ಸನ್ನಿ ಡಿಯೋಲ್ ನಿಜವಾದ ಹೆಸರೇನು? ಈ ಹೆಸರು ಬಂದಿದ್ದೇಕೆ?

ಸನ್ನಿ ಡಿಯೋಲ್ ಅವರ ನಿಜವಾದ ಹೆಸರು ಅಜಯ್ ಸಿಂಗ್ ಡಿಯೋಲ್. ಅವರಿಗೆ ಸಣ್ಣ ವಯಸ್ಸಿನಲ್ಲಿ ಸನ್ನಿ ಎಂದು ಕರೆಯುತ್ತಿದ್ದರು. ಇದೇ ಹೆಸರು ಅವರಿಗೆ ಫಿಕ್ಸ್ ಆಯಿತು. ಸಿನಿಮಾದಲ್ಲಿ ಸನ್ನಿ ಎಂದೇ ಅವರು ಫೇಮಸ್ ಆದರು. ಅವರು ನಟನೆಯನ್ನು ಕಲಿತಿದ್ದು ಇಂಗ್ಲೆಂಡ್​ನಲ್ಲಿ .

ಸನ್ನಿ ಡಿಯೋಲ್ ನಿಜವಾದ ಹೆಸರೇನು? ಈ ಹೆಸರು ಬಂದಿದ್ದೇಕೆ?
ಸನ್ನಿ ಡಿಯೋಲ್
Follow us
| Updated By: ರಾಜೇಶ್ ದುಗ್ಗುಮನೆ

Updated on:Oct 19, 2024 | 7:40 AM

ನಟ ಸನ್ನಿ ಡಿಯೋಲ್ ಅವರಿಗೆ ಈಗ 61 ವರ್ಷ. ಅವರಿಗೆ ಇಂದು (ಅಲ್ಟೋಬರ್ 19) ಜನ್ಮದಿನ. ಎಲ್ಲರೂ ಅವರಿಗೆ ಶುಭಾಶಯ ಕೋರುತ್ತಾ ಇದ್ದಾರೆ. ಅವರು ಬಾಲಿವುಡ್​ನಲ್ಲಿ ಹಲವು ವರ್ಷಗಳಿಂದ ಇದ್ದಾರೆ. ಅವರು 1983ರಲ್ಲಿ ರಿಲೀಸ್ ಆದ ‘ಬೇತಾಬ್’ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟರು. ಧರ್ಮೇಂದ್ರ ಅವರ ಮಗ ಆದ ಕಾರಣ ಸುಲಭದಲ್ಲಿ ಚಿತ್ರರಂಗದಲ್ಲಿ ಅವಕಾಶ ಸಿಕ್ಕಿತ್ತು. ಅವರಿಗೆ 80 ಹಾಗೂ 90ರ ದಶಕದಲ್ಲಿ ಸಿನಿಮಾ ರಂಗದಲ್ಲಿ ಸಾಕಷ್ಟು ಬೇಡಿಕೆ ಇತ್ತು.

ಆ ಬಳಿಕ ನಿಧಾನವಾಗಿ ಸನ್ನಿ ಡಿಯೋಲ್ ಬೇಡಿಕೆ ಕಳೆದುಕೊಳ್ಳುತ್ತಾ ಬಂದರು. ವಿಶೇಷ ಎಂದರೆ ಕಳೆದ ವರ್ಷ ರಿಲೀಸ್ ಆದ ‘ಗದರ್ 2’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಮಿಂಚಿತು. ಈ ಚಿತ್ರವು ವಿಶ್ವ ಬಾಕ್ಸ್ ಆಫೀಸ್​ನಲ್ಲಿ 200 ಕೋಟಿ ರೂಪಾಯಿ ಗಳಿಕೆ ಮಾಡಿ ಗಮನ ಸೆಳೆದಿತ್ತು.  ಅವರ ಬಗೆಗಿನ ಕೆಲವು ಅಪರೂಪದ ವಿಚಾರಗಳು.

ಸನ್ನಿ ಡಿಯೋಲ್ ಅವರ ನಿಜವಾದ ಹೆಸರು ಅಜಯ್ ಸಿಂಗ್ ಡಿಯೋಲ್. ಅವರಿಗೆ ಸಣ್ಣ ವಯಸ್ಸಿನಲ್ಲಿ ಸನ್ನಿ ಎಂದು ಕರೆಯುತ್ತಿದ್ದರು. ಇದೇ ಹೆಸರು ಅವರಿಗೆ ಫಿಕ್ಸ್ ಆಯಿತು. ಸಿನಿಮಾದಲ್ಲಿ ಸನ್ನಿ ಎಂದೇ ಅವರು ಫೇಮಸ್ ಆದರು. ಅವರು ನಟನೆಯನ್ನು ಕಲಿತಿದ್ದು ಇಂಗ್ಲೆಂಡ್​ನಲ್ಲಿ . ‘ಓಲ್ಡ್ ವರ್ಲ್ಡ್ ಥಿಯೇಟರ್​’ನಲ್ಲಿ ಅವರು ನಟನೆ ಕಲಿತಿದ್ದಾರೆ.

ಸನ್ನಿ ಸಿನಿಮಾದಲ್ಲಿ ಆ್ಯಕ್ಷನ್ ಮಾಡುತ್ತಾರೆ, ಎಷ್ಟೇ ಉದ್ದ ಹೇಳಿಕೆ ಕೊಟ್ಟರೂ ಮಾಡುತ್ತಾರೆ. ಆದರೆ, ನಿಜ ಜೀವನದಲ್ಲಿ ಅವರು ಇಂಟ್ರೋವರ್ಟ್​. ಯಾರ ಬಳಿಯೂ ಹೆಚ್ಚು ಮಾತನಾಡುವುದಿಲ್ಲ.  ಸನ್ನಿ ಡಿಯೋಲ್ ಅವರು ಪಂಜಾಬಿ ಕುಟುಂಬದ ಹಿನ್ನೆಲೆ ಹೊಂದಿದ್ದಾರೆ. ಅಲ್ಲಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ‘ಗದರ್: ಏಕ್ ಪ್ರೇಮ್ ಕಥಾ’ ಸಿನಿಮಾ ಯಶಸ್ಸು ಕಂಡಿತ್ತು. ಈ ಸಿನಿಮಾ ಪಂಜಾಬ್​ನಲ್ಲಿ ನಿತ್ಯ ಬೆಳಿಗ್ಗೆ 6 ಗಂಟೆಗೆ ಪ್ರದರ್ಶನ ಆರಂಭ ಆಗುತ್ತಿತ್ತು.

ಸನ್ನಿ ಡಿಯೋಲ್ ನ್ಯಾಷನಲ್ಅವಾರ್ಡ್ ಪಡೆದಿದ್ದಾರೆ. 1990ರಲ್ಲಿ ರಿಲೀಸ್ ಆದ ‘ಗಾಯಲ್’ ಚಿತ್ರದ ನಟನೆಗೆ ಹಾಗೂ ‘ದಾಮಿನಿ’ ಚಿತ್ರದಲ್ಲಿ ಮಾಡಿದ ಪೋಷಕ ಪಾತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ ಅನ್ನೋದು ವಿಶೇಷ.

ಇದನ್ನೂ ಓದಿ: ಮದುವೆ ಆಗಿ ಎರಡು ಮಕ್ಕಳಿದ್ದಾಗ ಡಿಂಪಲ್ ಕಪಾಡಿಯಾ ಜೊತೆ ಸುತ್ತಾಡಿದ್ದ ಸನ್ನಿ ಡಿಯೋಲ್

‘1993ರಲ್ಲಿ ರಿಲೀಸ್ ಆದ ‘ದಾಮಿನಿ’ ಚಿತ್ರದಲ್ಲಿ ಸನ್ನಿ ಅವರದ್ದು ಅತಿಥಿ ಪಾತ್ರ ಆಗಿತ್ತು. ಅವರ ನಟನೆಯನ್ನು ನೋಡಿ ಪಾತ್ರದ ಅವಧಿಯನ್ನು ಹೆಚ್ಚಿಸಲಾಯಿತು. ಇಡೀ ಸಿನಿಮಾದಲ್ಲಿ ಇವರ ಪಾತ್ರ ಹೈಲೈಟ್ ಆಯಿತು.

ಸನ್ನಿ ಡಿಯೋಲ್ ಅವರು 2 ಸಿನಿಮಾ ನಿರ್ದೇಶನ ಮಾಡಿದ್ದಾರೆ. 1999ರ ‘ದಿಲ್ಲಗಿ’ ಹಾಗೂ 2016ರ ‘ಘಾಯಲ್ ಒನ್ಸ್ ಅಗೇನ್’. ಆದರೆ, ನಿರ್ದೇಶಕನಾಗಿ ಹೆಸರು ಮಾಡೋಕೆ ಸಾಧ್ಯವಾಗಲೇ ಇಲ್ಲ.

ಸನ್ನಿ ಡಿಯೋಲ್ ಅವರು ಮದುವೆ ಆದ ವಿಚಾರವನ್ನು ಗುಟ್ಟಾಗಿ ಇಟ್ಟಿದ್ದರು. ಹಲವು ವರ್ಷಗಳ ಬಳಿಕ ಈ ವಿಚಾರವನ್ನು ಅವರು ರಿವೀಲ್ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:32 am, Sat, 19 October 24

ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವಿನ ಕ್ಷಣದ ವಿಡಿಯೋ ವೈರಲ್
ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವಿನ ಕ್ಷಣದ ವಿಡಿಯೋ ವೈರಲ್
'ಡಿ. 9ರೊಳಗೆ ನಿರ್ಧಾರ ಪ್ರಕಟಿಸದಿದ್ದರೆ ಸುವರ್ಣ ಸೌಧಕ್ಕೆ ಮುತ್ತಿಗೆ'
'ಡಿ. 9ರೊಳಗೆ ನಿರ್ಧಾರ ಪ್ರಕಟಿಸದಿದ್ದರೆ ಸುವರ್ಣ ಸೌಧಕ್ಕೆ ಮುತ್ತಿಗೆ'
ತೆಲಂಗಾಣದಲ್ಲಿ ಮಿತಿ ಮೀರಿದ ಕೋಳಿಗಳ ಕಳ್ಳತನ
ತೆಲಂಗಾಣದಲ್ಲಿ ಮಿತಿ ಮೀರಿದ ಕೋಳಿಗಳ ಕಳ್ಳತನ
ದೀಪಕ್ ಅರಸ್​ಗೆ ನಿಜಕ್ಕೂ ಏನಾಗಿತ್ತು? ಮಾಹಿತಿ ನೀಡಿದ ಅಮೂಲ್ಯ ಪತಿ ಜಗದೀಶ್
ದೀಪಕ್ ಅರಸ್​ಗೆ ನಿಜಕ್ಕೂ ಏನಾಗಿತ್ತು? ಮಾಹಿತಿ ನೀಡಿದ ಅಮೂಲ್ಯ ಪತಿ ಜಗದೀಶ್
ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಅಂತ 53ನೇ ಸಲ ಹೇಳಿದ ಡಿಕೆ ಶಿವಕುಮಾರ್!
ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಅಂತ 53ನೇ ಸಲ ಹೇಳಿದ ಡಿಕೆ ಶಿವಕುಮಾರ್!
ಶಿಗ್ಗಾವಿ ಮತ್ತು ಸಂಡೂರು ಜೆಡಿಎಸ್ ಮುಖಂಡರ ಜೊತೆ ನಾಳೆ ಮಾತುಕತೆ: ನಿಖಿಲ್
ಶಿಗ್ಗಾವಿ ಮತ್ತು ಸಂಡೂರು ಜೆಡಿಎಸ್ ಮುಖಂಡರ ಜೊತೆ ನಾಳೆ ಮಾತುಕತೆ: ನಿಖಿಲ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಈಡಿಗೆ ಬೇಕಿರುವ ಕಾಗದಪತ್ರಗಳನ್ನು ಮುಡಾ ಅಧಿಕಾರಿಗಳು ನೀಡುತ್ತಾರೆ: ಸಚಿವ
ಈಡಿಗೆ ಬೇಕಿರುವ ಕಾಗದಪತ್ರಗಳನ್ನು ಮುಡಾ ಅಧಿಕಾರಿಗಳು ನೀಡುತ್ತಾರೆ: ಸಚಿವ