ಆಮಿರ್ ಖಾನ್ ಇಂದಾಗಿ ನನ್ನ ಸಿನಿಮಾ ತಡವಾಗುತ್ತಿದೆ: ಸನ್ನಿ ಡಿಯೋಲ್
Aamir Khan-Sunny Deol: ಸನ್ನಿ ಡಿಯೋಲ್ಗೆ ಮತ್ತೆ ಸ್ಟಾರ್ ಗಿರಿ ಸಿಕ್ಕಿದೆ. ಅವರ ಸಿನಿಮಾಗಳು ನೂರಾರು ಕೋಟಿ ಹಣ ಗಳಿಸುತ್ತಿವೆ. ಸನ್ನಿ ಡಿಯೋಲ್ ನಟನೆಯ ‘ಲಾಹೋರ್ 1947’ ಸಿನಿಮಾದ ಬಗ್ಗೆ ಪ್ರೇಕ್ಷಕರಿಗೆ ನಿರೀಕ್ಷೆ ಇತ್ತು. ಜನವರಿಯಲ್ಲಿ ಬಿಡುಗಡೆ ಆಗಬೇಕಿದ್ದ ಆ ಸಿನಿಮಾ ತಡವಾಗುತ್ತಿದೆ. ಆ ಸಿನಿಮಾ ತಡವಾಗಲು ಆಮಿರ್ ಖಾನ್ ಕಾರಣ ಎಂದಿದ್ದಾರೆ ಸನ್ನಿ ಡಿಯೋಲ್.

90 ರ ದಶಕದಲ್ಲಿ ಸ್ಟಾರ್ ಆಗಿ ಮೆರೆದಿದ್ದ ಸನ್ನಿ ಡಿಯೋಲ್ (Sunny Deol) ಆ ನಂತರದ ಒಂದೆರಡು ದಶಕ ಹಿಟ್ ಸಿನಿಮಾಗಳಿಲ್ಲದೆ ಚಿತ್ರರಂಗದಿಂದಲೇ ಬಹುತೇಕ ದೂರವಾಗಿದ್ದರು. ಆದರೆ ಕಳೆದ ನಾಲ್ಕೈದು ವರ್ಷಗಳಲ್ಲಿ ಮತ್ತೆ ಅವರಿಗೆ ಅದೃಷ್ಟ ಖುಲಾಯಿಸಿದೆ. ಖಾನ್ಗಳ ಸಿನಿಮಾಗಳೇ ಓಡದೇ ಇದ್ದ ಸಮಯದಲ್ಲಿಯೂ ಅವರ ಸಿನಿಮಾ ಕೋಟಿ ಕೋಟಿ ಕಲೆಕ್ಷನ್ ಮಾಡಿ ಮತ್ತೆ ಅವರನ್ನು ಮುಂದಿನ ಸಾಲಿನ ನಾಯಕ ನಟ ಎನ್ನುವಂತಾಗಿದೆ. ಇದೀಗ ಸನ್ನಿ ಡಿಯೋಲ್ ಅವರ ‘ಜಾಟ್’ ಸಿನಿಮಾ ತೆರೆಗೆ ಬಂದಿದೆ. ಅವರ ಮತ್ತೊಂದು ಸಿನಿಮಾ ‘ಲಾಹೋರ್ 1947’ (Lahore 1947) ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ.
ಒಂದರ ಹಿಂದೊಂದು ಆಕ್ಷನ್ ಸಿನಿಮಾಗಳಲ್ಲಿ ಸನ್ನಿ ಡಿಯೋಲ್ ತೊಡಗಿಕೊಂಡಿದ್ದಾರೆ. ಆದರೆ ಅವರ ‘ಲಾಹೋರ್ 1947’ ಸಿನಿಮಾ ನಿರೀಕ್ಷಿಸಿದ್ದಕ್ಕಿಂತಲೂ ತುಸು ಹೆಚ್ಚೇ ತಡವಾಗುತ್ತಿದೆ. ‘ಲಾಹೋರ್ 1947’ ಸಿನಿಮಾ ಜನವರಿ ತಿಂಗಳಲ್ಲಿ ಬಿಡುಗಡೆ ಆಗಬೇಕಿತ್ತು. ಗಣರಾಜ್ಯೋತ್ಸವದಂದು ಸಿನಿಮಾ ತೆರೆಗೆ ಬರಲಿದೆ ಎಂದು ಘೋಷಣೆಯೂ ಮಾಡಲಾಗಿತ್ತು. ಆದರೆ ಸಿನಿಮಾ ಇನ್ನೂ ಬಿಡುಗಡೆ ಆಗಿಲ್ಲ ಇದಕ್ಕೆ ಕಾರಣ ಆಮಿರ್ ಖಾನ್ ಎಂದಿದ್ದಾರೆ ನಟ ಸನ್ನಿ ಡಿಯೋಲ್.
ಇದನ್ನೂ ಓದಿ:ದಕ್ಷಿಣದ ನಿರ್ಮಾಪಕರ ನೋಡಿ ಕಲಿಯಿರಿ: ಬಾಲಿವುಡ್ ನಿರ್ಮಾಪಕರಿಗೆ ಬುದ್ಧಿ ಹೇಳಿದ ಸನ್ನಿ ಡಿಯೋಲ್
‘ಲಾಹೋರ್ 1947’ ಸಿನಿಮಾ ನಿರ್ಮಾಣ ಮಾಡಿರುವುದು ಆಮಿರ್ ಖಾನ್, ಆ ಸಿನಿಮಾದ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಸಹ. ಸಿನಿಮಾ ನಿರ್ದೇಶನ ಮಾಡಿರುವುದು ರಾಜ್ಕುಮಾರ್ ಸಂತೋಷಿ. ಸಿನಿಮಾದ ಚಿತ್ರೀಕರಣ ಈಗಾಗಲೇ ಸಂಪೂರ್ಣವಾಗಿದ್ದು ಸಿನಿಮಾದ ಒಟ್ಟಾರೆ ಗುಣಮಟ್ಟ ಆಮಿರ್ ಖಾನ್ಗೆ ಅಷ್ಟಾಗಿ ಹಿಡಿಸಿಲ್ಲವಂತೆ. ಹಾಗಾಗಿ ಎಡಿಟಿಂಗ್ನಲ್ಲಿ ಇನ್ನಷ್ಟು ಮೌಲ್ಯ ಸೇರಿಸಲು ಆಮಿರ್ ಖಾನ್ ಅವರು ಸಿನಿಮಾದ ಬಿಡುಗಡೆ ತಡೆ ಮಾಡಿದ್ದಾರೆ ಎನ್ನಲಾಗಿದೆ.
ಸನ್ನಿ ಡಿಯೋಲ್ ಸಹ ಇದನ್ನೇ ಹೇಳಿದ್ದು, ‘ಲಾಹೋರ್ 1947’ ಸಿನಿಮಾ ಆಮಿರ್ ಖಾನ್ ಅವರಿಂದಾಗಿ ತಡವಾಗುತ್ತಿದೆ. ಆಮಿರ್ ಖಾನ್ಗೆ ಪರ್ಫೆಕ್ಷನ್ ಬೇಕಿದೆಯಂತೆ ಹಾಗಾಗಿ ಅವರು ಎಡಿಟಿಂಗ್ಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದಾರೆ. ನಾನು ಮೊದಲು ಆ ಸಿನಿಮಾದಲ್ಲಿ ನಟಿಸುವುದು ಶುರು ಮಾಡಿದೆ. ಆ ಸಿನಿಮಾ ಮುಗಿಸಿ ‘ಜಾಟ್’ ಸಿನಿಮಾ ಪ್ರಾರಂಭಿಸಿದೆ. ಈಗ ಆಮಿರ್ ಖಾನ್, ಇಡೀ ಸಿನಿಮಾ ಮತ್ತೊಮ್ಮೆ ಮಗದೊಮ್ಮೆ ಕರೆಕ್ಷನ್ ಮಾಡುತ್ತಿದ್ದಾರೆ. ಅವರಿಗೆ ಅತ್ಯುತ್ತಮವಾದುದನ್ನೇ ಜನರಿಗೆ ಕೊಡಬೇಕು ಎಂಬ ಹಂಬಲ ಇದೆ’ ಎಂದಿದ್ದಾರೆ.
ಸನ್ನಿ ಡಿಯೋಲ್ ನಟನೆಯ ‘ಜಾಟ್’ ಸಿನಿಮಾ ನಾಳೆ (ಏಪ್ರಿಲ್ 10) ಬಿಡುಗಡೆ ಆಗಲಿದೆ. ಸಿನಿಮಾ ನಿರ್ದೇಶನ ಮಾಡಿರುವುದು ತೆಲುಗು ನಿರ್ದೇಶಕ ಗೋಪಿಚಂದ್ ಮಲಿನೇನಿ. ಈ ಹಿಂದೆ ಇವರು ‘ವೀರ ಸಿಂಹಾ ರೆಡ್ಡಿ’, ‘ಬಲುಪು’, ‘ಕ್ರ್ಯಾಕ್’ ಅಂಥಹಾ ಮಾಸ್ ಸಿನಿಮಾಗಳನ್ನು ನೀಡಿದ್ದಾರೆ. ಗೋಪಿಚಂದ್ ಮಲಿನೇನಿಗೆ ಇದು ಮೊದಲ ಹಿಂದಿ ಸಿನಿಮಾ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ