ಹಣದ ಕೊರತೆಯಿಂದ ಕಾರು ಮಾರಿದ ಅಜಯ್ ರಾವ್; ಕಣ್ಣೀರು ಹಾಕಿದ ಮಗಳು
ನಟ ಅಜಯ್ ರಾವ್ ಅವರು ‘ಯುದ್ಧಕಾಂಡ’ ಸಿನಿಮಾವನ್ನು ನಿರ್ಮಿಸಿದ್ದಾರೆ. ಹಣದ ಕೊರತೆಯಿಂದ ಅವರು ಕಾರು ಮಾರಿದ್ದಾರೆ. ಈ ವೇಳೆ ಅವರ ಪುತ್ರಿ ಚೆರಿಷ್ಮಾ ಕಣ್ಣೀರು ಹಾಕಿದ್ದಾಳೆ. ಈ ವಿಡಿಯೋ ವೈರಲ್ ಆಗಿದೆ. ತನ್ನ ಇಷ್ಟದ ಕಾರನ್ನು ಮಾರುವುದು ಬೇಡ ಎಂದು ಆಕೆ ಹಟ ಮಾಡಿದ್ದಾಳೆ.
ಏಪ್ರಿಲ್ 18ರಂದು ‘ಯುದ್ಧಕಾಂಡ’ ಸಿನಿಮಾ (Yuddhakaanda Movie) ಬಿಡುಗಡೆ ಆಗಲಿದೆ. ಈ ಸಿನಿಮಾವನ್ನು ನಿರ್ಮಾಣ ಮಾಡಿರುವ ಅಜಯ್ ರಾವ್ ಅವರಿಗೆ ಹಣದ ಕೊರತೆ ಬಂದಿದ್ದರಿಂದ ಬಿಎಂಡಬ್ಲ್ಯು ಕಾರು ಮಾರಿದ್ದಾರೆ. ಆದರೆ ಕಾರು ಮಾರಿದ್ದಕ್ಕೆ ಅವರ ಮಗಳು (Ajay Rao Daughter) ಚೆರಿಷ್ಮಾಗೆ ಬೇಜಾರಾಗಿದೆ. ಕಾರು ಮಾರುವುದು ಬೇಡ ಎಂದು ಆಕೆ ಅತ್ತಿದ್ದಾಳೆ. ಮಗಳನ್ನು ಸಮಾಧಾನ ಮಾಡಲಿ ಅಜಯ್ ರಾವ್ (Ajay Rao) ಪ್ರಯತ್ನಿಸಿದ್ದಾರೆ. ‘ಯುದ್ಧಕಾಂಡ’ ಸಿನಿಮಾದಲ್ಲಿ ಅಜಯ್ ರಾವ್ ಅವರು ಲಾಯರ್ ಪಾತ್ರ ಮಾಡಿದ್ದಾರೆ. ಟ್ರೇಲರ್ ಗಮನ ಸೆಳೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos