ಮೀರತ್ ಕೊಲೆ: ಮಗಳಿಗೆ ಕಾನೂನು ನೆರವು ನೀಡುವುದಿಲ್ಲ, ಅವಳೊಂದಿಗಿನ ಎಲ್ಲಾ ಸಂಬಂಧಗಳು ಕಟ್: ಮುಸ್ಕಾನ್ ತಾಯಿ
ಪ್ರಿಯಕರನ ಜತೆ ಸೇರಿ ಗಂಡನನ್ನು ಕೊಂದು ಜೈಲು ಸೇರಿರುವ ಮುಸ್ಕಾನ್ಗೆ ಯಾವುದೇ ಕಾನೂನು ನೆರವು ನೀಡುವುದಿಲ್ಲ, ಹಾಗೆಯೇ ಆಕೆಯೊಂದಿಗಿರುವ ಎಲ್ಲಾ ಸಂಬಂಧ ಕಡಿದುಕೊಳ್ಳುವುದಾಗಿ ಮುಸ್ಕಾನ್ ಪೋಷಕರು ಹೇಳಿದ್ದಾರೆ. ಉತ್ತರ ಪ್ರದೇಶದ ಮೀರತ್ನಲ್ಲಿ ಸೌರಭ್ ರಜಪೂತ್ ಎಂಬುವವರನ್ನು ಅವರ ಪತ್ನಿ ಮುಸ್ಕಾನ್ ತನ್ನ ಪ್ರಿಯಕರ ಸಾಹಿಲ್ ಜತೆ ಸೇರಿ ಕೊಲೆ ಮಾಡಿದ್ದಳು. ಬಳಿಕ 15 ತುಂಡುಗಳಾಗಿ ಕತ್ತರಿಸಿ ಡ್ರಂನೊಳಗಗೆ ಸಿಮೆಂಟ್ ಜತೆ ಇರಿಸಿ ಸೀಲ್ ಮಾಡಲಾಗಿತ್ತು.

ಮೀರತ್, ಮಾರ್ಚ್ 25: ಪ್ರಿಯಕರನ ಜತೆ ಸೇರಿ ಗಂಡನನ್ನು ಕೊಂದು ಜೈಲು ಸೇರಿರುವ ಮುಸ್ಕಾನ್ಗೆ ಯಾವುದೇ ಕಾನೂನು ನೆರವು ನೀಡುವುದಿಲ್ಲ, ಹಾಗೆಯೇ ಆಕೆಯೊಂದಿಗಿರುವ ಎಲ್ಲಾ ಸಂಬಂಧ ಕಡಿದುಕೊಳ್ಳುವುದಾಗಿ ಮುಸ್ಕಾನ್ ಪೋಷಕರು ಹೇಳಿದ್ದಾರೆ. ಉತ್ತರ ಪ್ರದೇಶದ ಮೀರತ್ನಲ್ಲಿ ಸೌರಭ್ ರಜಪೂತ್ ಎಂಬುವವರನ್ನು ಅವರ ಪತ್ನಿ ಮುಸ್ಕಾನ್ ತನ್ನ ಪ್ರಿಯಕರ ಸಾಹಿಲ್ ಜತೆ ಸೇರಿ ಕೊಲೆ ಮಾಡಿದ್ದಳು. ಬಳಿಕ 15 ತುಂಡುಗಳಾಗಿ ಕತ್ತರಿಸಿ ಡ್ರಂನೊಳಗಗೆ ಸಿಮೆಂಟ್ ಜತೆ ಇರಿಸಿ ಸೀಲ್ ಮಾಡಲಾಗಿತ್ತು.
ಈ ವಿಚಾರ ತಿಳಿದ ಪೋಷಕರು ಆತಂಕಕ್ಕೊಳಗಾಗಿದ್ದು ಆಕೆಯನ್ನು ಗಲ್ಲಿಗೇರಿಸಿ ಎಂದು ಮನವಿ ಮಾಡಿದ್ದಾರೆ, ಅಷ್ಟೇ ಅಲ್ಲ ಆಕೆಗೆ ಯಾವುದೇ ರೀತಿಯ ಕಾನೂನು ನೆರವು ನೀಡುವುದಿಲ್ಲ, ಆಕೆಯೊಂದಿಗಿರುವ ಎಲ್ಲಾ ಸಂಬಂಧಗಳನ್ನು ಕಡಿದುಕೊಳ್ಳುತ್ತೇವೆ ಎಂದು ತಾಯಿ ಕವಿತಾ ತಿಳಿಸಿದ್ದಾರೆ.
ಎಷ್ಟಿದ್ದರೂ ಆಕೆ ತಮ್ಮ ಮಗಳು ಭಾವನಾತ್ಮಕ ಸಂಬಂಧ ಅಷ್ಟು ಬೇಗ ಹೋಗುವಂತಥದ್ದಲ್ಲ ಹಾಗೆಂದ ಮಾತ್ರಕ್ಕೆ ಆಕೆ ಮಾಡಿರುವ ಕೆಲಸವನ್ನು ಬೆಂಬಲಿಸಲು ಸಾಧ್ಯವಿಲ್ಲ. ಸೌರಭ್ ಕುಟುಂಬವು ಮಾಡಿದ ಎಲ್ಲಾ ಆರ್ಥಿಕ ಅಕ್ರಮಗಳ ಆರೋಪಗಳನ್ನು ಮುಸ್ಕಾನ್ ಅವರ ಪೋಷಕರು ನಿರಾಕರಿಸಿದರು. ಈ ವಿಷಯದಲ್ಲಿ ನಮ್ಮ ಪಾತ್ರವೇನಿಲ್ಲ, ಸೌರಭ್ರಿಂದ ಪಡೆದ 1 ಲಕ್ಷ ರೂ.ನಲ್ಲಿ ಅರ್ಧದಷ್ಟು ಹಣವನ್ನು ಹಿಂಪಡೆಯಲಾಗಿದೆ ಎಂದು ಹೇಳಿದ್ದಾರೆ. ತಮ್ಮ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ ಎಂದು ಹೇಳಿದ್ದಾರೆ.
ಮತ್ತಷ್ಟು ಓದಿ: ಮೀರತ್: ಸೌರಭ್ನನ್ನು ಕೊಲೆ ಮಾಡಿ ಹಿಮಾಚಲಕ್ಕೆ ಟ್ರಿಪ್ಗೆ ಹೋಗಿ ಸಾಹಿಲ್, ಮುಸ್ಕಾನ್ ಮಾಡಿದ್ದೇನು?
ಕವಿತಾ ಮುಸ್ಕಾನ್ರ ಮಲತಾಯಿಯೇ? ಕವಿತಾ ಮುಸ್ಕಾನ್ ಅವರ ಮಲತಾಯಿಯೇ ಎಂದು ಕೇಳಿದಾಗ, ಅವರ ತಂದೆ ಆ ಹೇಳಿಕೆಯನ್ನು ನಿರಾಕರಿಸಿದರು. ನನ್ನ ಹೆಂಡತಿ ಮುಸ್ಕಾನ್ ಅವರ ಮಲತಾಯಿ ಎಂಬುದು ಸುಳ್ಳು. ಅವರು ಪೊಲೀಸ್ ಠಾಣೆಯಲ್ಲಿ ಕೋಪದಿಂದ ಹೀಗೆ ಹೇಳಿದ್ದಾರೆ.ಆದರೆ ಅದರಲ್ಲಿ ಯಾವುದೇ ಸತ್ಯವಿಲ್ಲ.ಮುಸ್ಕಾನ್ ತನ್ನ ಚಿಕ್ಕಮ್ಮನೊಂದಿಗೆ ಹೆಚ್ಚು ಒಡನಾಟ ಹೊಂದಿದ್ದಳು.
ಆಕೆಯನ್ನು ತಾಯಿಯಂತೆ ಕಾಣುತ್ತಿದ್ದಳು. ಆದರೆ ಆಕೆ ಈಗ ಬದುಕಿಲ್ಲ ಎಂದಿದ್ದಾರೆ. ಮುಸ್ಕಾನ್ ಬಿಡುಗಡೆಯಾಗಿ ಬಂದರೂ ಆಕೆಗೆ ಮನೆಗೆ ಪ್ರವೇಶವಿಲ್ಲ ಎಂದಿದ್ದಾರೆ. 2016ರಲ್ಲಿ ಸೌರಭ್ ಹಾಗೂ ಮುಸ್ಕಾನ್ ಪ್ರೀತಿಸಿ ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದರು. ಇದೀಗ ಮುಸ್ಕಾನ್ ಸರ್ಕಾರಿ ವಕೀಲರ ನೇಮಕದ ಬಗ್ಗೆ ಆಲೋಚಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:26 pm, Tue, 25 March 25