‘ಅವನು ನನ್ನವನು’; ರೇಖಾರನ್ನು ಮನೆಗೆ ಊಟಕ್ಕೆ ಕರೆದು ಎಚ್ಚರಿಸಿದ್ದ ಜಯಾ ಬಚ್ಚನ್
ಜಯಾ ಬಚ್ಚನ್ ಅವರು ರೇಖಾ ಅವರನ್ನು ಅಮಿತಾಭ್ ಬಚ್ಚನ್ ಅವರೊಂದಿಗಿನ ಸಂಬಂಧದ ಬಗ್ಗೆ ಎಚ್ಚರಿಸಿದ್ದರು. ಅಮಿತಾಭ್ ಮತ್ತು ರೇಖಾ ನಡುವಿನ ಸಿನಿಮಾ ಸೆಟ್‌ನಲ್ಲಿ ಪ್ರೇಮಾಂಕುರವಾಯಿತು ಎಂದು ಹೇಳಲಾಗುತ್ತದೆ. ಆದರೆ ಜಯಾ ಅವರ ಎಚ್ಚರಿಕೆಯಿಂದ ರೇಖಾ ಅವರು ಅಮಿತಾಭ್ ಅವರಿಂದ ದೂರ ಸರಿದರು.

ಹಿರಿಯ ನಟಿ ಜಯಾ ಬಚ್ಚನ್ (Jaya Bachchan) ಅವರಿಗೆ ಇಂದು (ಏಪ್ರಿಲ್ 9) ಜನ್ಮದಿನ. ಅವರು ಹಿಂದಿ ಚಿತ್ರರಂಗದಲ್ಲಿ ಬೇಡಿಕೆಯ ನಟಿ ಆಗಿದ್ದರು. ಅಮಿತಾಭ್ ಬಚ್ಚನ್ ಅವರನ್ನು ಪ್ರೀತಿಸಿ ವಿವಾಹ ಆದ ಬಳಿಕ ಕುಟುಂಬದಲ್ಲೇ ತೊಡಗಿಕೊಂಡರು. ಈಗ ರಾಜಕೀಯದಲ್ಲಿ ಅವರು ಛಾಪು ಮೂಡಿಸುತ್ತಾ ಇದ್ದಾರೆ. ಜಯಾ ಬಚ್ಚನ್ ಹಾಗೂ ಅಮಿತಾಭ್ ಬಚ್ಚನ್ ಸಂಸಾರಕ್ಕೆ ರೇಖಾ ಮುಳುವಾಗುತ್ತಾರೆ ಎನ್ನಲಾಗಿತ್ತು. ಆದರೆ, ರೇಖಾ ಪತಿಯನ್ನು ಬಿಟ್ಟುಕೊಡಲು ರೆಡಿ ಇರಲಿಲ್ಲ. ನೇರವಾಗಿ ರೇಖಾರ ಕರೆದು ಎಚ್ಚರಿಕೆ ನೀಡಿದ್ದರು.
ರೇಖಾ ಹಾಗೂ ಅಮಿತಾಭ್ ಬಚ್ಚನ್ ಕ್ಲೋಸ್ ಆದರು. ಸಿನಿಮಾ ಸೆಟ್‌ನಲ್ಲಿ ಇವರ ಮಧ್ಯೆ ಪ್ರೀತಿ ಮೂಡಿತ್ತು ಎನ್ನಲಾಗಿದೆ. ಆದರೆ, 1982ರಲ್ಲಿ ‘ಕೂಲಿ’ ಸಿನಿಮಾ ಶೂಟ್ ವೇಳೆ ಅಮಿತಾಭ್ ಗಾಯಗೊಂಡರು. ಆಸ್ಪತ್ರೆಯಲ್ಲಿ ಇರುವ ಅವರನ್ನು ತುಂಬಾನೇ ಕಾಳಜಿಯಿಂದ ನೋಡಿಕೊಂಡರು. ಇದರಿಂದ ಜಯಾ ಅವರು ಏನು ಎಂಬುದು ಅಮಿತಾಭ್ಗೆ ಅರ್ಥವಾಗಿತ್ತು.
ಅಮಿತಾಭ್ ಪತ್ನಿಗೆ ಪ್ರೀತಿ ಕೊಡೋದನ್ನು ನೋಡಿ ರೇಖಾ ತಡೆದುಕೊಳ್ಳಲಿಲ್ಲ. ಇಬ್ಬರ ಮಧ್ಯೆ ಇದರಿಂದ ಕಿತ್ತಾಟ ಶುರುವಾಯಿತು. ಇದನ್ನು ಅರಿತ ಜಯಾ ಅವರು, ಅಮಿತಾಭ್ ಇಲ್ಲದಾಗ ಊಟಕ್ಕೆ ಕರೆದ ರೇಖಾ ಅವರು, ‘ಅಮಿತಾಭ್ ನನ್ನವನು. ಅವನು ಮೊದಲೂ ನನ್ನವನಾಗಿದ್ದ, ಮುಂದೂ ನನ್ನವನಾಗಿರುತ್ತಾನೆ’ ಎಂದು ಮುಖಕ್ಕೆ ಹೊಡೆದಂತೆ ಹೇಳಿದರು. ರೇಖಾ ಮೇಲೆ ಇದು ಅತಿಯಾಗಿ ಪ್ರಭಾವ ಬೀರಿತು. ಈ ಕಾರಣದಿಂದ ಅವರು ಅಮಿತಾಭ್ ಅವರಿಂದ ಅಂತರ ಕಾಯ್ದುಕೊಂಡರು.
ವಿಶೇಷ ಎಂದರೆ ರೇಖಾ ಹಾಗೂ ಜಯಾ ಉತ್ತಮ ಗೆಳತಿಯರಾಗುದ್ದರು. ಇವರು ಕೆಲ ಕಾಲ ಒಟ್ಟಿಗೆ ಮುಂಬೈನಲ್ಲಿ ಇದ್ದರು. ಸ್ಟ್ರಗಲಿಂಗ್ ಸಮಯದಲ್ಲಿ ಇದು ಸಹಾಯ ಆಗಿದ್ದರು. ಆದರೆ, ಇಬ್ಬರೂ ದೂರ ಆದರು.
ಇದನ್ನೂ ಓದಿ: ‘ಅಯ್ಯೋ ಬಿಡಿ, ಅದು ಫ್ಲಾಪ್ ಸಿನಿಮಾ’; ಅಕ್ಷಯ್ಗೆ ನೇರವಾಗಿ ಟಾಂಗ್ ಕೊಟ್ಟ ಜಯಾ ಬಚ್ಚನ್
1981ರಲ್ಲಿ ಬಂದ ‘ಸಿಲ್ಸಿಲಾ’ ಇವರ ಪ್ರೇಮ ಕಥೆ ಇಟ್ಟುಕೊಂಡಿ ಮಾಡಿದ್ದು ಎನ್ನಲಾಗಿತ್ತು. ಈ ಚಿತ್ರದಲ್ಲಿ ಅಮಿತಾಭ್, ಜಯಾ ಹಾಗೂ ರೇಖಾ ಇದ್ದರು. ಆದರೆ, ಇದನ್ನು ತಂಡದವರು ಅಲ್ಲಗಳೆದರು. ಇದು ಇವರ ಕಥೆ ಅಲ್ಲ ಎಂದು ಹೇಳಲಾಯಿತು. ಸದ್ಯ ಅಮಿತಾಭ್ ಹಾಗೂ ಜಯಾ ಹಾಯಾಗಿ ಸಂಸಾರ ನಡೆಸುತ್ತಾ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:56 am, Wed, 9 April 25