ಸ್ಪರ್ಧೆ ಬೇಡ ಎಂಬ ನಿರ್ಧಾರ; ಅಂದುಕೊಂಡಿದ್ದಕ್ಕಿಂತ ಮೊದಲೇ ಆಮಿರ್ ಖಾನ್ ಸಿನಿಮಾ ರಿಲೀಸ್
ಆಮಿರ್ ಖಾನ್ ಅವರ ಮುಂಬರುವ ಚಿತ್ರ 'ಸಿತಾರೆ ಜಮೀನ್ ಪರ್' ಅಂದುಕೊಂಡಿದ್ದಕ್ಕಿಂತ ಮೊದಲೇ ಬಿಡುಗಡೆಯಾಗುವ ಸಾಧ್ಯತೆ ಇದೆ. ಬೇರೆ ದೊಡ್ಡ ಚಿತ್ರಗಳೊಂದಿಗೆ ಸ್ಪರ್ಧಿಸದಿರಲು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಆಮಿರ್ ಖಾನ್. ಈ ಚಿತ್ರದ ಟ್ರೈಲರ್ ಅಜಯ್ ದೇವಗನ್ ಅವರ 'ರೇಡ್ 2' ಜೊತೆಗೆ ಬಿಡುಗಡೆಯಾಗಲಿದೆ.

ಆಮಿರ್ ಖಾನ್ (Aamir Khan) ಸಿನಿಮಾಗಳು ರಿಲೀಸ್ ಆಗುತ್ತವೆ ಎಂದರೆ ಆ ಸಂದರ್ಭದಲ್ಲಿ ಬೇರೆ ತಂಡಗಳು ತಮ್ಮ ಚಿತ್ರವನ್ನು ರಿಲೀಸ್ ಮಾಡಲು ಯೋಚನೆ ಮಾಡಬೇಕಾದ ಪರಿಸ್ಥಿತಿ ಇತ್ತು. ಆದರೆ, ಈಗ ಆಮಿರ್ ಖಾನ್ ಅವರೇ ಭಯ ಬೀಳುವ ಪರಿಸ್ಥಿತಿ ಬಂದಿದೆ. ಸತತ ಸೋಲು, ಕೆಲ ವರ್ಷಗಳ ಕಾಲ ಚಿತ್ರರಂಗದಿಂದ ದೂರವೇ ಇದ್ದಿದ್ದು ಈ ಭಯಕ್ಕೆ ಕಾರಣ. ಈಗ ಅವರ ನಟನೆಯ ‘ಸಿತಾರರೇ ಜಮೀನ್ ಪರ್’ ಸಿನಿಮಾ ರಿಲೀಸ್ ಆಗುತ್ತಿದೆ. ಆರ್ಎಸ್ ಪ್ರಸನ್ನ ನಿರ್ದೇಶನದ ಈ ಚಿತ್ರ ಜೂನ್ 20ರಂದು ರಿಲೀಸ್ ಆಗುವ ಸಾಧ್ಯತೆ ಇದೆ.
‘ತಾರೇ ಜಮೀನ್ ಪರ್’ ಸಿನಿಮಾ ಮಗುವಿಗೆ ಇರೋ ಅಪರೂಪದ ಕಾಯಿಲೆ ಬಗ್ಗೆ ವಿವರಿಸಿತ್ತು. ಈಗ ಆಮಿರ್ ಇದೇ ರೀತಿಯ ಕತೆಯೊಂದಿಗೆ ‘ಸಿತಾರೇ ಜಮೀನ್ ಪರ್’ ಸಿನಿಮಾ ಮಾಡಿದ್ದಾರೆ. ಈ ಚಿತ್ರ ಡಿಸೆಂಬರ್ನಲ್ಲಿ ರಿಲೀಸ್ ಆಗಲಿದೆ ಎಂದು ವರದಿ ಆಗಿತ್ತು. ಆದರೆ, ಕ್ರಿಸ್ಮಸ್ ಸಂದರ್ಭದಲ್ಲಿ ಹಲವು ದೊಡ್ಡ ಸಿನಿಮಾಗಳು ತೆರೆಗೆ ಬರುತ್ತವೆ. ಈ ಕಾರಣಕ್ಕೆ ಸ್ಪರ್ಧೆ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.
ಆಮಿರ್ ಖಾನ್ ಅವರು ‘ಸಿತಾರೇ ಜಮೀನ್ ಪರ್’ ಚಿತ್ರವನ್ನು ಜೂನ್ 20ಕ್ಕೆ ತೆರೆಗೆ ತರುವ ಆಲೋಚನೆಯಲ್ಲಿ ಇದ್ದಾರೆ. ಜೂನ್ ತಿಂಗಳಲ್ಲಿ ಯಾವುದೇ ದೊಡ್ಡ ಸಿನಿಮಾಗಳ ಘೋಷಣೆ ಆಗಿಲ್ಲ. ಅಲ್ಲದೆ, ಐಪಿಎಲ್ ಕೂಡ ಪೂರ್ಣಗೊಂಡಿರುತ್ತದೆ. ಈ ಕಾರಣಕ್ಕೆ ಆ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.
ಆಮಿರ್ ಖಾನ್ ಅವರ ಈ ಸಿನಿಮಾ ಭಿನ್ನವಾಗಿ ಇರಲಿದೆ. ಇದರಲ್ಲಿ ಯಾವುದೇ ಫೈಟ್ ಇರೋದಿಲ್ಲ. ಈ ಚಿತ್ರದಲ್ಲಿ ನಗು, ಭಾವಾನಾತ್ಮಕ ವಿಚಾರ ಹಾಗೂ ಡ್ರಾಮಾ ಇರಲಿದೆ. ಅಜಯ್ ದೇವಗನ್ ನಟನೆಯ ‘ರೇಡ್ 2’ ಸಿನಿಮಾ ಮೇ 1ರಂದು ರಿಲೀಸ್ ಆಗಲಿದೆ. ಈ ಸಿನಿಮಾದ ಜೊತೆ ಟ್ರೇಲರ್ ಅಟ್ಯಾಚ್ ಆಗಲಿದೆ ಎನ್ನಲಾಗಿದೆ.
ಇದನ್ನೂ ಓದಿ: ‘ಸಿತಾರೆ ಜಮೀನ್ ಪರ್’ ಸಿನಿಮಾಕ್ಕೆ ಆಮಿರ್ ಖಾನ್ ಹೊಸ ಅವತಾರ
ಆಮಿರ್ ಖಾನ್ ಅವರು ‘ಲಾಹೋರ್: 1947’ ಸಿನಿಮಾ ನಿರ್ಮಾಣ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕೆ ಸನ್ನಿ ಡಿಯೋಲ್ ಹೀರೋ. ಆಮಿರ್ ಖಾನ್ ಅವರು ಇನ್ನಷ್ಟು ಹೊಸ ಪ್ರಯೋಗಗಳನ್ನು ಮಾಡಲು ರೆಡಿ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.