ಮೀರತ್ ಕೊಲೆ ಪ್ರಕರಣ; ಕೊಲೆಯಾದ ಗಂಡನ ಜೊತೆ ಹಂತಕಿ ಮುಸ್ಕಾನ್ ಡ್ಯಾನ್ಸ್ ಮಾಡಿದ ಹಳೇ ವಿಡಿಯೋ ವೈರಲ್
ಈ ವಿಡಿಯೋದಲ್ಲಿ ಕೊಲೆಗಾರ್ತಿ ಮುಸ್ಕಾನ್ ತನ್ನ ಮಗಳ ಹುಟ್ಟುಹಬ್ಬದಂದು ತನ್ನ ಪತಿ ಮತ್ತು ಮಗಳೊಂದಿಗೆ ನೃತ್ಯ ಮಾಡುತ್ತಿರುವುದನ್ನು ನೋಡಬಹುದು. ಮಗಳ ಹುಟ್ಟುಹಬ್ಬ ಆಚರಿಸಲು ಬಂದ ಸೌರಭ್ ತನ್ನ ಹೆಂಡತಿಯ ಕೈಯಲ್ಲೇ ಕೊಲೆಯಾಗಿದ್ದಾನೆ. ಈ ವೀಡಿಯೊವನ್ನು ಕೊಲೆ ನಡೆಯುವ ಮೊದಲು ಚಿತ್ರೀಕರಿಸಲಾಗಿದೆ. ಈ ನೃತ್ಯದ ವೀಡಿಯೋ ಪತಿ ಮತ್ತು ಪತ್ನಿಯ ನಡುವಿನ ಉತ್ತಮ ಬಾಂಧವ್ಯವನ್ನು ತೋರಿಸುತ್ತದೆ. ಆದರೂ ಆಕೆ ಗಂಡನನ್ನು ಕೊಂದಿದ್ದಾಳೆ.

ಮೀರತ್, ಮಾರ್ಚ್ 20: ಉತ್ತರ ಪ್ರದೇಶದ ಮೀರತ್‌ನಲ್ಲಿ ತನ್ನ ಪ್ರಿಯಕರನ ಜೊತೆ ಸೇರಿ ಮರ್ಚೆಂಟ್ ನೇವಿ ಅಧಿಕಾರಿಯಾದ ಪತಿಯನ್ನು ಕ್ರೂರವಾಗಿ ಕೊಂದ ಆರೋಪ ಹೊತ್ತಿರುವ ಪತ್ನಿ ತನ್ನ ಮಗಳೊಂದಿಗೆ ಗಂಡನ ಜೊತೆ ನೃತ್ಯ ಮಾಡುತ್ತಿರುವ ಕೆಲವು ದಿನಗಳ ಹಳೆಯ ವಿಡಿಯೋ ಇದೀಗ ವೈರಲ್ ಆಗಿದೆ. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಕೊಲೆಗಾರ್ತಿ ಮುಸ್ಕಾನ್ ತಮ್ಮ ಮಗಳ ಹುಟ್ಟುಹಬ್ಬದಂದು ತನ್ನ ಪತಿ ಮತ್ತು ಮಗಳೊಂದಿಗೆ ನೃತ್ಯ ಮಾಡುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಈ ವೀಡಿಯೊವನ್ನು ಕೊಲೆ ನಡೆಯುವ ಮೊದಲು ತೆಗೆಯಲಾಗಿದೆ.
ಗಂಡನ ಜೊತೆ ಅನ್ಯೋನ್ಯವಾಗಿ ಡ್ಯಾನ್ಸ್ ಮಾಡುತ್ತಿರುವ ಮುಸ್ಕಾನ್ ಅದಾದ ಕೆಲವೇ ದಿನಗಳಲ್ಲಿ ತನ್ನ ಗಂಡನ ಕೊಲೆ ಮಾಡಿದ್ದಾಳೆ. ಆಕೆ ತನ್ನ ಪ್ರಿಯಕರ ಸಾಹಿಲ್ ಜೊತೆ ಸೇರಿ ತನ್ನ ಗಂಡನ ಸೌರಭ್ ರಜಪೂತನನ್ನು ಕೊಂದು, ಆತನ ದೇಹವನ್ನು ತುಂಡುಗಳಾಗಿ ಕತ್ತರಿಸಿ, ಸಿಮೆಂಟ್ ತುಂಬಿದ ಪ್ಲಾಸ್ಟಿಕ್ ಡ್ರಮ್ ಒಳಗೆ ಮುಚ್ಚಿದ್ದಾಳೆ. ಬಳಿಕ ಸಾಹಿಲ್ ಜೊತೆ ಮದುವೆಯಾಗಿ ಶಿಮ್ಲಾಗೆ ಹನಿಮೂನ್ ಗೆ ಕೂಡ ಹೋಗಿ ಬಂದಿದ್ದಾಳೆ.
#Meerut : प्रेमी संग मिल पति की निर्मम हत्या का मामला
पत्नी मुस्कान की डांस करते वीडियो आई सामने
मृतक पति सौरभ संग जमकर नाच रही पत्नी मुस्कान
ब्रह्मपुरी थाना क्षेत्र के इंदिरा नगर में हुई थी सनसनीखेज़ वारदात#MeerutNews #Muskan #Crime #meerutmurder #muskanrastogi #sahilshukla… pic.twitter.com/Itlxpyanjh
— News1India (@News1IndiaTweet) March 20, 2025
ಇದನ್ನೂ ಓದಿ: ಮೀರತ್: ಮಾಡದ ತಪ್ಪಿಗೆ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿ ಕಾನೂನು ಹೋರಾಟ ನಡೆಸುತ್ತಲೇ ವಕೀಲನಾದ ಯುವಕ!
ಆದರೆ, ಸೌರಭ್ ಅವರ ಸಹೋದರ ತನ್ನ ಅಣ್ಣ ನಾಪತ್ತೆಯಾಗಿದ್ದಾನೆಂದು ದೂರು ನೀಡಿದ ನಂತರ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಬ್ರಹ್ಮಪುರಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಇಂದಿರಾನಗರ ಪ್ರದೇಶದಲ್ಲಿ ಈ ಭಯಾನಕ ಘಟನೆ ನಡೆದಿದೆ. ನೇವಿ ಅಧಿಕಾರಿಯಾಗಿದ್ದ ಸೌರಭ್ ಲಂಡನ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅವರು ಇತ್ತೀಚೆಗೆ ಮೀರತ್‌ಗೆ ಮರಳಿದ್ದರು. ಸೌರಭ್ 2016ರಲ್ಲಿ ಮುಸ್ಕಾನ್ ರಸ್ತೋಗಿ ಅವರನ್ನು ಪ್ರೀತಿಸಿ ವಿವಾಹವಾದರು. ಕಳೆದ ಮೂರು ವರ್ಷಗಳಿಂದ ಮೀರತ್‌ನಲ್ಲಿ ಬಾಡಿಗೆ ಮನೆಯಲ್ಲಿ ತಮ್ಮ 5 ವರ್ಷದ ಮಗಳೊಂದಿಗೆ ವಾಸಿಸುತ್ತಿದ್ದರು. ಸೌರಭ್ ಅವರನ್ನು ಕೊನೆಯ ಬಾರಿಗೆ ಮಾರ್ಚ್ 4 ರಂದು, ಅಂದರೆ ಅವರು ಕೊಲೆಯಾದ ದಿನ ಕೆಲವರು ನೋಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Muskan Rastogi brut@lly k!lled her husband Saurabh Rajput with the help of her boyfriend Sahil Shukla in Meerut, UP
Godi media is not interested in this case as no Muslim involved in this
After 2014 Religion of Criminal is more important than Crime 🙌 pic.twitter.com/YyNZ8kmJ85
— Veena Jain (@DrJain21) March 19, 2025
ತಮ್ಮ ಮಗಳ ಹುಟ್ಟುಹಬ್ಬಕ್ಕೆ ಸೌರಭ್ ಭಾರತಕ್ಕೆ ಬಂದಿದ್ದರು. ಮುಸ್ಕಾನ್ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಮಾರ್ಚ್ 4ರಂದು ಸೌರಭ್‌ಗೆ ಇರಿದು ಕೊಂದಿದ್ದಾಗಿ ಒಪ್ಪಿಕೊಂಡಿದ್ದಾರೆ. ನಂತರ ಅವರು ಮೃತ ದೇಹವನ್ನು ಕತ್ತರಿಸಿ, ಶವದ ತುಂಡುಗಳನ್ನು ಪ್ಲಾಸ್ಟಿಕ್ ಡ್ರಮ್‌ನಲ್ಲಿ ಇರಿಸಿ, ಅಪರಾಧವನ್ನು ಮರೆಮಾಡಲು ಸಿಮೆಂಟ್‌ನಿಂದ ತುಂಬಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಮೀರತ್: ಪ್ರಿಯಕರನ ಜತೆ ಸೇರಿ ಪತಿಯ ಕೊಲೆಗೈದ ಮಹಿಳೆ, ದೇಹವನ್ನು 15 ತುಂಡುಗಳಾಗಿ ಕತ್ತರಿಸಿ ಡ್ರಮ್‌ನಲ್ಲಿ ಸೀಲ್
ಮುಸ್ಕಾನ್ ಅವರ ತಾಯಿ ಪೊಲೀಸರನ್ನು ಸಂಪರ್ಕಿಸಿ ತನ್ನ ಮಗಳು ತಮ್ಮ ಅಳಿಯನನ್ನು ಕೊಲೆ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾಳೆಂದು ಹೇಳಿದಾಗ ಕೊಲೆ ಬೆಳಕಿಗೆ ಬಂದಿತು. ಪೊಲೀಸರು ಕೊಲೆಯ ಇಬ್ಬರು ಆರೋಪಿಗಳನ್ನು ಬಂಧಿಸಿದರು, ನಂತರ ಅವರು ಡ್ರಮ್ ಇಟ್ಟಿದ್ದ ಮನೆಗೆ ಕರೆದೊಯ್ದರು. ಪೊಲೀಸರು ಡ್ರಮ್ ಅನ್ನು ಕತ್ತರಿಸಿ ತೆರೆದಾಗ ಸೌರಭ್ ಅವರ ಮೃತದೇಹ ಒಳಗಿನಿಂದ ಪತ್ತೆಯಾಗಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ