Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಮಾರಸ್ವಾಮಿಯವರನ್ನು 30 ವರ್ಷಗಳಿಂದ ಭೇಟಿಯಾಗುತ್ತಿದ್ದೇನೆ, ವಿಶೇಷವೇನೂ ಇಲ್ಲ: ಸತೀಶ್ ಜಾರಕಿಹೊಳಿ

ಕುಮಾರಸ್ವಾಮಿಯವರನ್ನು 30 ವರ್ಷಗಳಿಂದ ಭೇಟಿಯಾಗುತ್ತಿದ್ದೇನೆ, ವಿಶೇಷವೇನೂ ಇಲ್ಲ: ಸತೀಶ್ ಜಾರಕಿಹೊಳಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 29, 2025 | 12:58 PM

ಬೆಂಗಳೂರು ಮೂಲದ ಮಹಾನ್ ನಾಯಕ ಹನಿ ಟ್ರ್ಯಾಪ್ ಪ್ರಕರಣದ ಹಿಂದಿದ್ದಾರೆ, ಇಂಥ ಪ್ರಕರಣಗಳು ಬೆಳಕಿಗೆ ಬಂದಾಗಲೆಲ್ಲ ಮಹಾನ್ ನಾಯಕನ ಹೆಸರು ಪ್ರಸ್ತಾಪವಾಗುತ್ತದೆ, ಯಾರು ಆ ಮಹಾನ್ ನಾಯಕ ಅಂತ ಕೇಳಿದ ಪ್ರಶ್ನೆಗೆ ಜಾರಕಿಹೊಳಿ, ಅದೆಲ್ಲ ತನಗೆ ಹೇಗೆ ಗೊತ್ತಾಗುತ್ತದೆ, ಪೊಲೀಸರು ತನಿಖೆ ಮಾಡಿ ಪ್ರಕರಣದ ಹಿಂದೆ ಯಾರಿದ್ದಾರೆ ಅಂತ ಹೇಳಬೇಕು ಎಂದು ಹೇಳಿದರು.

ಬೆಂಗಳೂರು, ಮಾರ್ಚ್ 29: ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯವರನ್ನು (HD Kumaraswamy) ಮೂವತ್ತು ವರ್ಷಗಳಿಂದ ಭೇಟಿಯಾಗುತ್ತಿದ್ದೇನೆ, ಅದರಲ್ಲಿ ವಿಶೇಷವೇನೂ ಇಲ್ಲ, ಅವರನ್ನು ಯಾಕೆ ಭೇಟಿಯಾಗಿದ್ದು ಅಂತ ನಿನ್ನೆಯೇ ಎಲ್ಲವನ್ನೂ ಹೇಳಿದ್ದೇನೆ, ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅವಶ್ಯಕತೆಯೂ ಇಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಕೆಪಿಸಿಸಿ ಅಧ್ಯಕ್ಷೀಯ ಸ್ಥಾನದ ಬಗ್ಗೆ ಮಾತಾಡಿದ ಸಚಿವ, ಸದ್ಯಕ್ಕಂತೂ ಅಧ್ಯಕ್ಷರಿದ್ದಾರೆ ಮತ್ತು ಅವರು ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ, ಅಧ್ಯಕ್ಷರ ಬದಲಾವಣೆ ಅಥವಾ ಪೂರ್ಣಾವಧಿಗೆ ಶಿವಕುಮಾರ್ ಮುಂದುವರಿಕೆ ತಮ್ಮ ಸುಪರ್ದಿಯಲ್ಲಿರದ ಸಂಗತಿ ಎಂದರು.

ಇದನ್ನೂ ಓದಿ:  ಓರ್ವ ​ ಮಂತ್ರಿಯನ್ನೇ ಹನಿಟ್ರ್ಯಾಪ್​ ಮಾಡಿದ್ದಾರೆ: ಸಚಿವ ಸತೀಶ್ ಜಾರಕಿಹೊಳಿ ಬಾಂಬ್​..!

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ