ಶಾರುಖ್ ಖಾನ್ ಮಗಳಿಗೆ ತಾಯಿ ಸ್ಥಾನ ತುಂಬಲಿದ್ದಾರೆ ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ ಅವರು ಶಾರುಖ್ ಖಾನ್‌ರ ಮಗಳು ಸುಹಾನಾ ಖಾನ್ ಅವರ ಚೊಚ್ಚಲ ಚಿತ್ರ 'ಕಿಂಗ್' ನಲ್ಲಿ ತಾಯಿಯ ಪಾತ್ರ ನಿರ್ವಹಿಸುವ ಸಾಧ್ಯತೆ ಇದೆ ಎಂಬ ವರದಿ ಹರಿದಾಡುತ್ತಿದೆ. ಸಿದ್ದಾರ್ಥ್ ಆನಂದ್ ನಿರ್ದೇಶನದ ಈ ಚಿತ್ರದಲ್ಲಿ ದೀಪಿಕಾ ಅವರ ಪಾತ್ರ ಅತಿಥಿ ಪಾತ್ರವಾಗಿರಬಹುದು ಎನ್ನಲಾಗುತ್ತಿದೆ. ಈ ಸುದ್ದಿಗೆ ಅಭಿಮಾನಿಗಳಲ್ಲಿ ಭಿನ್ನ ಅಭಿಪ್ರಾಯಗಳಿವೆ.

ದೀಪಿಕಾ ಪಡುಕೋಣೆ (Deepika Padukone) ಅವರು ಸದ್ಯ ಬ್ರೇಕ್ನಲ್ಲಿದ್ದಾರೆ. ಅವರಿಗೆ ಮಗಳು ಜನಿಸಿದ್ದು, ಅದರ ಆರೈಕೆಯಲ್ಲಿ ಬ್ಯುಸಿ ಇದ್ದಾರೆ. ಈ ಮಧ್ಯೆ ದೀಪಿಕಾ ಪಡುಕೋಣೆ ಅವರು ಸುದ್ದಿಯಲ್ಲಿ ಇದ್ದಾರೆ. ಅವರು ಈಗ ಸಿನಿಮಾ ಒಂದರಲ್ಲಿ ಶಾರುಖ್ ಖಾನ್ ಮಗಳು ಸುಹಾನಾಗೆ ತಾಯಿ ಸ್ಥಾನ ತುಂಬಲಿದ್ದಾರೆ ಎಂದು ವರದಿ ಆಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಫುಲ್ ಖುಷಿ ಆಗಿದ್ದಾರೆ. ಇನ್ನೂ ಕೆಲವರು ತಾಯಿ ಪಾತ್ರ ಈಗಲೇ ಬೇಡವಾಗಿತ್ತು ಎನ್ನುವ ಅಭಿಪ್ರಾಯ ಹೊರಹಾಕಿದ್ದಾರೆ.
ತಾಯಿ ಪಾತ್ರಗಳನ್ನು ಮಾಡೋಕೆ ಆರಂಭಿಸಿದರೆ ಮುಂದಿನ ದಿನಗಳಲ್ಲಿ ಅದೇ ರೀತಿಯ ಪಾತ್ರಗಳು ಹುಡುಕಿಕೊಂಡು ಬರುತ್ತವೆ ಎಂಬುದು ಮೊದಲಿನಿಂದಲೂ ಇರುವ ಪ್ರತೀತಿ. ಅದು ನಿಜವಾಗಿದೆ ಕೂಡ. ಈ ಮೊದಲು ದೀಪಿಕಾ ಪಡುಕೋಣೆ ಅವರು ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ತಾಯಿ ಪಾತ್ರ ಮಾಡಿದ್ದಾರೆ. ಇದು ಅತಿಥಿ ಪಾತ್ರ. ‘ಜವಾನ್’ ಸಿನಿಮಾದಲ್ಲೂ ಅವರಿಗೆ ತಾಯಿ ಪಾತ್ರ ಸಿಕ್ಕಿದೆ. ‘ಕಲ್ಕಿ 2898 ಎಡಿ’ ಚಿತ್ರದಲ್ಲೂ ದೀಪಿಕಾ ಪಡುಕೋಣೆ ಅವರು ಗರ್ಭಿಣಿ ಆಗಿ ಕಾಣಿಸಿಕೊಂಡಿದ್ದಾರೆ. ಈಗ ಅವರಿಗೆ ಇದೇ ರೀತಿಯ ಪಾತ್ರ ಬಂದಿದೆ.
ಶಾರುಖ್ ಖಾನ್ ಹಾಗೂ ಸುಹಾನಾ ಖಾನ್ ಅವರು ‘ಕಿಂಗ್’ ಹೆಸರಿನ ಸಿನಿಮಾ ಮಾಡುತ್ತಿದ್ದರೆ. ಈ ಚಿತ್ರಕ್ಕೆ ಸಿದ್ದಾರ್ಥ್ ಆನಂದ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ. ಸಿದ್ದಾರ್ಥ್ ಆನಂದ್ ಸಿನಿಮಾ ಎಂದಾಗ ನಿರೀಕ್ಷೆ ಹೆಚ್ಚು. ಅವರು ಒಳ್ಳೆಯ ಚಿತ್ರಗಳನ್ನು ನೀಡುತ್ತಾರೆ ಎಂಬ ನಂಬಿಕೆ ಪ್ರೇಕ್ಷಕರಲ್ಲಿ ಮೂಡಿದೆ. ಸಿದ್ದಾರ್ಥ್ ಈಗ ದೀಪಿಕಾ ಜೊತೆ ಮಾತುಕತೆ ಆರಂಭಿಸಿದ್ದಾರಂತೆ.
ಸುಹಾನಾಗೆ ತಾಯಿ ಪಾತ್ರ ಮಾಡಲು ದೀಪಿಕಾ ರೆಡಿ ಆಗಿದ್ದಾರಂತೆ. ದೀಪಿಕಾ ಅವರದ್ದು ಅತಿಥಿ ಪಾತ್ರ ಎಂದು ಕೂಡ ಹೇಳಲಾಗುತ್ತಿದೆ. ಇನ್ನೂ ಈ ಪಾತ್ರದ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಈ ಬಗ್ಗೆ ಅಧಿಕೃತ ಘೋಷಣೆ ಆದ ಬಳಿಕವೇ ಆ ಬಗ್ಗೆ ಮಾಹಿತಿ ಸಿಗಲಿದೆ.
ಇದನ್ನೂ ಓದಿ: ಶಾರುಖ್ ಖಾನ್-ಸುಕುಮಾರ್ ಸಿನಿಮಾ ಮಾಡೋ ಸುದ್ದಿ ಶುದ್ಧ ಸುಳ್ಳು; ಇಲ್ಲಿದೆ ಸಾಕ್ಷಿ
ಸಿದ್ದಾರ್ಥ್ ಆನಂದ್ ಹಾಗೂ ದೀಪಿಕಾ ಮಧ್ಯೆ ಒಳ್ಳೆಯ ಗೆಳೆತನ ಇದೆ. ಸಿದ್ದಾರ್ಥ್ ನಿರ್ದೇಶನದ ‘ಪಠಾಣ್’, ‘ಫೈಟರ್’ ಚಿತ್ರದಲ್ಲಿ ದೀಪಿಕಾ ನಟಿಸಿದ್ದಾರೆ. ಅವರು ಈ ಚಿತ್ರದಲ್ಲೂ ಒಟ್ಟಾಗಿ ಕೆಲಸ ಮಾಡೋ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.