AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗಳನ್ನು ಗಲ್ಲಿಗೇರಿಸಿ ಎಂದು ಕಣ್ಣೀರಿಟ್ಟ, ಪತಿಯ ಕೊಂದು ತುಂಡರಿಸಿದ್ದ ಮಹಿಳೆಯ ಪೋಷಕರು

ಪತಿಯನ್ನು ಕೊಂದು ತುಂಡರಿಸಿದ್ದ ಮಹಿಳೆಯ ಪೋಷಕರು ಆಕೆಯನ್ನು ಗಲ್ಲಿಗೇರಿಸುವಂತೆ ಒತ್ತಾಯಿಸಿದ್ದಾರೆ. ತಮ್ಮ ಅಳಿಯ ಮಗಳನ್ನು ತುಂಬಾ ಪ್ರೀತಿಸುತ್ತಿದ್ದ. ಆದರೆ ಆತನ ಪ್ರೀತಿಗೆ ಆಕೆ ಮೋಸ ಮಾಡಿದ್ದಾಳೆ. ಆಕೆಗೆ ಬದುಕುವ ಹಕ್ಕಿಲ್ಲ. ಆಕೆಗಾಗಿ ಆತ ಕೆಲಸ ಮತ್ತು ಪೋಷಕರು ಇಬ್ಬರಿಂದಲೂ ದೂರವಾಗಿದ್ದ. ಆದರೆ ಆತನ ಒಳ್ಳೆಯ ಗುಣ ಆಕೆಗೆ ಅರ್ಥವೇ ಆಗಲಿಲ್ಲ ಎಂದು ಕಣ್ಣೀರಿಟ್ಟಿದ್ದು, ಸೌರಭ್ ಪೋಷಕರ ನ್ಯಾಯಕ್ಕಾಗಿ ಹೋರಾಟಕ್ಕೆ ನಾವು ಬೆಂಬಲ ನೀಡುತ್ತೇವೆ ಎಂದರು.

ಮಗಳನ್ನು ಗಲ್ಲಿಗೇರಿಸಿ ಎಂದು ಕಣ್ಣೀರಿಟ್ಟ, ಪತಿಯ ಕೊಂದು ತುಂಡರಿಸಿದ್ದ ಮಹಿಳೆಯ ಪೋಷಕರು
ಆರೋಪಿ ಮಹಿಳೆಯ ಪೋಷಕರು
ನಯನಾ ರಾಜೀವ್
|

Updated on:Mar 20, 2025 | 11:21 AM

Share

ಮೀರತ್, ಮಾರ್ಚ್​ 20: ‘‘ನನ್ನ ಮಗಳನ್ನು ಗಲ್ಲಿಗೇರಿಸಿ ಆಕೆಗೆ ಬದುಕುವ ಅರ್ಹತೆ ಇಲ್ಲ’’ ಎಂದು ಆರೋಪಿ ಮಹಿಳೆ ಮುಸ್ಕಾನ್ ಪೋಷಕರು ಕಣ್ಣೀರಿಟ್ಟಿದ್ದಾರೆ. ಉತ್ತರ ಪ್ರದೇಶದ ಮೀರತ್​ನಲ್ಲಿ ಮಹಿಳೆಯೊಬ್ಬಳು ಪ್ರಿಯಕರನ ಸಹಾಯದಿಂದ ಪತಿಯನ್ನು ಕೊಂದು 15 ತುಂಡುಗಳಾಗಿ ಕತ್ತರಿಸಿ ಡ್ರಮ್​ನಲ್ಲಿಟ್ಟು ಸಿಮೆಂಟ್​ ಹಾಕಿ ಸೀಲ್ ಮಾಡಿರುವ ಘಟನೆ ನಡೆದಿತ್ತು.

ಈ ಕುರಿತು ಆಕೆಯ ಪೋಷಕರು ಪ್ರತಿಕ್ರಿಯೆ ನೀಡಿದ್ದು, ಆಕೆಗೆ ಬದುಕುವ ಯಾವ ಯೋಗ್ಯತೆಯೂ ಇಲ್ಲ, ಆಕೆಯನ್ನು ಗಲ್ಲಿಗೇರಿಸಿ ಎಂದು ಮನವಿ ಮಾಡಿದ್ದಾರೆ. ಹಾಗೆಯೇ ನ್ಯಾಯಕ್ಕಾಗಿ ಸೌರಭ್ ಕುಟುಂಬದ ಹೋರಾಟದಲ್ಲಿ ನಾವು ಅವರಿಗೆ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದಾರೆ.

ಪ್ರಕರಣದ ತನಿಖೆಯು ಸೌರಭ್ ರಜಪೂತ್ ಅವರ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ನಡುವಿನ ವಿವಾಹೇತರ ಸಂಬಂಧವನ್ನು ಬೆಳಕಿಗೆ ತಂದಿತು. ಸೌರಭ್​ ತಮ್ಮ ಮಗಳನ್ನು ಕಣ್ಣುಮುಚ್ಚಿ ನಂಬುತ್ತಿದ್ದ, ಪ್ರತಿ ಹಂತದಲ್ಲೂ ಆಕೆಗೆ ಬೆಂಬಲ ನೀಡುತ್ತಿದ್ದ.

ಇದನ್ನೂ ಓದಿ
Image
ದೆಹಲಿಯಲ್ಲಿ ವೃದ್ಧ ದಂಪತಿಯ ಬರ್ಬರ ಹತ್ಯೆ
Image
ಇಬ್ಬರು ಹೆಂಡರ ನೀಚ ಗಂಡ: ಬಾಬುನ ಕ್ರೌರ್ಯಕ್ಕೆ ನರಳಿ ನರಳಿ ಪ್ರಾಣಬಿಟ್ಟಳು!
Image
ಅಮ್ಮನಿಗೆ ಬೈದಿದ್ದಕ್ಕೆ ಮಾವನನ್ನೇ ಕೊಂದ ಪುತ್ರ!
Image
ಮನೆಯ ಬಾವಿಯಲ್ಲಿ 4 ತಿಂಗಳ ಹೆಣ್ಣು ಮಗುವಿನ ಶವ ಪತ್ತೆ, ಕೊಂದಿದ್ಯಾರು?

ನಮ್ಮ ಮಗಳೇ ಸಮಸ್ಯೆಯಾಗಿದ್ದಳು. ಅವಳು ಅವನನ್ನು ಅವನ ಕುಟುಂಬದಿಂದ ಬೇರ್ಪಡಿಸಿದಳು. ಮತ್ತು ಈಗ ಅವಳು ಹೀಗೆ ಮಾಡಿದ್ದಾಳೆ. ಅವನು ಎಲ್ಲವನ್ನೂ ಪಣಕ್ಕಿಟ್ಟು, ತನ್ನ ಹೆತ್ತವರನ್ನು, ಅವರ ಕೋಟಿಗಟ್ಟಲೆ ಮೌಲ್ಯದ ಆಸ್ತಿಯನ್ನು ಬಿಟ್ಟುಹೋದ. ಈಗ ಆತನನ್ನೇ ಕೊಲೆ ಮಾಡಿದ್ದಾಳೆ.

ಮತ್ತಷ್ಟು ಓದಿ: ಮೀರತ್‌: ಪ್ರಿಯಕರನ ಜತೆ ಸೇರಿ ಪತಿಯ ಕೊಲೆಗೈದ ಮಹಿಳೆ, ದೇಹವನ್ನು 15 ತುಂಡುಗಳಾಗಿ ಕತ್ತರಿಸಿ ಡ್ರಮ್‌ನಲ್ಲಿ ಸೀಲ್

ಸೌರಭ್ ರಜಪೂತ್ ಮತ್ತು ಮುಸ್ಕಾನ್ ರಸ್ತೋಗಿ 2016 ರಲ್ಲಿ ಪ್ರೇಮ ವಿವಾಹವಾದರು, ನಂತರ ಮರ್ಚೆಂಟ್ ನೇವಿ ಅಧಿಕಾರಿ ತನ್ನ ಹೆಂಡತಿಯೊಂದಿಗೆ ಹೆಚ್ಚು ಸಮಯ ಕಳೆಯಲು ತನ್ನ ಕೆಲಸವನ್ನು ಬಿಟ್ಟಿದ್ದ, ಅವರು ಅವಳಿಗಾಗಿ ತಮ್ಮ ಕುಟುಂಬವನ್ನು ದೂರವಿಟ್ಟರು. 2019 ರಲ್ಲಿ, ಮುಸ್ಕಾನ್ ಮತ್ತು ಸೌರಭ್ ಅವರಿಗೆ ಒಂದು ಹೆಣ್ಣು ಮಗು ಜನಿಸಿತು, ನಂತರ ಮುಸ್ಕಾನ್ ತನ್ನ ಸ್ನೇಹಿತ ಸಾಹಿಲ್ ಜೊತೆ ಸಂಬಂಧ ಹೊಂದಿದ್ದಾಳೆಂದು ಸೌರಭ್​ಗೆ ಗೊತ್ತಾಯಿತು. ಇದರಿಂದ ಅವರಿಬ್ಬರ ನಡುವೆ ಜಗಳ ಹೆಚ್ಚಾಗಿತ್ತು. ಇಅಂತಿಮವಾಗಿ, ಸೌರಭ್ ಮತ್ತೆ ಮರ್ಚೆಂಟ್ ನೇವಿ ಸೇರಲು ನಿರ್ಧರಿಸಿದ್ದ.

ಫೆಬ್ರವರಿ 28 ರಂದು ಸೌರಭ್ ಅವರ ಮಗಳಿಗೆ ಆರು ವರ್ಷ ತುಂಬಿತು, ಆಕೆಯ ತಂದೆ ಲಂಡನ್‌ನಿಂದ ಮನೆಗೆ ಮರಳಿದರು. ಮುಸ್ಕಾನ್ ಮತ್ತು ಸಾಹಿಲ್ ಪೊಲೀಸರಿಗೆ ನೀಡಿದ ಹೇಳಿಕೆಯ ಪ್ರಕಾರ, ಸೌರಭ್‌ನನ್ನು ಕೊಲೆ ಮಾಡಲು ನಿರ್ಧರಿಸಿದ್ದರು. ಮಾರ್ಚ್ 4 ರಂದು ಮುಸ್ಕಾನ್ ಸೌರಭ್‌ನ ಆಹಾರದಲ್ಲಿ ನಿದ್ರೆ ಮಾತ್ರೆಗಳನ್ನು ಬೆರೆಸಿ ಮಲಗಿದ್ದಾಗ  ಅವಳು ಮತ್ತು ಸಾಹಿಲ್ ಅವನನ್ನು ಚಾಕುವನ್ನು ಚುಚ್ಚಿ ಕೊಲೆ ಮಾಡಿದ್ದಾರೆ.

ಇದರ ನಂತರ, ಮುಸ್ಕಾನ್ ಮತ್ತು ಸಾಹಿಲ್ ದೇಹವನ್ನು ಕತ್ತರಿಸಿ, ಡ್ರಮ್‌ನಲ್ಲಿ ತುಂಡುಗಳನ್ನು ಹಾಕಿ, ಸಿಮೆಂಟಿನಿಂದ ಮುಚ್ಚಿ ದೇಹವನ್ನು ವಿಲೇವಾರಿ ಮಾಡಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:11 am, Thu, 20 March 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ