ಈ ವಾರ ಒಟಿಟಿಗೆ ಬರುತ್ತಿವೆ ಮೂರು ಕನ್ನಡ ಸಿನಿಮಾ, ಜೊತೆಗೆ ಇನ್ನೊಂದಿಷ್ಟು
OTT Release this week: ಐಪಿಎಲ್ ಹವಾದಿಂದಾಗಿ ಚಿತ್ರಮಂದಿರದಲ್ಲಿ ಹೆಚ್ಚು ಸಿನಿಮಾಗಳು ಬಿಡುಗಡೆ ಆಗುತ್ತಿಲ್ಲ. ಬಿಡುಗಡೆ ಆದ ಕೆಲವು ಸಿನಿಮಾಗಳು ಸಹ ಉತ್ತರ ಪ್ರದರ್ಶನ ಕಾಣುತ್ತಿಲ್ಲ. ಆದರೆ ಒಟಿಟಿಗೆ ಮಾತ್ರ ಕಳೆದ ಕೆಲ ವಾರಗಳಲ್ಲಿ ಕೆಲವು ಒಳ್ಳೆಯ ಸಿನಿಮಾಗಳು ಬಂದಿವೆ. ಈ ವಾರವೂ ಸಹ ಒಟಿಟಿಗೆ ಕೆಲ ಉತ್ತಮ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ವಿಶೇಷವೆಂದರೆ ಈ ವಾರ ಮೂರು ಕನ್ನಡ ಸಿನಿಮಾಗಳು ಒಟಿಟಿಗೆ ಬರುತ್ತಿವೆ. ಅದರ ಜೊತೆಗೆ ಇತರ ಭಾಷೆಯ ಕೆಲ ಒಳ್ಳೆಯ ಸಿನಿಮಾಗಳೂ ಸಹ ಇವೆ. ಇಲ್ಲಿದೆ ನೋಡಿ ಪಟ್ಟಿ...

Ott Release This Week
- ಪ್ರಜ್ವಲ್ ದೇವರಾಜ್ ನಟನೆಯ ‘ರಾಕ್ಷಸ’ ಕನ್ನಡ ಸಿನಿಮಾ ಇದೀಗ ಸನ್ ನೆಕ್ಟ್ಸ್ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ. ಹಾರರ್ ಥ್ರಿಲ್ಲರ್ ಕತೆ ಹೊಂದಿರುವ ಈ ಸಿನಿಮಾ ಸೋನಲ್ ಮೊಂಥಾರಿಯೊ, ಕೆಎಸ್ ಶ್ರೀಧರ್ ಇನ್ನೂ ಕೆಲವರು ನಟಿಸಿದ್ದಾರೆ. ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಸಂಗೀತವಿದೆ. ಸಿನಿಮಾ ಸನ್ ನೆಕ್ಟ್ಸ್ನಲ್ಲಿ ವೀಕ್ಷಣೆಗೆ ಲಭ್ಯವಿದೆ.
- ನಿರ್ಮಾಪಕ ಕೆ ಮಂಜು ಅವರ ಪುತ್ರ ಶ್ರೇಯಸ್ ಮಂಜುನಾಥ್ ಹಾಗೂ ಕಣ್ಸನ್ನೆ ಸುಂದರಿ ಪ್ರಿಯಾ ಪ್ರಕಾಶ್ ವಾರಿಯರ್ ನಟಿಸಿರುವ ರೊಮ್ಯಾಂಟಿಕ್ ಪ್ರೇಮಕತೆ ‘ವಿಷ್ಣುಪ್ರಿಯ’ ಸಿನಿಮಾ ಇದೇ ವಾರ ಒಟಿಟಿಗೆ ಬಂದಿದೆ. ಕೆಲ ವಾರಗಳ ಹಿಂದೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ನಿರೀಕ್ಷಿತ ಪ್ರದರ್ಶನ ಕಾಣಲಿಲ್ಲ. ಈಗ ಅಮೆಜಾನ್ ಪ್ರೈಂನಲ್ಲಿ ಸ್ಟ್ರೀಮ್ ಆಗುತ್ತಿದೆ.
- ಇತ್ತೀಚೆಗೆ ಮಹಿಳಾ ಪ್ರಧಾನ ಸಿನಿಮಾಗಳು ತುಸು ಕಡಿಮೆ ಆಗಿವೆ. ಮಹಿಳಾ ಪ್ರಧಾನ ಎಂದರೆ ಮಹಿಳೆಯರಿಗೆ ಕಾಖಿ ತೊಡಿಸಿ ಫೈಟ್ ಮಾಡಿಸುವ ಸಿನಿಮಾಗಳು ಮಾತ್ರವಲ್ಲ ಎಂಬುದನ್ನು ತೋರಿಸಿಕೊಡುವ ಕೆಲವೇ ಸಿನಿಮಾಗಳಲ್ಲಿ ಒಂದು ‘ಪಾರು ಪಾರ್ವತಿ’. ದೀಪಿಕಾ ದಾಸ್ ನಟಿಸಿರುವ ಈ ಟ್ರಾವೆಲ್ ಸಿನಿಮಾ ಕೆಲ ವಾರಗಳ ಹಿಂದಷ್ಟೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿತ್ತು. ಈಗ ಈ ಸಿನಿಮಾ ಅಮೆಜಾನ್ ಪ್ರೈಂನಲ್ಲಿದೆ.
- ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ನಟನೆಯ ‘ಛಾವಾ’ ಸಿನಿಮಾ ಏಪ್ರಿಲ್ 11 ರಿಂದ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಂ ಆಗುತ್ತಿದೆ. ಶಿವಾಜಿಯ ಪುತ್ರ ಸಾಂಬಾಜಿಯ ಕತೆಯನ್ನು ಹೊಂದಿರುವ ಸಿನಿಮಾ ಇದಾಗಿದ್ದು, ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಭಾರಿ ಯಶಸ್ಸು ಕಂಡಿದೆ. ಇದೀಗ ಒಟಿಟಿಗೆ ಬಂದಿದ್ದು, ಹಲವು ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯವಿದೆ.
- ತೆಲುಗಿನ ಸ್ಟಾರ್ ನಟ ನಾನಿ ನಿರ್ಮಾಣ ಮಾಡಿರುವ ಸಿನಿಮಾ ‘ಕೋರ್ಟ್: ಸ್ಟೇಟ್ vs ನೋಬಡಿ’ ಸಿನಿಮಾ ಕೆಲ ವಾರಗಳ ಹಿಂದಷ್ಟೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಉತ್ತಮ ಪ್ರದರ್ಶನ ಕಂಡಿತ್ತು. ಇದೀಗ ಒಟಿಟಿಗೂ ಬಂದಿದೆ ಈ ಸಿನಿಮಾ. ಚಿತ್ರಮಂದಿರದಲ್ಲಿ ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ದೊರೆತಿತ್ತು. ಈ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ವೀಕ್ಷಣೆಗೆ ಲಭ್ಯವಿದೆ.
- ‘ಪ್ರವೀಣ್ಕೂಡು ಶಪ್ಪು’ ಹೆಸರಿನ ಮಲಯಾಳಂ ಸಿನಿಮಾ ಇದೇ ವಾರ ಒಟಿಟಿಗೆ ಬಂದಿದೆ. ಏಪ್ರಿಲ್ 10 ರಿಂದ ಈ ಸಿನಿಮಾ ಸೋನಿ ಲಿವ್ನಲ್ಲಿ ಸ್ಟ್ರೀಂ ಆಗುತ್ತಿದೆ. ಹಾಸ್ಯ ಮಿಶ್ರಿತ ಥ್ರಿಲ್ಲರ್ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾದಲ್ಲಿ ಶೋಬಿನ್ ಸಾಹಿರ್, ಬಾಸಿಲ್ ಜೋಸೆಫ್, ಚೆಂಬನ್ ವಿನೋದ್ ಅವರುಗಳು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.