ಒಟಿಟಿಗೆ ಬಂದ ನಂತರವೂ ಸಾಧನೆ ಮಾಡಿದ ‘ಛಾವ’; ಭಾರತದಲ್ಲೇ 600 ಕೋಟಿ ರೂ. ಗಳಿಕೆ
ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ, ಅಕ್ಷಯ್ ಖನ್ನಾ ಮುಂತಾದವರು ನಟಿಸಿದ ‘ಛಾವ’ ಸಿನಿಮಾ ಭಾರತದ ಬಾಕ್ಸ್ ಆಫೀಸ್ನಲ್ಲಿ ಮೈಲಿಗಲ್ಲು ಸಾಧಿಸಿದೆ. 65ನೇ ದಿನ ಈ ಸಿನಿಮಾದ ಕಲೆಕ್ಷನ್ 600 ಕೋಟಿ ರೂಪಾಯಿ ಗಡಿ ದಾಟಿದ್ದು, ಚಿತ್ರತಂಡದವರು ಸಂಭ್ರಮಿಸಿದ್ದಾರೆ. ಒಟಿಟಿಯಲ್ಲಿ ಬಿಡುಗಡೆ ಆದ ಬಳಿಕವೂ ಹಲವು ಥಿಯೇಟರ್ಗಲ್ಲಿ ಈ ಚಿತ್ರ ಪ್ರದರ್ಶನ ಕಾಣುತ್ತಿದೆ.

2025ರಲ್ಲಿ ಅತಿ ದೊಡ್ಡ ಯಶಸ್ಸು ಕಂಡ ಸಿನಿಮಾ ‘ಛಾವ’. ವಿಕ್ಕಿ ಕೌಶಲ್ (Vicky Kaushal) ನಟನೆಯ ಈ ಸಿನಿಮಾವನ್ನು ಜನರು ಸಖತ್ ಮೆಚ್ಚಿಕೊಂಡರು. ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿದ ಈ ಸಿನಿಮಾ ಇತ್ತೀಚೆಗೆ ಒಟಿಟಿಯಲ್ಲೂ ಪ್ರಸಾರ ಆರಂಭಿಸಿತು. ಆದರೂ ಕೂಡ ಅನೇಕ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಇನ್ನೂ ಪ್ರದರ್ಶನ ಕಾಣುತ್ತಿದೆ. ವಿಶೇಷ ಏನೆಂದರೆ, ಭಾರತದ ಬಾಕ್ಸ್ ಆಫೀಸ್ನಲ್ಲೇ ‘ಛಾವ’ ಸಿನಿಮಾ 600.10 ಕೋಟಿ ರೂಪಾಯಿ ಗಳಿಸಿದೆ. 600 ಕೋಟಿ ರೂಪಾಯಿ ಕ್ಲಬ್ ಸೇರಿದ ಕೆಲವೇ ಸಿನಿಮಾಗಳ ಸಾಲಿಗೆ ‘ಛಾವ’ (Chhaava) ಕೂಡ ಸೇರ್ಪಡೆ ಆಗಿದೆ.
ಫೆಬ್ರವರಿ 14ರಂದು ‘ಛಾವ’ ಸಿನಿಮಾ ಬಿಡುಗಡೆ ಆಯಿತು. ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ, ಅಕ್ಷಯ್ ಖನ್ನಾ ಮುಂತಾದವರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡ ಈ ಚಿತ್ರಕ್ಕೆ ಲಕ್ಷ್ಮಣ್ ಉಟೇಕ್ ಅವರು ನಿರ್ದೇಶನ ಮಾಡಿದ್ದಾರೆ. ಐತಿಹಾಸಿಕ ಕಥಹಂದರ ಇರುವ ಈ ಸಿನಿಮಾದ ಕಲೆಕ್ಷನ್ 65ನೇ ದಿನಕ್ಕೆ 600 ಕೋಟಿ ರೂಪಾಯಿ ಗಡಿ ದಾಡಿದೆ. ಈ ಸಂಭ್ರಮದ ವಿಷಯವನ್ನು ಚಿತ್ರತಂಡದವರು ಹಂಚಿಕೊಂಡಿದ್ದಾರೆ.
ಭಾರತದ ಬಾಕ್ಸ್ ಆಫೀಸ್ನಲ್ಲಿ ಈ ಮೊದಲು ‘ಜವಾನ್’, ‘ಪುಷ್ಪ 2’, ‘ಸ್ತ್ರೀ 2’ ಸಿನಿಮಾಗಳು 600 ಕೋಟಿ ರೂಪಾಯಿ ಕ್ಲಬ್ ದಾಟಿದ್ದವು. ‘ಜವಾನ್’ ಸಿನಿಮಾ 643.87 ಕೋಟಿ ರೂಪಾಯಿ ಗಳಿಸಿತ್ತು. ‘ಸ್ತ್ರೀ 2’ ಸಿನಿಮಾಗೆ 627.02 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ‘ಪುಷ್ಪ 2’ ಸಿನಿಮಾ 830.10 ಕೋಟಿ ರೂಪಾಯಿ ಗಳಿಸಿ ಬೀಗಿತು. ಈಗ ‘ಛಾವ’ ಸಿನಿಮಾ 600.10 ಕೋಟಿ ರೂಪಾಯಿ ಗಳಿಸಿ ಬೀಗಿದೆ.
ಇದನ್ನೂ ಓದಿ: ಆನ್ಲೈನ್ನಲ್ಲಿ ಲೀಕ್ ಆಯ್ತು ‘ಛಾವ’ ಸಿನಿಮಾ; ನೂರಾರು ಕೋಟಿ ಬಿಸ್ನೆಸ್ಗೆ ತೊಂದರೆ
ಛತ್ರಪತಿ ಸಂಭಾಜಿ ಮಹಾರಾಜ್ ಜೀವನವನ್ನು ಆಧರಿಸಿ ‘ಛಾವ’ ಸಿನಿಮಾ ಮೂಡಿಬಂದಿದೆ. ವಿಕ್ಕಿ ಕೌಶಲ್ ಅವರು ಸಂಭಾಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯೇಸುಬಾಯಿ ಬೋಸ್ಲೆ ಪಾತ್ರವನ್ನು ರಶ್ಮಿಕಾ ಮಂದಣ್ಣ ಅವರು ಮಾಡಿದ್ದಾರೆ. ಔರಂಗ್ಜೇಬ್ ಪಾತ್ರದಲ್ಲಿ ಅಕ್ಷಯ್ ಖನ್ನಾ ಅವರು ಅಭಿನಯಿಸಿದ್ದಾರೆ. ದಿನೇಶ್ ವಿಜನ್ ನಿರ್ಮಾಣ ಮಾಡಿದ ‘ಛಾವ’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಈ ಸಿನಿಮಾದ ಗೆಲುವಿನ ಬಳಿಕ ವಿಕ್ಕಿ ಕೌಶಲ್ ಅವರ ಬೇಡಿಕೆ ಹೆಚ್ಚಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.