ಖ್ಯಾತ ಗಾಯಕಿ ಶ್ರೆಯಾ ಘೋಷಾಲ್ ಪತಿ ಯಾರು ಗೊತ್ತೆ? ಆಸ್ತಿ ಮೌಲ್ಯ ಎಷ್ಟು?
Shreya Ghoshal: ಶ್ರೆಯಾ ಘೋಷಾಲ್ ಭಾರತದ ನಂಬರ್ 1 ಗಾಯಕಿ, ಸುಮಾರು 20 ವರ್ಷಗಳಿಂದಲೂ ಶ್ರೆಯಾ ಘೋಷಾಲ್ ಸಿನಿಮಾ ಹಾಡುಗಳನ್ನು ಹಾಡುತ್ತಿದ್ದಾರೆ. ಇಂದಿಗೂ ಸಹ ಅವರ ಬೇಡಿಕೆ ತುಸುವೂ ಕಡಿಮೆ ಆಗಿಲ್ಲ. ಶ್ರೆಯಾ ಘೋಷಾಲ್ ಅವರಂತೆ ಅವರ ಪತಿಯೂ ಸಹ ಯಶಸ್ವಿ ಉದ್ಯಮಿ. ಶ್ರೆಯಾ ಘೋಷಾಲ್ ಅವರ ಪತಿಯ ಬಗ್ಗೆ ಇಲ್ಲಿ ತಿಳಿಯಿರಿ...

ಶ್ರೆಯಾ ಘೋಷಾಲ್ (Shreya Goshal) ಭಾರತದ ನಂಬರ್ ಒನ್ ಗಾಯಕಿ. ದಶಕಗಳಿಂದಲೂ ನಂಬರ್ 1 ಪಟ್ಟವನ್ನು ಉಳಿಸಿಕೊಂಡಿದ್ದಾರೆ ಶ್ರೆಯಾ ಘೋಷಲ್. ಭಾರತದ ಬಲು ಬೇಡಿಕೆಯ ಮತ್ತು ದುಬಾರಿ ಗಾಯಕಿ ಶ್ರೆಯಾ ಘೋಷಾಲ್. ಭಾರತದ ಬಹುತೇಕ ಎಲ್ಲ ಭಾಷೆಗಳಲ್ಲಿಯೂ ಶ್ರೆಯಾ ಘೋಷಾಲ್ ಹಾಡು ಹಾಡಿದ್ದಾರೆ. ಸೌಲ್ಯ, ಸಜ್ಜನ, ವಿನಯವಂತಿಕೆಯಿಂದ ಸೆಳೆಯುವ ಶ್ರೆಯಾ ಘೋಷಲ್ ಬಾಲಿವುಡ್ನ (Bollywood) ಶ್ರೀಮಂತ ಹಾಡುಗಾರ್ತಿ. ಎಷ್ಟೇ ಶ್ರೀಮಂತಿಕೆ ಇದ್ದರೂ, ಅವರ ಪತಿಯ ಅರ್ಧದಷ್ಟೂ ಶ್ರೀಮಂತಿಗೆ ಹೊಂದಿಲ್ಲ ಶ್ರೆಯಾ ಘೋಷಲ್. ಶ್ರೆಯಾ ಘೋಷಾಲ್ ಪತಿ ಬಾಲಿವುಡ್ ನಟನೋ ಅಥವಾ ಸಂಗೀತ ನಿರ್ದೇಶಕನೋ ಅಲ್ಲ ಅವರು ದೇಶದ ಅತ್ಯುತ್ತಮ ನವ್ಯೂದ್ಯಮಿಗಳಲ್ಲಿ ಒಬ್ಬರು.
ಶ್ರೆಯಾ ಘೋಷಲ್ ಪತಿಯ ಹೆಸರು ಶೈಲಾಧಿತ್ಯ ಮುಖ್ಯೋಪಾಧ್ಯಾಯ್. ಸ್ಮಾರ್ಟ್ಫೋನ್ ಬಳಸುವ ಬಹುತೇಕರಿಗೆ ಗೊತ್ತಿರುವ ಆಪ್ ಆಗಿರುವ ಟ್ರೂಕಾಲರ್ನ ಗ್ಲೋಬಲ್ ಸಿಇಓ ಇವರು. 2009 ರಲ್ಲಿ ಪ್ರಾರಂಭವಾದ ಟ್ರೂಕಾಲರ್ ಸಂಸ್ಥೆಯನ್ನು 2022 ರಲ್ಲಿ ಸೇರಿಕೊಂಡ ಶೈಲಾಧಿತ್ಯ ಮುಖ್ಯೋಪಾಧ್ಯಾಯ್ ಕೆಲವೇ ವರ್ಷಗಳಲ್ಲಿ ಅದರ ಗ್ಲೋಬಲ್ ಸಿಇಓ ಆಗಿದ್ದಾರೆ. ಈ ಸಂಸ್ಥೆಯ ವಾರ್ಷಿಕ ಆದಾಯ 1660 ಕೋಟಿಗೂ ಹೆಚ್ಚು. ಇದರಲ್ಲಿ ಹೆಚ್ಚಿನ ಪಾಲು ಭಾರತದಿಂದ ಬರುತ್ತದೆಯಂತೆ.
ಇದನ್ನೂ ಓದಿ:‘ಚಪ್ಪಾಳೆ ಬೇಡ’: ಕೊಲ್ಕತ್ತಾನಲ್ಲಿ ಶ್ರೆಯಾ ಘೋಷಲ್ ಗಾನ ಪ್ರತಿಭಟನೆ
ಶೈಲಾಧಿತ್ಯ ಮುಖ್ಯೋಪಾಧ್ಯಾಯ್ ಅವರು ಹಲವು ಭಾರತೀಯ ಮತ್ತು ಅಂತರಾಷ್ಟ್ರೀಯ ಕಂಪೆನಿಗಳ ಮುಖ್ಯ ಸ್ಥಾನಗಳಲ್ಲಿ ಕೆಲಸ ಮಾಡಿದ್ದಾರೆ. ಶೈಲಾಧಿತ್ಯ ಅವರು ಬ್ಯುಸಿನೆಸ್ ಡೆವಲೆಪ್ಮೆಂಟ್, ಮೊಬೈಲ್ ಆಪ್, ಸಾಫ್ಟ್ವೇರ್ ಮ್ಯಾನೇಜ್ಮೆಂಟ್ಗಳಲ್ಲಿ ಪರಿಣಿತಿ ಪಡೆದಿದ್ದಾರೆ. ಈ ಹಿಂದೆ ಅವರು ಅಂತರಾಷ್ಟ್ರೀಯ ಬ್ರ್ಯಾಂಡ್ಗಳಾದ ಕ್ಲೆವರ್ ಟ್ಯಾಪ್ ಹಾಗೂ ಇನ್ನೂ ಕೆಲವು ಸಂಸ್ಥೆಗಳಿಗೆ ಪ್ರೆಸಿಡೆಂಟ್, ವೈಸ್ ಪ್ರೆಸಿಡೆಂಟ್ ಆಗಿ ಕೆಲಸ ಮಾಡಿದ್ದಾರೆ. ಈ ಹಿಂದೆ ಅವರು ಹಿಪ್ಕ್ಯಾಸ್ಕ್ ಹೆಸರಿನ ಮೊಬೈಲ್ ಆಪ್ ಅನ್ನು ಪ್ರಾರಂಭ ಮಾಡಿದ್ದರು. ವೈನ್ ಉದ್ಯಮಕ್ಕೆ ಸಂಬಂಧಿಸಿದ ಆಪ್ ಅದಾಗಿತ್ತು. ಅದಾದ ಬಳಿಕ ಯುವ ಉದ್ಯಮಿಗಳಿಗೆ ನೆರವು ನೀಡಲು ಪಾಯಿಂಟ್ಶೆಲ್ಫ್ ಹೆಸರಿನ ಸಂಸ್ಥೆಯೊಂದನ್ನು ಸಹ ತೆರೆದರು.
ಶ್ರೆಯಾ ಘೋಷಾಲ್ ಹಾಗೂ ಶೈಲಾಧಿತ್ಯ ಅವರು ಸುಮಾರು 10 ವರ್ಷ ಪ್ರೀತಿಸಿ 2015 ರಲ್ಲಿ ವಿವಾಹವಾದರು. 2021 ರಲ್ಲಿ ಇವರಿಗೆ ಗಂಡು ಮಗುವಿನ ಜನನವಾಗಿದೆ. ಶ್ರೆಯಾ ಘೋಷಾಲ್ ಸುಮಾರು 20 ವರ್ಷಗಳಿಂದಲೂ ಭಾರತೀಯ ಸಂಗೀತ ಕ್ಷೇತ್ರದಲ್ಲಿ ಗುರುತು ಹೊಂದಿದ್ದಾರೆ. ಈಗಲೂ ಅವರು ಭಾರತದ ನಂಬರ್ 1 ಗಾಯಕಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ