AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇನ್ನೂ ಯಾರ್​ ಯಾರನ್ನು ವಶ ಮಾಡಿಕೊಳ್ತೀರಿ’ ಎಂಬ ಪ್ರಶ್ನೆಗೆ ಹೃದಯ ಕದಿಯೋ ಉತ್ತರ ಕೊಟ್ಟ ತಮನ್ನಾ

ತಮನ್ನಾ ಭಾಟಿಯಾ ಅಭಿನಯದ ‘ಒದೆಲಾ 2’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಏಪ್ರಿಲ್ 17 ರಂದು ಬಿಡುಗಡೆಯಾಗುತ್ತಿರುವ ಈ ಭಯಾನಕ ಚಿತ್ರದಲ್ಲಿ ತಮನ್ನಾ ಮತ್ತು ವಸಿಷ್ಠ ಸಿಂಹ ಮುಖ್ಯ ಪಾತ್ರದಲ್ಲಿದ್ದಾರೆ. ಟ್ರೈಲರ್‌ನಲ್ಲಿ ತಮನ್ನಾ ಅವರ ಅದ್ಭುತ ನಟನೆ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದೆ. ಅವರಿಗೆ ಕೇಳಿದ ಪ್ರಶ್ನೆ ಹಾಗೂ ಅವರು ಕೊಟ್ಟ ಉತ್ತರ ಗಮನ ಸೆಳೆದಿದೆ.

‘ಇನ್ನೂ ಯಾರ್​ ಯಾರನ್ನು ವಶ ಮಾಡಿಕೊಳ್ತೀರಿ’ ಎಂಬ ಪ್ರಶ್ನೆಗೆ ಹೃದಯ ಕದಿಯೋ ಉತ್ತರ ಕೊಟ್ಟ ತಮನ್ನಾ
ತಮನ್ನಾ
ರಾಜೇಶ್ ದುಗ್ಗುಮನೆ
|

Updated on: Apr 09, 2025 | 7:33 AM

Share

ನಟಿ ತಮನ್ನಾ ಭಾಟಿಯಾ (Tamannaah Bhatia) ಅವರು ‘ಒದೆಲಾ 2’ ಚಿತ್ರದ ಮೂಲಕ ಪ್ರೇಕ್ಷಕರ ಎದುರು ಬರಲು ಸಿದ್ಧರಾಗಿದ್ದಾರೆ. ಮುಂಬೈನಲ್ಲಿ ಈ ಚಿತ್ರದ ಟ್ರೇಲರ್ ಲಾಂಚ್ ನಡೆದಿದೆ. ಟ್ರೇಲರ್​ನಲ್ಲಿ ತಮನ್ನಾ ಅವರ ನಟನೆ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ತಮನ್ನಾ ಭಾಟಿಯಾ ಮತ್ತು ವಸಿಷ್ಠ ಸಿಂಹ (Vasishta Simha) ಅವರು ಈ ಸಿನಿಮಾದಲ್ಲಿ ಮುಖಾಮಖಿ ಆಗುತ್ತಿದ್ದಾರೆ. ಈ ಸಿನಿಮಾ ಏಪ್ರಿಲ್ 17ರಂದು ರಿಲೀಸ್ ಆಗುತ್ತಿದೆ. ಚಿತ್ರದ ಟ್ರೇಲರ್ ಲಾಂಚ್ ಈವೆಂಟ್​ನಲ್ಲಿ ಅವರು ಹೇಳಿದ ಮಾತು ಗಮನ ಸೆಳೆದಿದೆ.

ತಮನ್ನಾ ಸಖತ್ ಗ್ಲಾಮರಸ್. ಅವರು ಯಾವುದೇ ವೇದಿಕೆ ಮೇಲೆ ಕಾಣಿಸಿಕೊಂಡರೂ ಗಮನ ಸೆಳೆಯುತ್ತಾರೆ. ಇದೊಂದು ಹಾರರ್ ಸಿನಿಮಾ. ಹೀಗಾಗಿ, ಅವರಿಗೆ ಅದೇ ರೀತಿಯ ಪ್ರಶ್ನೆಗಳು ಎದುರಾಗುತ್ತವೆ. ‘ನಿಮಗೆ ವಿಶೇಷ ಶಕ್ತಿ ಸಿಕ್ಕರೆ ಜೀವನದಲ್ಲಿ ಯಾರ್ಯಾರನ್ನು ವಶ ಮಾಡಿಕೊಳ್ಳಲು ಬಯಸುತ್ತೀರಿ’ ಎಂದು ಕೇಳಲಾಯಿತು. ಇದಕ್ಕೆ ತಮನ್ನಾ ಎಲ್ಲರ ಹೃದಯ ಕದಿಯುವ ಉತ್ತರ ನೀಡಿದ್ದಾರೆ. ‘ನಾನು ಎಲ್ಲರ ಹೃದಯದಲ್ಲಿ ನೆಲೆಸಲು ಬಯಸುತ್ತೇನೆ’ ಎಂದು ಹೇಳಿದ್ದಾರೆ. ಅವರ ಉತ್ತರಕ್ಕೆ ಮೆಚ್ಚುಗೆ ಸಿಕ್ಕಿದೆ.

ಇದನ್ನೂ ಓದಿ
Image
ಅಂದುಕೊಂಡಿದ್ದಕ್ಕಿಂತ ಹೆಚ್ಚೇ ಆಗಿದೆ; ಮಗನ ಆರೋಗ್ಯದ ಅಪ್​ಡೇಟ್ ಕೊಟ್ಟ ಪವನ್
Image
ಅಲ್ಲು ಅರ್ಜುನ್ ಮನೆ ಎದುರು ಅಭಿಮಾನಿಗಳ ದಂಡು; ಎಚ್ಚರಿಕೆಯಿಂದ ನಡೆದುಕೊಂಡ ನಟ
Image
ಕೇರೆ ಹಾವು ರಕ್ಷಿಸಿ ಅದರ ಮಹತ್ವ ತಿಳಿಸಿದ ದುನಿಯಾ ವಿಜಯ್
Image
ಶಾಲೆಯಲ್ಲಿ ಬೆಂಕಿ ಅವಘಡ, ಪವನ್ ಕಲ್ಯಾಣ್ ಪುತ್ರನಿಗೆ ತೀವ್ರ ಗಾಯ

ತಮನ್ನಾ ಭಾಟಿಯಾ ಅವರು ಶಿವ ಶಕ್ತಿ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಅಶೋಕ್ ತೇಜ ಅವರು ‘ಓದೆಲ 2’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಸಂಪತ್ ನಂದಿ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಪಾತ್ರವರ್ಗದಲ್ಲಿ ತಮನ್ನಾ ಭಾಟಿಯಾ, ವಸಿಷ್ಠ ಸಿಂಹ ಇದ್ದಾರೆ. ವಸಿಷ್ಠ ಅವರದ್ದು ನೆಗೆಟಿವ್ ಪಾತ್ರ. ಕನ್ನಡದ ನಟ ಶರತ್ ಲೋಹಿತಾಶ್ವ ಪ್ರಮುಖ ಪಾತ್ರ ಮಾಡಿದ್ದಾರೆ. ಹೆಭಾ ಪಟೇಲ್ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.

ಇದನ್ನೂ ಓದಿ: ‘ಓದೆಲ 2’ ಟ್ರೇಲರ್: ತಮನ್ನಾ, ವಸಿಷ್ಠ ಸಿಂಹ ಮುಖಾಮುಖಿ; ಹಾರರ್ ಪ್ರಿಯರಿಗೆ ಹಬ್ಬ

ಸದ್ಯ ಮಕ್ಕಳಿಗೆ ಪರೀಕ್ಷೆಗಳ ಅಬ್ಬರ ಮುಗಿದಿದ್ದು, ಈಗ ಬೇಸಿಗೆ ರಜೆ ಆರಂಭ ಆಗಿದೆ. ಈ ಸಂದರ್ಭದಲ್ಲಿ ಸಿನಿಮಾಗಳನ್ನು ರಿಲೀಸ್ ಮಾಡಿದರೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸುತ್ತಾರೆ ಎಂಬುದು ಚಿತ್ರತಂಡದವರ ನಂಬಿಕೆ.  2022ರಲ್ಲಿ ರಿಲೀಸ್ ಆದ ‘ಒಡೆಲಾ ರೈಲ್ವೇ ಸ್ಟೇಷನ್’ ಚಿತ್ರದ ಮುಂದಿನ ಭಾಗ ಇದಾಗಿದೆ. ತಮನ್ನಾ ಅವರು ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾ ಹಿಟ್ ಆದ ಕಾರಣ ಸೀಕ್ವೆಲ್ ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ