯವಸ್ಥೆ. ಒಂದು ದೇಶದಲ್ಲಿ ಅಪರಾಧ ಎಸಗಿ ಬೇರೆ ದೇಶಕ್ಕೆ ಹೋದ ಕ್ರಿಮಿನಲ್​ಗಳನ್ನು ಪತ್ತೆ ಮಾಡಲು, ಹೆಚ್ಚಿನ ಮಾಹಿತಿ ಪಡೆಯಲು ಇದು ಸಹಕಾರಿಯಾಗುತ್ತದೆ. ಇಂಟರ್ಪೋಲ್​ನಲ್ಲಿ ಏಳು ರೀತಿಯ ನೋಟೀಸ್​ಗಳಿರುತ್ತವೆ. ಅದರಲ್ಲಿ ಬ್ಲೂ ಕಾರ್ನರ್ ನೋಟೀಸ್ ಒಂದು.

ಬ್ಲೂ ಕಾರ್ನರ್ ನೋಟೀಸ್ ಎಂದರೆ ಒಂದು ದೇಶದಲ್ಲಿ ಅಪರಾಧ ಎಸಗಿ ಇನ್ನೊಂದು ದೇಶಕ್ಕೆ ಹೋಗಿರುವ ವ್ಯಕ್ತಿಯ ಬಗ್ಗೆ ಪ್ರಮುಖ ಮಾಹಿತಿ ಪಡೆಯಲು ನೆರವು ಕೋರುವುದಕ್ಕೆ ಬ್ಲೂ ಕಾರ್ನರ್ ನೋಟೀಸ್ ಎನ್ನುತ್ತಾರೆ. ಈಗ ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟೀಸ್ ಜಾರಿ ಮಾಡಿದರೆ, ಜರ್ಮನಿಯಲ್ಲಿರುವ ಪೊಲೀಸರು ಪ್ರಜ್ವಲ್ ಇರುವ ಸ್ಥಳವನ್ನು ಪತ್ತೆ ಮಾಡಿ, ಆತನ ಚಟುವಟಿಕೆ ಏನಿವೆ ಎಂಬ ಮಾಹಿತಿಯನ್ನು ಭಾರತೀಯ ಪೊಲೀಸ್ ಅಥವಾ ಸಿಬಿಐಗೆ ನೀಡುತ್ತಾರೆ.

ಇದನ್ನೂ ಓದಿ: ಅತ್ಯಾಚಾರ ಆರೋಪ, ಕಿಡ್ನ್ಯಾಪ್ ಕೇಸ್​: ಹೆಚ್​ಡಿ ರೇವಣ್ಣ ಮುಂದಿರುವ ಹಾದಿಗಳೇನು?

ಇಂಟರ್ಪೋಲ್​ನ ಏಳು ಬಗೆಯ ನೋಟೀಸ್​ಗಳ ಬಗ್ಗೆ ತಿಳಿಯಿರಿ

  1. ರೆಡ್ ಕಾರ್ನರ್ ನೋಟೀಸ್: ಅಪರಾಧಿಯನ್ನು ಬಂಧಿಸಲು ಕೋರುವ ನೋಟೀಸ್.
  2. ಯೆಲ್ಲೋ ನೋಟೀಸ್: ಕಾಣೆಯಾಗಿರುವ ವ್ಯಕ್ತಿಗಳನ್ನು ಪತ್ತೆ ಮಾಡಲು ನೀಡಲಾಗುವ ನೋಟೀಸ್.
  3. ಬ್ಲೂ ಕಾರ್ನರ್ ನೋಟೀಸ್: ಅಪರಾಧ ಪ್ರಕರಣದ ತನಿಖೆಯ ವೇಳೆ ಒಬ್ಬ ವ್ಯಕ್ತಿ ಗುರುತು, ಸ್ಥಳ ಅಥವಾ ಚಟುವಟಿಕೆ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಈ ನೋಟೀಸ್ ಕೊಡಲಾಗುತ್ತದೆ.
  4. ಬ್ಲ್ಯಾಕ್ ಕಾರ್ನರ್ ನೋಟೀಸ್: ಅಪರಿಚಿತ ಶವದ ಬಗ್ಗೆ ಮಾಹಿತಿ ಕೋರುವುದು.
  5. ಗ್ರೀನ್ ಕಾರ್ನರ್ ನೋಟೀಸ್: ಸಾರ್ವಜನಿಕವಾಗಿ ಅಪಾಯಕಾರಿಯಾಗಬಲ್ಲ ಒಬ್ಬ ವ್ಯಕ್ತಿಯ ಬಗ್ಗೆ ಎಚ್ಚರಿಸಲು ಈ ನೋಟೀಸ್ ಬಳಸಲಾಗುತ್ತದೆ.
  6. ಆರೆಂಜ್ ನೋಟೀಸ್: ಸಾರ್ವಜನಿ ಸುರಕ್ಷತೆಗೆ ಧಕ್ಕೆ ತರುವ ಸಾಧ್ಯತೆ ಇದ್ದರೆ ಆರೆಂಜ್ ನೋಟೀಸ್ ನೀಡಲಾಗುತ್ತದೆ. ಅದು ವ್ಯಕ್ತಿ, ವಸ್ತು, ಘಟನೆ, ವ್ಯವಸ್ಥೆ ಇತ್ಯಾದಿ ಯಾವುದೇ ಆಗಿರಬಹುದು.
  7. ಪರ್ಪಲ್ ನೋಟೀಸ್: ಅಪರಾಧಗಳಿಂದ ಬಳಕೆಯಾಗುವ ವಸ್ತು, ಸಾಧನ, ವಿಧಾನ ಇತ್ಯಾದಿ ಬಗ್ಗೆ ಮಾಹಿತಿ ಪಡೆಯಲು ಅಥವಾ ಮಾಹಿತಿ ನೀಡಲು ಈ ನೋಟೀಸ್ ಕೊಡಲಾಗುತ್ತದೆ.

ಇನ್ನಷ್ಟು ಕ್ರೈಂ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ