AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಯ್ಯೋ ಬಿಡಿ, ಅದು ಫ್ಲಾಪ್ ಸಿನಿಮಾ’; ಅಕ್ಷಯ್​ಗೆ ನೇರವಾಗಿ ಟಾಂಗ್ ಕೊಟ್ಟ ಜಯಾ ಬಚ್ಚನ್

Jaya Bachchan-Akshay Kumar: ನಟಿ, ರಾಜ್ಯಸಭಾ ಸದಸ್ಯೆಯೂ ಆಗಿರುವ ಜಯಾ ಬಚ್ಚನ್ ತಮ್ಮ ಅಭಿಪ್ರಾಯಗಳನ್ನು ಯಾವುದೇ ಹಿಂಜರಿಕೆ ಇಲ್ಲದೆ ಹೇಳುತ್ತಾರೆ. ಆದರೆ ಈಗ ಹಿಂಜರಿಕೆ ಇಲ್ಲದೆ ಹೇಳಿದಾಗೆಲ್ಲ ಅವರು ಸಂಕಷ್ಟಕ್ಕೆ ಸಿಲುಕುತ್ತಾರೆ. ಇದೀಗ ಅಕ್ಷಯ್ ಕುಮಾರ್ ಅವರ ಹಿಟ್ ಸಿನಿಮಾ ಒಂದನ್ನು ಅದೊಂದು ಫ್ಲಾಪ್ ಸಿನಿಮಾ ಎಂದಿದ್ದಾರೆ.

‘ಅಯ್ಯೋ ಬಿಡಿ, ಅದು ಫ್ಲಾಪ್ ಸಿನಿಮಾ’; ಅಕ್ಷಯ್​ಗೆ ನೇರವಾಗಿ ಟಾಂಗ್ ಕೊಟ್ಟ ಜಯಾ ಬಚ್ಚನ್
Akshay Kumar
 ಶ್ರೀಲಕ್ಷ್ಮೀ ಎಚ್
| Edited By: |

Updated on: Mar 19, 2025 | 11:14 PM

Share

ನಟಿ ಹಾಗೂ ರಾಜಕಾರಣಿ ಜಯಾ ಬಚ್ಚನ್ ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಅವರು ಒಂದಲ್ಲಾ ಒಂದು ವಿಚಾರವನ್ನು ಮಾತನಾಡಿ ಸುದ್ದಿ ಆಗುತ್ತಾರೆ. ಈಗ ಜಯಾ ಬಚ್ಚನ್ ಅವರು ಅಕ್ಷಯ್ ಕುಮಾರ್ (Akshay Kumar) ನಟನೆಯ ‘ಟಾಯ್ಲೆಟ್​: ಏಕ್ ಪ್ರೇಮ್ ಕಥಾ’ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಈ ಚಿತ್ರವನ್ನು ಅವರು ಟೀಕೆ ಮಾಡಿದ್ದಾರೆ. ಇದನ್ನು ಫ್ಲಾಪ್ ಸಿನಿಮಾ ಎಂದು ಹೀಗಳೆದಿದ್ದಾರೆ. ಇದು ಸಾಮಾಜಿಕವಾಗಿ ಜಾಗೃತಿ ಮೂಡಿಸಲು ಮಾಡಿದ ಚಿತ್ರವಾಗಿತ್ತು. ಇದನ್ನು ಹೀಗಳಿದಿದ್ದಕ್ಕೆ ಅವರನ್ನು ಟೀಕಿಸಲಾಗಿದೆ.

ಇಂಡಿಯಾ ಟಿವಿ ಕಾನ್​ಕ್ಲೇವ್​ನಲ್ಲಿ ಜಯಾ ಮಾತನಾಡಿದ್ದಾರೆ. ಅವರು ಕೆಲವು ಸಿನಿಮಾಗಳನ್ನು ನೋಡುವುದಿಲ್ಲ ಎಂದಿದ್ದಾರೆ. ಅದರಲ್ಲೂ ಟೈಟಲ್ ನೋಡಿಕೊಂಡು ತಾವು ಸಿನಿಮಾ ವೀಕ್ಷಿಸುವುದಾಗಿ ಹೇಳಿದ್ದಾರೆ. ಈ ವೇಳೆ ಅವರು ‘ಟಾಯ್ಲೆಟ್ ಏಕ್ ಪ್ರೇಮ್ ಕಥಾ’ ಚಿತ್ರದ ಬಗ್ಗೆ ಮಾತನಾಡಿ ಟೀಕೆ ಮಾಡಿದ್ದಾರೆ.

‘ಆ ಸಿನಿಮಾದ ಟೈಟಲ್ ನೋಡಿ. ಈ ರೀತಿ ಟೈಟಲ್ ಇರೋ ಸಿನಿಮಾನ ನಾನು ಎಂದಿಗೂ ವೀಕ್ಷಿಸುವುದಿಲ್ಲ. ಇದು ನಿಜಕ್ಕೂ ಹೆಸರೇ’ ಎಂದು ಜಯಾ ಬಚ್ಚನ್ ಅವರು ಪ್ತಶ್ನೆ ಮಾಡಿದ್ದಾರೆ. ‘ಈ ರೀತಿ ಟೈಟಲ್ ಇರೋ ಸಿನಿಮಾನ ನೀವು ವೀಕ್ಷಿಸುತ್ತೀರಾ’ ಎಂದು ಪ್ರಶ್ನೆ ಮಾಡಲಾಯಿತು. ಇದಕ್ಕೆ ಹೌದು ಎಂಬ ಉತ್ತರವನ್ನು ಕೆಲವರು ನೀಡಿದರು.

ಅಲ್ಲಿಗೆ ಜಯಾ ಬಚ್ಚನ್ ಅವರು ಕೂರಲೇ ಇಲ್ಲ. ‘ಇಷ್ಟು ಜನರಲ್ಲಿ ಕೆಲವೇ ಕೆಲವರು ಈ ಚಿತ್ರವನ್ನು ನೋಡಿದ್ದಾರೆ. ಇದು ಫ್ಲಾಪ್ ಸಿನಿಮಾ’ ಎಂದು ಅವರು ಹೇಳಿದ್ದಾರೆ. ಅವರ ಹೇಳಿಕೆ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ.

ಇದನ್ನೂ ಓದಿ:ಮುಂಬೈನಲ್ಲಿರೋ ಮನೆ ಮಾರಿ ಡಬಲ್ ದುಡ್ಡು ಮಾಡಿದ ಅಕ್ಷಯ್ ಕುಮಾರ್

2017ರಲ್ಲಿ ‘ಟಾಯ್ಲೆಟ್: ಏಕ್ ಪ್ರೇಮ್ ಕಥಾ’ ಸಿನಿಮಾರಿಲೀಸ್ ಆಯಿತು. ಕೇಶವ್ (ಅಕ್ಷಯ್ ಕುಮಾರ್) ಜಯಾ ಜೊತೆ (ಭೂಮಿ ಪಡ್ನೇಕರ್) ಪ್ರೀತಿ ಬೆಳೆದು ಮದುವೆ ಆಗುತ್ತಾರೆ. ಮನೆಯಲ್ಲಿ ಟಾಯ್ಲೆಟ್ ಇಲ್ಲ ಎಂದು ಜಯಾ ದೂರುತ್ತಾಳೆ. ಆಗ ಕೇಶವ್ ಟಾಯ್ಲೆಟ್ ನಿರ್ಮಾಣಕ್ಕೆ ಮುಂದಾಗುತ್ತಾರೆ. ಆದರೆ, ಅದು ಸುಲಭ ಆಗಿರುವುದಿಲ್ಲ. ಇದನ್ನು ಕಟ್ಟಲು ಅನೇಕರು ವಿರೋಧಿಸುತ್ತಾರೆ.

ಅಕ್ಷಯ್ ಕುಮಾರ್ ನಟನೆಯ ‘ಸ್ಕೈ ಫೋರ್ಸ್’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ. ‘ವೀರ್ ಪಾರಿಯಾ’ ಅವರು ಇದರಲ್ಲಿ ನಟಿಸಿದ್ದಾರೆ. ದಿನೇಶ್ ವಿಜನ್, ಸಾರಾ ಅಲಿ ಖಾನ್ ಮೊದಲಾದವರು ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Shreelaxmi H
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ