‘ಸಿತಾರೆ ಜಮೀನ್ ಪರ್’ ಸಿನಿಮಾಕ್ಕೆ ಆಮಿರ್ ಖಾನ್ ಹೊಸ ಅವತಾರ
Aamir Khan: ಆಮಿರ್ ಖಾನ್ ನಟ, ನಿರ್ದೇಶಕ ಹಾಗೂ ನಿರ್ಮಾಪಕನಾಗಿ ಮೂರು ವಿಭಾಗದಲ್ಲಿಯೂ ಯಶಸ್ಸು ಗಳಿಸಿದ್ದಾರೆ. ಇದೀಗ ಅವರು ಸಿನಿಮಾದ ಮತ್ತೊಂದು ವಿಭಾಗದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ. ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ಅವರ ಮುಂದಿನ ಸಿನಿಮಾ ‘ಸಿತಾರೆ ಜಮೀನ್ ಪರ್’ ಸಿನಿಮಾದಲ್ಲಿ ಹೊಸ ರೀತಿಯ ಪ್ರಯತ್ನಕ್ಕೆ ಆಮಿರ್ ಖಾನ್ ಕೈ ಹಾಕಿದ್ದಾರೆ.

ಆಮಿರ್ ಖಾನ್ (Aamir Khan), ಬಾಲಿವುಡ್ನ (Bollywood) ಪರ್ಫೆಕ್ಷನಿಸ್ಟ್ ಎಂದೇ ಹೆಸರಾಗಿದ್ದಾರೆ. ಯಾವುದೇ ಕೆಲಸ ಮಾಡಲು ಅವರು ನಿಖರತೆ, ಪರಿಪೂರ್ಣತೆ ಬೇಡುತ್ತಾರೆ. ತಮ್ಮ ವಾರಗೆಯ ಸೂಪರ್ ಸ್ಟಾರ್ಗಳಾದ ಶಾರುಖ್ ಖಾನ್, ಸಲ್ಮಾನ್ ಖಾನ್ ಅವರುಗಳಂತೆ ಕಮರ್ಶಿಯಲ್, ಮಾಸ್ ಮಸಾಲಾ ಹಾದಿ ಹಿಡಿಯದೆ ಒಳ್ಳೆಯ ಸಿನಿಮಾ ನೀಡುತ್ತಾ ಬರುತ್ತಿದ್ದಾರೆ ಆಮಿರ್ ಖಾನ್, ಒಳ್ಳೆಯ ಸಿನಿಮಾ ಕೊಡುವ ಪ್ರಯತ್ನದಲ್ಲಿ ಹಲವು ಸೋಲುಗಳನ್ನು ಕಂಡರೂ ಸಹ ಎದೆಗುಂದದೆ ಮುನ್ನುಗ್ಗುತ್ತಿದ್ದಾರೆ. 2007ರ ಬ್ಲಾಕ್ ಬಸ್ಟರ್ ಸಿನಿಮಾ ‘ತಾರೆ ಜಮೀನ್ ಪರ್’ನ ಮುಂದಿನ ಭಾಗದಂತೆ ‘ಸಿತಾರೆ ಜಮೀನ್ ಪರ್’ ಸಿನಿಮಾ ಮಾಡುತ್ತಿರುವ ಆಮಿರ್ ಖಾನ್, ಈ ಸಿನಿಮಾದಲ್ಲಿ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
‘ಸಿತಾರೆ ಜಮೀನ್ ಪರ್’ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸುವುದರ ಜೊತೆಗೆ ನಿರ್ಮಾಣವನ್ನು ಆಮಿರ್ ಖಾನ್ ಮಾಡುತ್ತಿದ್ದಾರೆ. ಇದೀಗ ಈ ಸಿನಿಮಾದಲ್ಲಿ ಹಾಡೊಂದನ್ನು ಸಹ ಹಾಡಲಿದ್ದಾರೆ ಆಮಿರ್ ಖಾನ್. ಅಂದಹಾಗೆ ಆಮಿರ್ ಖಾನ್ ಸಿನಿಮಾದಲ್ಲಿ ಹಾಡು ಹಾಡುತ್ತಿರುವುದು ಇದು ಮೊದಲೇನೂ ಅಲ್ಲ. ಆಲ್ಟೈಂ ಹಿಟ್ ಹಿಂದಿ ಹಾಡುಗಳಲ್ಲಿ ಒಂದಾದ ‘ಏ ಆತಿ ಕ್ಯಾ ಖಂಡಾಲ’ ಹಾಡನ್ನು ಆಮಿರ್ ಖಾನ್ ಅವರೇ ಹಾಡಿದ್ದಾರೆ. ಆದರೆ ದಶಕಗಳ ಬಳಿಕ ಮತ್ತೊಮ್ಮೆ ಸಿನಿಮಾದಲ್ಲಿ ಹಾಡು ಹಾಡಲು ಮುಂದಾಗಿದ್ದಾರೆ.
ಇದನ್ನೂ ಓದಿ:ಆಮಿರ್ ಖಾನ್ ಇಂದಾಗಿ ನನ್ನ ಸಿನಿಮಾ ತಡವಾಗುತ್ತಿದೆ: ಸನ್ನಿ ಡಿಯೋಲ್
ಕೆಲ ವಾರಗಳ ಹಿಂದೆ ನಡೆದ ಅವರ ಹುಟ್ಟುಹಬ್ಬದಂದು ಆಮಿರ್ ಖಾನ್ ತಾವು ಕಳೆದ ಎರಡು ವರ್ಷಗಳಿಂದಲೂ ಸಂಗೀತ ಅಭ್ಯಾಸ ಮಾಡುತ್ತಿರುವುದಾಗಿ ಹೇಳಿದ್ದರು. ಈಗ ಸಿನಿಮಾದಲ್ಲಿ ಹಾಡು ಹಾಡುತ್ತಿದ್ದಾರೆ. ಆಮಿರ್ ಖಾನ್, ‘ಸಿತಾರೆ ಜಮೀನ್ ಪರ್’ ಸಿನಿಮಾನಲ್ಲಿ ವಿಶೇಷ ಚೇತನ ಮಕ್ಕಳ ಕೋಚ್ ಆಗಿ ನಟಿಸುತ್ತಿದ್ದಾರೆ. ಪ್ಯಾರಾ ಒಲಿಂಪಿಕ್ಗೆ ಆಯ್ಕೆ ಆಗಿರುವ ತಂಡದ ಕೋಚ್ ಪಾತ್ರದಲ್ಲಿ ಆಮಿರ್ ಖಾನ್ ನಟಿಸಿದ್ದಾರೆ. ಸಿನಿಮಾದಲ್ಲಿ ಅವರದ್ದು ಕುಡುಕ ಕೋಚ್ನ ಪಾತ್ರವಂತೆ. ಹಾಗಾಗಿ ಅವರು ಮಾಸ್ ರೀತಿಯ ಹಾಡು ಹಾಡುವ ಸಾಧ್ಯತೆ ಇದೆ.
‘ಸಿತಾರೆ ಜಮೀನ್ ಪರ್’ ಸಿನಿಮಾದಲ್ಲಿ ಜೆನಿಲಿಯಾ ಡಿಸೋಜಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಆಮಿರ್ ಖಾನ್ ಜೊತೆಗೆ ಜೆನಿಲಿಯಾ ನಟಿಸುತ್ತಿದ್ದಾರೆ. ಈ ಹಿಂದೆ ಆಮಿರ್ ಖಾನ್ ನಿರ್ಮಾಣದ ‘ಜಾನೆ ತು ಯಾ ಜಾನೆ ನ’ ಸಿನಿಮಾದಲ್ಲಿ ನಟಿಸಿದ್ದರು. ಅಂದಹಾಗೆ ‘ತಾರೆ ಜಮೀನ್ ಪರ್’ ಸಿನಿಮಾವನ್ನು ಸ್ವತಃ ಆಮಿರ್ ಖಾನ್ ನಿರ್ದೇಶಿಸಿದ್ದರು. ಈಗ ‘ಸಿತಾರೆ ಜಮೀನ್ ಪರ್’ ಸಿನಿಮಾವನ್ನು ಎಸ್ಆರ್ ಪ್ರಸನ್ನ ಎಂಬುವರು ನಿರ್ದೇಶನ ಮಾಡುತ್ತಿದ್ದಾರೆ. ಸ್ಪ್ಯಾನಿಷ್ ಸಿನಿಮಾ ‘ಚಾಂಪಿಯನ್ಸ್’ ನಿಂದ ಸ್ಪೂರ್ತಿ ಪಡೆದಿರುವ ಸಿನಿಮಾ ಇದಾಗಿದೆ. ಸಿನಿಮಾಕ್ಕೆ ಶಂಕರ್ ಎಹಸಾನ್ ಲಾಯ್ ಅವರುಗಳು ಸಂಗೀತ ನೀಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ