ಕೇರಳ: ಮನೆಯ ಬಾವಿಯಲ್ಲಿ 4 ತಿಂಗಳ ಹೆಣ್ಣು ಮಗುವಿನ ಶವ ಪತ್ತೆ, ಕೊಂದಿದ್ಯಾರು?
ಮನೆಯ ಬಾವಿಯೊಂದರಲ್ಲಿ 4 ತಿಂಗಳ ಹೆಣ್ಣು ಮಗುವಿನ ಶವ ಪತ್ತೆಯಾಗಿರುವ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ವಲಸೆ ಕಾರ್ಮಿಕರು ವಾಸಿಸುತ್ತಿದ್ದ ಬಾಡಿಗೆ ಮನೆಯ ಬಾವಿಯಲ್ಲಿ ತಮಿಳುನಾಡಿನ ದಂಪತಿಗಳ ನಾಲ್ಕು ತಿಂಗಳ ಹೆಣ್ಣು ಮಗು ಶವವಾಗಿ ಪತ್ತೆಯಾಗಿದೆ. ಮಗುವನ್ನು ಕೊಲೆ ಮಾಡಿರುವುದು 12 ವರ್ಷದ ಬಾಲಕಿ ಎಂಬುದು ತಿಳಿದುಬಂದಿದೆ, ಆಕೆ ಕೂಡ ಅದೇ ಕುಟುಂಬದವಳಾಗಿದ್ದು, ಮಗು ಬಂದಿದ್ದರಿಂದ ಕುಟುಂಬದವರಿಗೆ ತನ್ನ ಮೇಲಿನ ಪ್ರೀತಿ ಕಡಿಮೆಯಾಗಿದೆ ಎಂದು ಭಾವಿಸಿ ಮಗುವನ್ನು ಕೊಲೆ ಮಾಡಿದ್ದಾಳೆ.

ಕೇರಳ, ಮಾರ್ಚ್ 19: ಮನೆಯ ಬಾವಿಯೊಂದರಲ್ಲಿ 4 ತಿಂಗಳ ಹೆಣ್ಣು ಮಗುವಿನ ಶವ ಪತ್ತೆಯಾಗಿರುವ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ವಲಸೆ ಕಾರ್ಮಿಕರು ವಾಸಿಸುತ್ತಿದ್ದ ಬಾಡಿಗೆ ಮನೆಯ ಬಾವಿಯಲ್ಲಿ ತಮಿಳುನಾಡಿನ ದಂಪತಿಗಳ ನಾಲ್ಕು ತಿಂಗಳ ಹೆಣ್ಣು ಮಗು ಶವವಾಗಿ ಪತ್ತೆಯಾಗಿದೆ. ಮಗುವನ್ನು ಕೊಲೆ ಮಾಡಿರುವುದು 12 ವರ್ಷದ ಬಾಲಕಿ ಎಂಬುದು ತಿಳಿದುಬಂದಿದೆ, ಆಕೆ ಕೂಡ ಅದೇ ಕುಟುಂಬದವಳಾಗಿದ್ದು, ಮಗು ಬಂದಿದ್ದರಿಂದ ಕುಟುಂಬದವರಿಗೆ ತನ್ನ ಮೇಲಿನ ಪ್ರೀತಿ ಕಡಿಮೆಯಾಗಿದೆ ಎಂದು ಭಾವಿಸಿ ಮಗುವನ್ನು ಕೊಲೆ ಮಾಡಿದ್ದಾಳೆ.
ಆಕೆ ಅನಾಥೆಯಾಗಿದ್ದು, ಮಗುವಿನ ಪೋಷಕರು, ಆಕೆಯ ಚಿಕ್ಕಪ್ಪ ಮತ್ತು ಚಿಕ್ಕಮ್ಮನೊಂದಿಗೆ ವಾಸಿಸುತ್ತಿದ್ದಳು. ಈ ಮಗು ಬಂದ ಮೇಲೆ ಎಲ್ಲರೂ ಮಗುವನ್ನೇ ಹೆಚ್ಚು ಇಷ್ಟ ಪಡುತ್ತಿದ್ದಾರೆಂದು ತಪ್ಪು ಭಾವಿಸಿ ಈ ಕೃತ್ಯವೆಸಗಿದ್ದಾಳೆ.
ರಾತ್ರಿ ಮಲಗಿದ್ದಾಗ ಶಿಶುವನ್ನು ಎತ್ತಿಕೊಂಡು ಹೋಗಿ, ಬಾಡಿಗೆ ಮನೆಯ ಬಳಿ ಇರುವ ಬಾವಿಗೆ ಎಸೆದಿದ್ದಾಳೆ ಎಂದು ಆರೋಪಿಸಲಾಗಿದೆ. ಕೇರಳಕ್ಕೆ ಕೆಲಸಕ್ಕಾಗಿ ವಲಸೆ ಬಂದಿದ್ದ ದಂಪತಿ ರಾತ್ರಿ 9.30ರ ಸುಮಾರಿಗೆ ತಮ್ಮ ಮನೆಯ ಹಾಲ್ನಲ್ಲಿ ಮಲಗಿದ್ದರು. ರಾತ್ರಿ 11 ಗಂಟೆ ಸುಮಾರಿಗೆ ಮಗುವಿನ ತಾಯಿ ಎಚ್ಚರಗೊಂಡಾಗ ಮಗು ಇಲ್ಲದಿರುವುದನ್ನು ಕಂಡು ಪತಿಗೆ ತಿಳಿಸಿದ್ದಾಳೆ.
ಮತ್ತಷ್ಟು ಓದಿ: ರಾಯಚೂರನ್ನೇ ಬೆಚ್ಚಿಬೀಳಿಸಿದ್ದ ಭೀಕರ ಕೊಲೆ: 31 ಬಾರಿ ಇರಿದು ಕೊಂದವರು ಸಿಕ್ಕಿಬಿದ್ದರು
ನಂತರ ಮಗುವಿನ ಶವ ಬಾವಿಯಲ್ಲಿರುವುದು ಪತ್ತೆಯಾಗಿದೆ. ಮನೆ ಒಳಗಿಂದ ಲಾಕ್ ಆಗಿದ್ದರಿಂದ ಆ ಬಾಲಕಿ ಮೇಲೆ ಎಲ್ಲರಿಗೂ ಅನುಮಾನ ಬಂದಿತ್ತು, ವಿಚಾರಣೆ ನಡೆಸಿದಾಗ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ಶಿಶುವಿನ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಣ್ಣೂರು ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.
ಮತ್ತೊಂದು ಘಟನೆಯಲ್ಲಿ, ಹೈದರಾಬಾದ್‌ನ ಅಪಾರ್ಟ್‌ಮೆಂಟ್ ಕಟ್ಟಡವೊಂದರಲ್ಲಿ ಸಂಭವಿಸಿದ ಅಪಘಾತದಲ್ಲಿ ನಾಲ್ಕು ವರ್ಷದ ಬಾಲಕನೊಬ್ಬ ಲಿಫ್ಟ್‌ನಲ್ಲಿ ಸಿಲುಕಿಕೊಂಡು ಸಾವನ್ನಪ್ಪಿದ್ದಾನೆ. ಅಪಘಾತ ಸಂಭವಿಸಿದಾಗ ಅಪಾರ್ಟ್‌ಮೆಂಟ್ ಸಂಕೀರ್ಣದ ಲಿಫ್ಟ್ ಪ್ರದೇಶದ ಬಳಿ ಆಟವಾಡುತ್ತಿದ್ದ ಎಂದು ವರದಿಯಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ