ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ವೈರಲ್ ಬಗ್ಗೆ ಬಿಇಒ ಸ್ಪಷ್ಟನೆ
ಚಾಮರಾಜನಗರದಲ್ಲಿ ಬುರ್ಖಾ ಧಾರಣೆ ಕುರಿತಾಗಿ ವಿದ್ಯಾರ್ಥಿನಿಯ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಬಿಇಒ ಹನುಮಂತ ಶೆಟ್ಟಿ ಪ್ರತಿಕ್ರಿಯಿಸಿದ್ದು, ತನಿಖೆ ನಡೆಸಿದ್ದು, ವಿಡಿಯೋದ ಕನ್ನಡ ಮತ್ತು ಉರ್ದು ಅನುವಾದಗಳಲ್ಲಿ ಯಾವುದೇ ವಿವಾದಾತ್ಮಕ ಅಂಶಗಳು ಕಂಡುಬಂದಿಲ್ಲ ಎಂದು ಹೇಳಿದ್ದಾರೆ. ಶಾಲಾ ಮುಖ್ಯೋಪಾಧ್ಯಾಯರು ಈ ಘಟನೆ ಶಾಲೆಯಲ್ಲಿ ನಡೆದಿಲ್ಲ ಎಂದು ಹೇಳಿದ್ದಾರೆ ಎಂದರು.
ಚಾಮರಾಜನಗರ, ಮಾರ್ಚ್ 24: ಬುರ್ಖಾ (burkha) ಧಾರಣೆ ಕುರಿತು ವಿದ್ಯಾರ್ಥಿನಿ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಬಗ್ಗೆ ಬಿಇಒ ಹನುಮಂತ ಶೆಟ್ಟಿ ಮಾಧ್ಯಮದವರೊಂದಿಗೆ ಮಾತನಾಡಿದ್ದು, ವಿಡಿಯೋ ತುಣುಕಿನ ಬಗ್ಗೆ ಪರಿಶೀಲನೆ ಮಾಡಿದ್ಧೇವೆ. ವಿಡಿಯೋದಲ್ಲಿ ವೈರಲ್ ಆದ ವಿದ್ಯಾರ್ಥಿನಿ ಖಾಸಗಿ ಶಾಲೆಯಲ್ಲಿ ನಾಲ್ಕನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. ವಿಡಿಯೋವನ್ನು ಕನ್ನಡ ಮತ್ತು ಉರ್ದು ಭಾಷೆಯ ತರ್ಜುಮೆ ಮಾಡಿ ನೋಡಿದಾಗ ಅದರಲ್ಲಿ ವಿವಾದಾತ್ಮಕ ಅಂಶಗಳಿಲ್ಲ ಎಂಬುದೇ ಕಂಡುಬಂದಿದೆ. ಮುಖ್ಯಶಿಕ್ಷಕರು ಈ ಶಾಲೆಯಲ್ಲಿ ಕಾರ್ಯಕ್ರಮ ನಡೆದಿಲ್ಲ ಅಂತಾ ಹೇಳಿದ್ದಾರೆ. ಶಾಲೆಯ ದಾಖಲಾತಿ, ನೋಂದಣಿ ದಾಖಲೆಗಳನ್ನು ಪರಿಶೀಲನೆ ಮಾಡಿ ವಿವರವಾದ ವರದಿಯನ್ನು ಇಲಾಖೆಗೆ ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.