ಶಾಸಕರನ್ನು ಶಿಕ್ಷಿಸುವ ಅಧಿಕಾರ ಸ್ಪೀಕರ್ಗೆ ಇರೋದಿಲ್ಲ, ಕರ್ನಾಟಕ ಇತಿಹಾಸದಲ್ಲಿ ಮೊದಲ ಬಾರಿಗೆ ಹೀಗಾಗಿದೆ: ವಿಶ್ವೇಶ್ವರ ಹೆಗಡೆ ಕಾಗೇರಿ
ಕರ್ನಾಟಕ ಸಂಸದೀಯ ಪರಂಪರೆಗೆ ಬಹು ದೊಡ್ಡ ಇತಿಹಾಸವಿದೆ, ಸ್ಪೀಕರ್ಗಳು ಯಾವತ್ತೂ ನ್ಯಾಯಾಂಗವಲ್ಲ, ಹಾಗಾಗಿ ಶಾಸಕರರನ್ನು ಶಿಕ್ಷೆಗೊಳಪಡಿಸುವ ಅಧಿಕಾರ ವ್ಯಾಪ್ತಿ ಅವರಿಗಿರುವುದಿಲ್ಲ, ಓ ಹಿನ್ನೆಲೆಯಲ್ಲಿ ಸಭಾಧ್ಯಕ್ಷ ಖಾದರ್ ಶಾಸಕರನ್ನು ಸಸ್ಪೆಂಡ್ ಮಾಡಿರುವ ನಿರ್ಣಯವನ್ನು ಪುನರ್ ಪರಿಶೀಲಿಸಿ ಅದನ್ನು ವಾಪಸ್ಸು ಪಡೆಯಬೇಕೆಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ದೆಹಲಿ, 24 ಮಾರ್ಚ್: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಹೆಚ್ ಕೆ ಪಾಟೀಲ್ ಅವರ ಶಿಫಾರಸ್ಸಿನ ಮೇರೆಗೆ ವಿಧಾನ ಸಭಾಧ್ಯಕ್ಷ ಯುಟಿ ಖಾದರ್ ಅವರು ಬಿಜೆಪಿಯ 18 ಶಾಸಕರನ್ನು ಅಮಾನತ್ತು ಮಾಡುವುದರ ಜೊತೆಗೆ ಅವರ ಮೇಲೆ ಹಲವಾರು ನಿಯಮಗಳನ್ನು ವಿಧಿಸಿರುವುದು ಕಾನೂನುಬಾಹಿರ ಮತ್ತು ನಿಯಮಾವಳಿಗಳಲ್ಲಿ ಅದಕ್ಕೆ ಅವಕಾಶವಿಲ್ಲ ಎಂದು ಸಂಸದ ಮತ್ತು ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಕರ್ನಾಟಕ ಸಂಸದೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಹೀಗಾಗಿದೆ, ಸದನದಲ್ಲಿ ಶಾಸಕರು ಹದ್ದುಮೀರಿ ವರ್ತಿಸದಂತೆ ನೋಡಿಕೊಳ್ಳುವುದು, ಸದನದ ಗೌರವ ಕಾಪಾಡುವುದು ಸ್ಪೀಕರ್ ಜವಾಬ್ದಾರಿಯಾಗಿರುತ್ತದೆ ಎಂದು ಕಾಗೇರಿ ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Karnataka Assembly Session: ಸದನದಲ್ಲಿ ಬೆಳಗಿನ ಜಾವ 1 ಗಂಟೆಯವರೆಗೆ ಕಲಾಪ, ಸಭಾಧ್ಯಕ್ಷ ಯುಟಿ ಖಾದರ್ ಹೇಳಿದ್ದೇನು?