‘ಓದೆಲ 2’ ಟ್ರೇಲರ್: ತಮನ್ನಾ, ವಸಿಷ್ಠ ಸಿಂಹ ಮುಖಾಮುಖಿ; ಹಾರರ್ ಪ್ರಿಯರಿಗೆ ಹಬ್ಬ
‘ಓದೆಲ 2’ ಸಿನಿಮಾ ಏಪ್ರಿಲ್ 11ರಂದು ಬಿಡುಗಡೆ ಆಗಲಿದೆ. ಈಗ ಈ ಸಿನಿಮಾದ ಟ್ರೇಲರ್ ರಿಲೀಸ್ ಮಾಡಲಾಗಿದೆ. ಈ ಚಿತ್ರದಲ್ಲಿ ನಟಿ ತಮನ್ನಾ ಭಾಟಿಯಾ ಅವರು ನಾಗ ಸಾಧು ಪಾತ್ರ ಮಾಡಿದ್ದಾರೆ. ವಸಿಷ್ಠ ಸಿಂಹ ಅವರು ದುಷ್ಟಶಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ‘ಓದೆಲ 2’ ಟ್ರೇಲರ್ ನೋಡಿ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.

ಹಾರರ್ ಕಥೆ ಇರುವ ತೆಲುಗಿನ ‘ಓದೆಲ 2’ (Odela 2) ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ನಟಿ ತಮನ್ನಾ ಭಾಟಿಯಾ ಹಾಗೂ ನಟ ವಸಿಷ್ಠ ಸಿಂಹ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಸಖತ್ ಅದ್ದೂರಿಯಾಗಿ ಈ ಸಿನಿಮಾ ಮೂಡಿಬಂದಿದೆ ಎಂಬುದಕ್ಕೆ ಟ್ರೇಲರ್ ಸುಳಿವು ನೀಡಿದೆ. ಅಚ್ಚರಿ ಮೂಡಿಸುವ ಗ್ರಾಫಿಕ್ಸ್, ಅದ್ದೂರಿ ಮೇಕಿಂಗ್ನ ಝಲಕ್ ಈ ಟ್ರೇಲರ್ನಲ್ಲಿ ಕಾಣಿಸಿದೆ. ತಮನ್ನಾ ಭಾಟಿಯಾ ಮತ್ತು ವಸಿಷ್ಠ ಸಿಂಹ (Vasishta Simha) ಅವರು ಈ ಸಿನಿಮಾದಲ್ಲಿ ಮುಖಾಮಖಿ ಆಗುತ್ತಿದ್ದಾರೆ. ಚಿತ್ರಮಂದಿರದಲ್ಲಿ ಹಾರರ್ ಪ್ರಿಯರಿಗೆ ಭರ್ಜರಿ ಮನರಂಜನೆ ಸಿಗುವ ಲಕ್ಷಣ ಕಾಣಿಸಿದೆ.
ಅಶೋಕ್ ತೇಜ ಅವರು ‘ಓದೆಲ 2’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಸಂಪತ್ ನಂದಿ ಕತೆ ಬರೆದಿದ್ದಾರೆ. ಪಾತ್ರವರ್ಗದಲ್ಲಿ ತಮನ್ನಾ ಭಾಟಿಯಾ, ವಸಿಷ್ಠ ಸಿಂಹ ಜೊತೆ ಕನ್ನಡದ ನಟ ಶರತ್ ಲೋಹಿತಾಶ್ವ ಕೂಡ ಇದ್ದಾರೆ. ‘ಅಧ್ಯಕ್ಷ’ ಸಿನಿಮಾ ನಟಿ ಹೆಭಾ ಪಟೇಲ್ ಸಹ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇಂದು (ಏಪ್ರಿಲ್ 8) ‘ಓದೆಲ 2’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ.
ತಮನ್ನಾ ಭಾಟಿಯಾ ಅವರು ಈವರೆಗೂ ಗ್ಲಾಮರ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಆದರೆ ‘ಓದೆಲ 2’ ಸಿನಿಮಾದಲ್ಲಿ ಅವರಿಗೆ ಬೇರೆ ರೀತಿಯ ಪಾತ್ರವಿದೆ. ದುಷ್ಟಶಕ್ತಿಯ ವಿರುದ್ಧ ಹೋರಾಡುವ ಶಿವ ಶಕ್ತಿ ಎಂಬ ಪಾತ್ರಕ್ಕೆ ಅವರು ಬಣ್ಣ ಹಚ್ಚಿದ್ದಾರೆ. ಅವರಿಗೆ ಸವಾಲು ಹಾಕುವ ದುಷ್ಟಶಕ್ತಿಯಾಗಿ ವಸಿಷ್ಠ ಸಿಂಹ ಅವರು ನಟಿಸಿದ್ದಾರೆ. ತಮನ್ನಾ ಭಾಟಿಯಾ ಅವರ ನಾಗ ಸಾಧು ಗೆಟಪ್ ಗಮನ ಸೆಳೆದಿದೆ. ಈ ಟ್ರೇಲರ್ಗೆ ಪ್ರೇಕ್ಷಕರಿಂದ ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕಿದೆ.
‘ಓದೆಲ 2’ ಸಿನಿಮಾ ಟ್ರೇಲರ್:
ಏಪ್ರಿಲ್ 11ರಂದು ‘ಓದೆಲ 2’ ಸಿನಿಮಾ ಬಿಡುಗಡೆ ಆಗಲಿದೆ. ಕನ್ನಡದ ಪ್ರತಿಭಾವಂತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಟ್ರೇಲರ್ನಲ್ಲಿ ಹಿನ್ನೆಲೆ ಸಂಗೀತಕ್ಕೆ ಜನರು ಫಿದಾ ಆಗಿದ್ದಾರೆ.
ಇದನ್ನೂ ಓದಿ: ಮಿಲ್ಕಿ ಬ್ಯೂಟಿ ಎಂದು ಕರೆದ ಪತ್ರಕರ್ತೆ ವಿರುದ್ಧ ಸಿಟ್ಟಾದ ನಟಿ ತಮನ್ನಾ ಭಾಟಿಯಾ
2022ರಲ್ಲಿ ವಸಿಷ್ಠ ಸಿಂಹ ನಟಿಸಿದ ‘ಓದೆಲ ರೈಲ್ವೇ ಸ್ಟೇಷನ್’ ಸಿನಿಮಾ ಹಿಟ್ ಆಗಿತ್ತು. ಅದರ ಸೀಕ್ವೆಲ್ ಆಗಿ ‘ಓದೆಲ 2’ ಸಿನಿಮಾ ಮೂಡಿಬಂದಿದೆ. ಈ ಬಾರಿ ಪಾತ್ರವರ್ಗಕ್ಕೆ ತಮನ್ನಾ ಭಾಟಿಯಾ ಎಂಟ್ರಿ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.