ಅಲ್ಲು ಅರ್ಜುನ್ ಮನೆ ಎದುರು ಅಭಿಮಾನಿಗಳ ದಂಡು; ಎಚ್ಚರಿಕೆಯಿಂದ ನಡೆದುಕೊಂಡ ನಟ
ಅಲ್ಲು ಅರ್ಜುನ್ ಅವರಿಗೆ ಇರುವ ಅಭಿಮಾನಿ ಬಳಗ ದೊಡ್ಡದು. ಹುಟ್ಟುಹಬ್ಬದ ದಿನ ಅವರಿಗೆ ವಿಶ್ ಮಾಡಲು ಫ್ಯಾನ್ಸ್ ಆಗಮಿಸಿದ್ದಾರೆ. ಮನೆ ಎದುರು ಬಂದ ಅಭಿಮಾನಿಗಳನ್ನು ಅಲ್ಲು ಅರ್ಜುನ್ ಅವರು ಭೇಟಿ ಮಾಡಿದ್ದಾರೆ. ಆದರೆ ಯಾವುದೇ ನೂಕುನೂಗ್ಗಲು ಉಂಟಾಗದ ರೀತಿಯಲ್ಲಿ ಅವರು ಎಚ್ಚರಿಕೆ ವಹಿಸಿದ್ದಾರೆ.

ನಟ ಅಲ್ಲು ಅರ್ಜುನ್ (Allu Arjun) ಅವರಿಗೆ ಇಂದು (ಏಪ್ರಿಲ್ 8) ಹುಟ್ಟುಹಬ್ಬದ ಸಂಭ್ರಮ. ಬಹಳ ಸಡಗರದಿಂದ ಅವರು ಬರ್ತ್ಡೇ (Allu Arjun Birthday) ಆಚರಣೆ ಮಾಡಿಕೊಂಡಿದ್ದಾರೆ. ಸೆಲೆಬ್ರಿಟಿಗಳು, ಕುಟುಂಬದವರು, ಅಭಿಮಾನಿಗಳು ಅಲ್ಲು ಅರ್ಜುನ್ಗೆ ವಿಶ್ ಮಾಡಿದ್ದಾರೆ. ಅಲ್ಲದೇ ಸಾವಿರಾರು ಅಭಿಮಾನಿಗಳು ಅಲ್ಲು ಅರ್ಜುನ್ ಅವರ ಮನೆ ಎದುರು ಕೂಡ ಜಮಾಯಿಸಿದ್ದಾರೆ. ತಮ್ಮ ನೆಚ್ಚಿನ ನಟನ ಜನ್ಮದಿನದಂದು ನೇರವಾಗಿ ಭೇಟಿ ಮಾಡಿ ಶುಭಾಶಯ ಕೋರಬೇಕು ಎಂಬುದು ಅಭಿಮಾನಿಗಳ (Allu Arjun Fans) ಆಸೆ. ಅದಕ್ಕೆ ಅಲ್ಲು ಅರ್ಜುನ್ ಅವರು ಸಹಕರಿಸಿದ್ದಾರೆ. ಜೊತೆಗೆ ಅವರು ಎಚ್ಚರಿಕೆಯಿಂದಲೂ ನಡೆದುಕೊಂಡಿದ್ದಾರೆ.
ಸ್ಟಾರ್ ನಟರು ಬಂದಾಗ ಅವರನ್ನು ನೋಡಲು ಜನಜಂಗುಳಿ ಉಂಟಾಗುತ್ತದೆ. ಎಚ್ಚರ ತಪ್ಪಿ ನಡೆದುಕೊಂಡರೆ ಕಾಲ್ತುಳಿತ ಉಂಟಾಗುವ ಸಾಧ್ಯತೆ ಇರುತ್ತದೆ. ‘ಪುಷ್ಪ 2’ ಸಿನಿಮಾ ಬಿಡುಗಡೆ ಆದಾಗ ಅಲ್ಲು ಅರ್ಜುನ್ ಅವರು ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು. ಆಗ ಉಂಟಾದ ಕಾಲ್ತುಳಿದಲ್ಲಿ ಅಭಿಮಾನಿಯೊಬ್ಬರು ಸಾವಿಗೀಡಾಗಿದ್ದರು. ಆ ಬಳಿಕ ಅಲ್ಲು ಅರ್ಜುನ್ ಅವರು ಹೆಚ್ಚು ಜಾಗ್ರತೆ ವಹಿಸುತ್ತಿದ್ದಾರೆ.
ಹುಟ್ಟುಹಬ್ಬದ ದಿನ ತಮಗೆ ವಿಶ್ ಮಾಡಲು ಬಂದ ಅಭಿಮಾನಿಗಳನ್ನು ಅಲ್ಲು ಅರ್ಜುನ್ ಅವರು ದೂರದಿಂದಲೇ ಮಾತನಾಡಿಸಿದ್ದಾರೆ. ಯಾವುದೇ ನೂಕು ನುಗ್ಗಲು ಆಗದ ರೀತಿಯಲ್ಲಿ ಅವರು ನೋಡಿಕೊಂಡಿದ್ದಾರೆ. ಕೇವಲ ಮುಂಭಾಗ ನಿಂತಿರುವ ಕೆಲವು ಅಭಿಮಾನಿಗಳಿಗೆ ಅವರು ಕೈ ಕುಲುಕಿದ್ದಾರೆ. ಉಳಿದಂತೆ ಎಲ್ಲರಿಗೂ ದೂರದಿಂದಲೇ ಕೈ ಬೀಸಿ ಧನ್ಯವಾದ ತಿಳಿಸಿದ್ದಾರೆ.
Latest visuals @alluarjun thanking all his fans for birthday wishes 🤍#AA22 #AA22xA6#HappyBirthdayAlluArjun pic.twitter.com/jiGgvSGLWd
— Sumanth (@SumanthOffl) April 8, 2025
ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಕಮೆಂಟ್ಗಳ ಮೂಲಕ ಕೂಡ ಅಭಿಮಾನಿಗಳು ಅಲ್ಲು ಅರ್ಜುನ್ ಅವರಿಗೆ ಶುಭಾಶಯ ತಿಳಿಸಿದ್ದಾರೆ. ಮುಂದಿನ ಸಿನಿಮಾಗೆ ಶುಭವಾಗಲಿ ಎಂದು ಹಾರೈಸಿದ್ದಾರೆ. ಪ್ಯಾನ್ ಇಂಡಿಯಾ ನಿರ್ದೇಶಕ ಅಟ್ಲಿ ಜೊತೆ ಅಲ್ಲು ಅರ್ಜುನ್ ಅವರು ಹೊಸ ಸಿನಿಮಾ ಘೋಷಿಸಿದ್ದಾರೆ.
ಇದನ್ನೂ ಓದಿ: ಅಲ್ಲು ಅರ್ಜುನ್ ಜೀವನ ಬದಲಿಸಿದ್ದು ಚಿರಂಜೀವಿಯ ಒಂದು ಮಾತು
‘ಪುಷ್ಪ 2’ ಸಿನಿಮಾದ ಅಭೂತಪೂರ್ವ ಯಶಸ್ಸಿನ ನಂತರ ಅಲ್ಲು ಅರ್ಜುನ್ ಅವರು ಅಟ್ಲಿ ಜೊತೆ ಕೈ ಜೋಡಿಸಿದ್ದಾರೆ. ಈ ಸಿನಿಮಾದ ತಯಾರಿ ಹೇಗಿದೆ ಎಂಬುದನ್ನು ತಿಳಿಸಲು ವಿಡಿಯೋ ಹಂಚಿಕೊಳ್ಳಲಾಗಿದೆ. ಅಮೆರಿಕದಲ್ಲಿ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ‘ಸನ್ ಪಿಕ್ಚರ್ಸ್’ ಸಂಸ್ಥೆಯು ಈ ಸಿನಿಮಾಗೆ ಬಂಡವಾಳ ಹೂಡುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.