ಪೂಜಾ ಹೆಗ್ಡೆಗೆ ಕರ್ನಾಟಕದ ಕನೆಕ್ಷನ್ ಹೇಗೆ? ನಿಜಕ್ಕೂ ಅವರು ಇಲ್ಲಿಯವರಾ?
ಪೂಜಾ ಹೆಗ್ಡೆ ಅವರು ಮುಂಬೈನಲ್ಲಿ ಜನಿಸಿದ್ದರೂ, ಅವರ ಕುಟುಂಬ ಕರ್ನಾಟಕದ ಉಡುಪಿಯವರು. ಅವರ ತಂದೆ ಮಂಜುನಾಥ್ ಹೆಗ್ಡೆ ಮತ್ತು ತಾಯಿ ಲತಾ ಹೆಗ್ಡೆ ತುಳು ಮಾತನಾಡುತ್ತಾರೆ. ಪೂಜಾ ಹೆಗ್ಡೆ ಅವರಿಗೂ ತುಳು ಮತ್ತು ಸ್ವಲ್ಪ ಕನ್ನಡ ಬರುತ್ತದೆ. ಕುಟುಂಬದ ಒತ್ತಡದಿಂದ ಕನ್ನಡ ಸಿನಿಮಾದಲ್ಲಿ ನಟಿಸಲು ಅವರು ಆಸಕ್ತಿ ತೋರಿದ್ದಾರೆ.

ಪೂಜಾ ಹೆಗ್ಡೆ (Pooja Hegde) ಅವರು ಇತ್ತೀಚೆಗೆ ಕನ್ನಡ ಸಿನಿಮಾಗಳ ಬಗ್ಗೆ ಮಾತನಾಡಿದ್ದರು. ಹೌದು, ಪೂಜಾ ಹೆಗ್ಡೆ ಅವರು ತಮ್ಮ ಕುಟುಂಬದವರು ಅದರಲ್ಲೂ ಪಾಲಕರು ಕನ್ನಡ ಸಿನಿಮಾ ಮಾಡುವಂತೆ ಒತ್ತಾಯ ಹೇರುತ್ತಿದ್ದಾರೆ ಎಂದಿದ್ದಾರೆ. ಪೂಜಾ ಹೆಗ್ಡೆ ಕುಟುಂಬ ಕರ್ನಾಟಕ ಮೂಲವನ್ನು ಹೊಂದಿದೆ. ಅವರ ಕುಟುಂಬದ ಹಿನ್ನೆಲೆ ಏನು? ಅವರು ಹುಟ್ಟಿದ್ದು ಎಲ್ಲಿ? ಅವರು ಕರಾವಳಿ ಮೂಲದವರು ಹೇಗಾದರು ಎಂಬುದನ್ನು ಈ ಸ್ಟೋರಿಯಲ್ಲಿ ತಿಳಿದುಕೊಳ್ಳೋಣ.
ಪೂಜಾ ಹೆಗ್ಡೆ ಅವರು 1990ರ ಅಕ್ಟೋಬರ್ 13ರಂದು ಜನಿಸಿದರು. ಅವರು ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಜನಿಸಿದರು. ಅವರ ತಂದೆಯ ಹೆಸರು ಮಂಜುನಾಥ್ ಹೆಗ್ಡೆ. ಅವರು ಕ್ರಿಮಿನಲ್ ವಕೀಲರು. ತಾಯಿ, ಲತಾ ಹೆಗ್ಡೆ. ಅವರು ಉದ್ಯಮಿ. ಪೂಜಾ ಹೆಗ್ಡೆಗೆ ಕರ್ನಾಟಕದ ಹಿನ್ನೆಲೆ ಬೆಳೆಯಲು ಅವರ ಕುಟುಂಬದವರೇ ಕಾರಣ.
ಮಂಜುನಾಥ್ ಹಾಗೂ ಲತಾ ಹೆಗ್ಡೆ ನಮ್ಮ ರಾಜ್ಯದ ಉಡುಪಿಯವರು. ಅವರು ಮುಂಬೈನಲ್ಲಿ ಸೆಟಲ್ ಆಗಿದ್ದಾರೆ. ಮಂಜುನಾಥ್ ಸಹೋದರ ರಿಷಭ್ ಹೆಗ್ಡೆ ಅವರು ಸರ್ಜನ್ ಆಗಿದ್ದಾರೆ. ಮಂಜುನಾಥ್ ಹಾಗೂ ಲತಾ ತುಳು ಮಾತನಾಡುತ್ತಾರೆ. ಈ ಕಾರಣಕ್ಕೆ ಪೂಜಾ ಹೆಗ್ಡೆ ಅವರಿಗೂ ತುಳು ಮಾತನಾಡಲು ಬರುತ್ತದೆ. ಅಲ್ಲದೆ, ಅವರಿಗೆ ಸ್ವಲ್ಪ ಕನ್ನಡ ಬರುತ್ತದೆ. ಹಿಂದಿ ಹಾಗೂ ಇಂಗ್ಲಿಷ್ ಮಾತನಾಡುತ್ತಾರೆ.
ಪೂಜಾ ಹೆಗ್ಡೆ ಹುಟ್ಟಿದ್ದು ಮುಂಬೈನಲ್ಲಾದರೂ ಟಾಲಿವುಡ್ನಲ್ಲಿ ಹೆಚ್ಚು ಗಮನ ಸೆಳೆದರು. ಆದಾಗ್ಯೂ ಪೂಜಾ ಹೆಗ್ಡೆ ಅವರು ತಮ್ಮ ಮೂಲ ಕರ್ನಾಟಕ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಪೂಜಾ ಹೆಗ್ಡೆ ಮಾಡೆಲ್ ಆಗಿ ವೃತ್ತಿ ಜೀವನ ಆರಂಭಿಸಿದರು. ಆ ಬಳಿಕ ಅವರಿಗೆ ಬಣ್ಣದ ಲೋಕದಲ್ಲಿ ಆಫರ್ ಸಿಕ್ಕಿತು.
ಇದನ್ನೂ ಓದಿ: ಪೂಜಾ ಹೆಗ್ಡೆಗೆ ಕನ್ನಡ ಸಿನಿಮಾ ಮಾಡುವಂತೆ ಕುಟುಂಬದವರ ಒತ್ತಾಯ
ಇತ್ತೀಚೆಗೆ ಪೂಜಾ ಹೆಗ್ಡೆ ತೆಲುಗು ಸಿನಿಮಾ ಮಾಡಿಲ್ಲ. ಈ ಬಗ್ಗೆ ಫ್ಯಾನ್ಸ್ಗೆ ಬೇಸರ ಇದೆ. ಆದರೆ, ಅವರು ಚಿತ್ರವನ್ನು ಒಪ್ಪಿಕೊಂಡಿದ್ದು, ಅದು ಇನ್ನೂ ಘೋಷಣೆ ಆಗಿಲ್ಲ ಎನ್ನಲಾಗಿದೆ. ಇನ್ನು, ಪೂಜಾ ಹೆಗ್ಡೆ ಅವರಿಗೆ ಕನ್ನಡ ಸಿನಿಮಾ ಮಾಡುವಂತೆ ಕುಟುಂಬದಿಂದ ಒತ್ತಾಯ ಬರುತ್ತಿದೆ. ಈ ಬಗ್ಗೆ ಅವರು ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.