IPL 2025: 6,6,6,4.. ಸೆಂಚುರಿ; ಪ್ರಿಯಾಂಶ್ ಆರ್ಭಟಕ್ಕೆ ಪತರುಗುಟ್ಟಿದ ಪತಿರಾನ; ವಿಡಿಯೋ
Priyansh Arya's Stunning IPL Century: ಪ್ರಿಯಾಂಶ್ ಆರ್ಯ ಅವರು ತಮ್ಮ ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿಯೇ 39 ಎಸೆತಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಪಂಜಾಬ್ ಕಿಂಗ್ಸ್ ಪರ ಆಡುತ್ತಿರುವ ಈ 24 ವರ್ಷದ ಬ್ಯಾಟ್ಸ್‌ಮನ್, 19 ಎಸೆತಗಳಲ್ಲಿ ಅರ್ಧಶತಕ ಗಳಿಸಿ ನಂತರ 20 ಎಸೆತಗಳಲ್ಲಿ ಮುಂದಿನ 50 ರನ್‌ಗಳನ್ನು ಕಲೆಹಾಕಿದರು. ಅದರಲ್ಲೂ ಮಥೀಶ ಪತಿರಾನ ಅವರ ಓವರ್ನಲ್ಲಿ ಹ್ಯಾಟ್ರಿಕ್ ಸಿಕ್ಸರ್‌ಗಳನ್ನು ಸಿಡಿಸಿ ಶತಕ ಪೂರೈಸಿದ್ದು ಅವರ ಇನ್ನಿಂಗ್ಸ್ನ ಹೈಲೇಟ್ಸ್ ಆಗಿತ್ತು.
24 ವರ್ಷದ ಯುವ ಬ್ಯಾಟ್ಸ್‌ಮನ್ ಪ್ರಿಯಾಂಶ್ ಆರ್ಯ ಐಪಿಎಲ್‌ನಲ್ಲಿ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡುತ್ತಿರುವ ಪ್ರಿಯಾಂಶ್ ಕೇವಲ 39 ಎಸೆತಗಳಲ್ಲಿ ಶತಕ ಪೂರೈಸಿದರು. ಒಂದೆಡೆ ಪಂಜಾಬ್ ತಂಡದ ವಿಕೆಟ್ಗಳು ನಿರಂತರವಾಗಿ ಬಿದ್ದರೂ, ಪ್ರಿಯಾಂಶ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅರ್ಧಶತಕದ ಬಳಿಕ ಇನ್ನಷ್ಟು ಉಗ್ರರೂಪ ತಾಳಿದ ಪ್ರಿಯಾಂಶ್ ಕೇವಲ 20 ಎಸೆತಗಳಲ್ಲಿ ಮುಂದಿನ ಐವತ್ತು ರನ್‌ಗಳನ್ನು ಕಲೆಹಾಕಿದರು.
ಪತಿರಾನ ವಿರುದ್ಧ ಹ್ಯಾಟ್ರಿಕ್ ಸಿಕ್ಸರ್
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಇನ್ನಿಂಗ್ಸ್ ಆರಂಭಿಸಿದ ಪ್ರಿಯಾಂಶ್ ಆರ್ಯ, ಆರಂಭದಿಂದಲೇ ಚೆನ್ನೈ ಸೂಪರ್ ಕಿಂಗ್ಸ್ ಬೌಲರ್‌ಗಳನ್ನು ಥಳಿಸಲು ಆರಂಭಿಸಿದರು. ಪಂದ್ಯದ ಮೊದಲ ಓವರ್‌ನಲ್ಲಿಯೇ ಪ್ರಿಯಾಂಶ್ 17 ರನ್ ಕಲೆಹಾಕಿದರು. ಆ ಬಳಿಕ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಪ್ರಿಯಾಂಶ್ ಕೇವಲ 39 ಎಸೆತಗಳಲ್ಲಿ ಶತಕ ಗಳಿಸಿದರು. ಅದರಲ್ಲೂ ಸಿಎಸ್ಕೆ ತಂಡದ ಪ್ರಮುಖ ಬೌಲರ್, ಡೆತ್ ಓವರ್ ಸ್ಪೆಷಲಿಸ್ಟ್ ಎನಿಸಿಕೊಂಡಿರುವ ಮಥೀಶ ಪತಿರಾನ ಓವರ್ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಪ್ರಿಯಾಂಶ್ ಅದೇ ಓವರ್ನಲ್ಲಿ ಬೌಂಡರಿ ಬಾರಿಸುವ ಮೂಲಕ ತಮ್ಮ ಶತಕ ಪೂರ್ಣಗೊಳಿಸಿದರು. ಅಂತಿಮವಾಗಿ ಪ್ರಿಯಾಂಶ್ 42 ಎಸೆತಗಳನ್ನು ಎದುರಿಸಿ 7 ಬೌಂಡರಿ ಮತ್ತು 9 ಸಿಕ್ಸರ್‌ಗಳ ಸಹಿತ 103 ರನ್ಗಳ ಸ್ಮರಣೀಯ ಇನ್ನಿಂಗ್ಸ್ ಆಡಿದರು.

ತವರಿನಲ್ಲಿ ಗೆದ್ದ ಆರ್ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ

ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ

ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ

‘ರಾಜ್ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
