ಗಾಯಕನ ದುಬಾರಿ ಸಂಭಾವನೆ, ಒಂದು ಹಾಡಿಗೆ ಎಷ್ಟು ಪಡೆಯುತ್ತಾರೆ ಶ್ರೀವಲ್ಲಿ ಗಾಯಕ
Sid Sriram: ‘ಶ್ರೀವಲ್ಲಿ’, ‘ಇಂಕೇಮ್ ಇಂಕೇಮ್ ಕಾವಾಲೆ’ ಕನ್ನಡದ ‘‘ಜಗವೇ ನೀನು ಗೆಳತಿಯೇ’, ‘ನೀ ಸಿಗೊವರೆಗೂ’, ‘ಹಾಯಾಗಿದೆ’ ಇನ್ನೂ ಹಲವಾರು ಸೂಪರ್ ಹಿಟ್ ಹಾಡುಗಳನ್ನು ಹಾಡಿರುವ ಗಾಯಕ ಸಿದ್ ಶ್ರೀರಾಮ್ ಪ್ರತಿ ಹಾಡಿಗೆ ಪಡೆಯುವ ಸಂಭಾವನೆ ಎಷ್ಟು ಲಕ್ಷ ಗೊತ್ತೆ? ಈಗ ಸಿದ್ ಶ್ರೀರಾಮ್ ದುಬಾರಿ ಸಂಭಾವನೆ ಬಗ್ಗೆ ಕೆಲ ಸಂಗೀತ ನಿರ್ದೇಶಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿದ್ ಶ್ರೀರಾಮ್ (Sid Sriram), ಅಪರೂಪದ ಕಂಠಸಿರಿ ಮತ್ತು ಸ್ವರಗಳ ಮೇಲೆ ಅದ್ಭುತವಾದ ಹಿಡಿತವುಳ್ಳ ಗಾಯಕ. ತಮಿಳು ಮೂಲದವರಾದರೂ ಕ್ಯಾಲಿಫೋರ್ನಿಯಾದಲ್ಲಿ (California) ವಾಸವಿದ್ದ ಸಿದ್ ಶ್ರೀರಾಮ್ ಅಲ್ಲಿಯೇ ತಾಯಿಯವರಿಂದ ಕರ್ನಾಟಕ ಸಂಗೀತ ಕಲಿತರು. ಅದರಲ್ಲಿ ಪಾರಂಗತರಾದರು. ಬಳಿಕ ಎಆರ್ ರೆಹಮಾನ್, ಸಿದ್ ಶ್ರೀರಾಮ್ ಪ್ರತಿಭೆಯನ್ನು ಗುರುತಿಸಿ ಅವರಿಂದ ಹಾಡುಗಳನ್ನು ಹಾಡಿಸಿದರು. ಈಗ ಸಿದ್ ಶ್ರೀರಾಮ್, ಭಾರತದ ಬಲು ಬೇಡಿಕೆಯ ಹಾಡುಗಾರರಲ್ಲಿ ಒಬ್ಬರು. ಆದರೆ ಇತ್ತೀಚೆಗೆ ಸಂಗೀತ ನಿರ್ದೇಶಕರು ಸಿದ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕೆ ಕಾರಣ ಅವರು ಬೇಡಿಕೆ ಇಡುತ್ತಿರುವ ದುಬಾರಿ ಸಂಭಾವನೆಯಂತೆ.
‘ಶ್ರೀವಲ್ಲಿ’, ‘ನೀ ಕಾಳಕಿ’, ‘ಇಂಕೇಮ್ ಇಂಕೇಮ್’ ಕನ್ನಡದಲ್ಲಿ ‘ಜಗವೇ ನೀನು ಗೆಳತಿಯೇ’, ‘ನೀ ಸಿಗೊವರೆಗೂ’, ‘ಹಾಯಾಗಿದೆ’ ಇನ್ನೂ ಹಲವಾರು ಸೂಪರ್ ಹಿಟ್ ಹಾಡುಗಳನ್ನು ಹಾಡಿರುವ ಸಿದ್ ಶ್ರೀರಾಮ್ ಒಂದು ಹಾಡು ಹಾಡಲು ಬರೋಬ್ಬರಿ 12 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರಂತೆ. ಇದು ಸಾಧಾರಣ ಸಂಭಾವನೆ ಅಲ್ಲ. ಏಕೆಂದರೆ ಒಬ್ಬ ಬೇಡಿಕೆಯ ಗಾಯಕ ಪ್ರತಿದಿನ ಸುಮಾರು 5 ರಿಂದ 10 ಹಾಡುಗಳನ್ನು ರೆಕಾರ್ಡ್ ಮಾಡುತ್ತಾರೆ. ಕೆಲವೊಮ್ಮೆ ಇನ್ನೂ ಹೆಚ್ಚು ಹಾಡುಗಳನ್ನು ರೆಕಾರ್ಡ್ ಮಾಡುವುದು ಸಹ ಇದೆ.
ಇದನ್ನೂ ಓದಿ:ಐದು ಸಾವಿರ ಸಂಭಾವನೆ ಹೆಚ್ಚಿಸಿಕೊಳ್ಳಲು 10 ಸಿನಿಮಾ ಮಾಡಿದ್ದ ರಾಜ್ಕುಮಾರ್
ಸಿದ್ ಶ್ರೀರಾಮ್ ದುಬಾರಿ ಸಂಭಾವನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸಂಗೀತ ನಿರ್ದೇಶಕ ಘಂಟಾಡಿ ಕೃಷ್ಣ, ಸಿದ್ ಶ್ರೀರಾಮ್ ಭಾರಿ ಸಂಭಾವನೆ ಪಡೆಯುತ್ತಿದ್ದಾರೆ. ಒಂದು ಹಾಡು ಹಾಡಲು ಅವರು 12 ಲಕ್ಷ ರೂಪಾಯಿ ಹಣ ಪಡೆಯುತ್ತಿದ್ದಾರೆ. ಇದರಿಂದ ಸಂಗೀತ ನಿರ್ದೇಶಕರು, ಸಿನಿಮಾ ನಿರ್ಮಾಪಕರಿಗೆ ತೊಂದರೆ ಆಗುತ್ತಿದೆ. ಎಸ್ಪಿ ಬಾಲಸುಬ್ರಹ್ಮಣ್ಯಂ ಅಂಥಹಾ ಮಹಾನ್ ಗಾಯಕರೇ ಹಾಡಿಗೆ ಒಂದು ಲಕ್ಷ ಸಹ ಪಡೆಯುತ್ತಿರಲಿಲ್ಲ. ಈ ಯುವ ಗಾಯಕ ಒಂದು ಹಾಡಿಗೆ 12 ಲಕ್ಷ ಪಡೆಯುತ್ತಿದ್ದಾರೆ ಇದು ಬಹಳ ಹೆಚ್ಚಾಯ್ತು ಎಂದಿದ್ದಾರೆ.
ಈ ಹೊಸ ಗಾಯಕರು ಸಂಗೀತದ ಮಾರುಕಟ್ಟೆಯನ್ನು ಹಾಳು ಮಾಡಿದ್ದಾರೆ. ಇವರು ಭಾರಿ ದುಬಾರಿ ಸಂಭಾವನೆ ಡಿಮ್ಯಾಂಡ್ ಮಾಡುತ್ತಿರುವ ಕಾರಣ ಹಳೆಯ ಲೆಜೆಂಡರಿ ಗಾಯಕರಾದ ಸೋನು ನಿಗಂ, ಶ್ರೆಯಾ ಘೋಷಾಲ್, ಕುಮಾರ್ ಸಾನು, ಉದಿತ್ ನಾರಾಯಣ್ ಇನ್ನೂ ಕೆಲವು ಗಾಯಕರು ತಮ್ಮ ಸಂಭಾವನೆಯನ್ನೂ ಸಹ ಹೆಚ್ಚಿಸಿಕೊಂಡಿದ್ದಾರೆ. ಇದರಿಂದ ಸಂಗೀತ ನಿರ್ದೇಶಕರುಗಳಿಗೆ ಸಮಸ್ಯೆ ಆಗಿದೆ. ನಮ್ಮ ವಿಷನ್ ಏನೋ ಒಂದಿರುತ್ತದೆ, ಆದರೆ ಸಂಭಾವನೆ, ಕ್ರಿಯೇಟಿವಿಟಿ ನಡುವೆ ಬರುತ್ತಿದೆ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:35 am, Sun, 13 April 25