Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಮಶೇಖರ್ ಕೇವಲ ತಾಂತ್ರಿಕವಾಗಿ ಬಿಜೆಪಿ ಶಾಸಕ, ಭಾವನಾತ್ಮವಾಗಿ ಆತ ಕಾಂಗ್ರೆಸ್ ಜೊತೆಗಿದ್ದಾನೆ: ಸಿಟಿ ರವಿ

ಸೋಮಶೇಖರ್ ಕೇವಲ ತಾಂತ್ರಿಕವಾಗಿ ಬಿಜೆಪಿ ಶಾಸಕ, ಭಾವನಾತ್ಮವಾಗಿ ಆತ ಕಾಂಗ್ರೆಸ್ ಜೊತೆಗಿದ್ದಾನೆ: ಸಿಟಿ ರವಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 12, 2025 | 12:33 PM

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕ್ರಿಮಿನಲ್​ಗಳಿಗೆ ಹೆಚ್ಚಿನ ಮಹತ್ವ ಸಿಕ್ಕಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಟಿವಿ9 ವರದಿಗಾರನಿಗೆ ಹೇಳಿದರು. ಕಾಂಗ್ರೆಸ್ ಸರ್ಕಾರವು ಜಿಲ್ಲಾ ಮತ್ತು ರಾಜ್ಯಮಟ್ಟದ ತನ್ನ ಕಾರ್ಯಕರ್ತರಿಗೆ ಸರ್ಕಾರೀ ನೌಕರರಿಗೆ ಕೊಡುವ ಹಾಗೆ ಸಂಬಳ ನೀಡುತ್ತಿರುವುದನ್ನು ಪ್ರಶ್ನಿಸಿ ಇಂದು ಬಿಜೆಪಿಯ ಶಾಸಕರು ವಿಧಾನ ಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದರು.

ಬೆಂಗಳೂರು, ಮಾರ್ಚ್ 12: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಅಂತ ಬಿಜೆಪಿ ಶಾಸಕರು ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರೆ, ಅದೇ ಪಕ್ಷದ ಶಾಸಕ ಎಸ್ ಟಿ ಸೋಮಶೇಖರ್ (ST Somashekhar), ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣನದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಮಂತ್ರಿಗಳೂ ಭಾಗಿಯಾಗಿರಬಹುದು ಅಂತ ಆರೋಪಿಸಿದ್ದಾರೆ. ಈ ಬಗ್ಗೆ ಸಿಟಿ ರವಿಯವರನ್ನು ನಮ್ಮ ಪ್ರತಿನಿಧಿ ಕೇಳಿದಾಗ, ಸೋಮಶೇಖರ್ ಕೇವಲ ತಾಂತ್ರಿಕವಾಗಿ ಬಿಜೆಪಿ ಶಾಸಕ, ಭಾವನಾತ್ಮಕವಾಗಿ ಅವರು ಯಾವತ್ತಿನಿಂದಲೋ ಕಾಂಗ್ರೆಸ್ ಜತೆಗಿದ್ದಾರೆ, ಕಾಂಗ್ರೆಸ್ ಬಗ್ಗೆ ಅಷ್ಟೆಲ್ಲ ಪ್ರೀತಿಯಿದ್ದರೆ ಅವರು ಬಿಜೆಪಿ ಬಿಟ್ಟು ಹೋಗಲಿ ಎಂದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ರನ್ಯಾ ರಾವ್ ಪ್ರಕರಣದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಮಂತ್ರಿಗಳು ಯಾಕೆ ಭಾಗಿಯಾಗಿರಬಾರದು? ಎಸ್​ಟಿ ಸೋಮಶೇಖರ್