ಛಾವ ಸಿನಿಮಾ ದೃಶ್ಯ ಹಾಗೂ ಕುಂಭಮೇಳ ಕಾಲ್ತುಳಿತದ ಬಗ್ಗೆ ನಟಿ ಸ್ವರಾ ಭಾಸ್ಕರ್ ಟೀಕೆ
ಕುಂಭಮೇಳದಲ್ಲಿ ಉಂಟಾದ ಕಾಲ್ತುಳಿತಕ್ಕೆ ಜನರು ಸರಿಯಾದ ರೀತಿಯಲ್ಲಿ ಪ್ರತಿಕ್ರಿಯಿಸಲಿಲ್ಲ ಎಂದು ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅವರು ಅಭಿಪ್ರಾಯ ತಿಳಿಸಿದ್ದಾರೆ. ‘ಛಾವ’ ಸಿನಿಮಾದ ಒಂದು ದೃಶ್ಯವನ್ನು ಅವರು ಹೋಲಿಕೆ ಮಾಡಿದ್ದಾರೆ. ಸ್ವರಾ ಭಾಸ್ಕರ್ ಅವರ ಸೋಶಿಯಲ್ ಮೀಡಿಯಾ ಪೋಸ್ಟ್ ವೈರಲ್ ಆಗಿದೆ.

ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅವರು ತಮ್ಮ ನೇರ ನುಡಿಗಳಿಂದಾಗಿ ಅನೇಕ ಬಾರಿ ಜನರ ಟೀಕೆಗೆ ಒಳಗಾಗಿದ್ದಾರೆ. ಈಗ ಅವರು ಮಾಡಿದ ಒಂದು ಟ್ವೀಟ್ ಸಖತ್ ವಿವಾದ ಸೃಷ್ಟಿ ಮಾಡಿದೆ. ಸ್ವರಾ ಭಾಸ್ಕರ್ ಅವರು ಫಹಾದ್ ಅಹ್ಮದ್ ಜೊತೆ ಮದುವೆ ಆದ ನಂತರ ಅವರನ್ನು ಟೀಕಿಸುವವರ ಸಂಖ್ಯೆ ಹೆಚ್ಚಾಯಿತು. ಮಹಾಕುಂಭಮೇಳ ಹಾಗೂ ‘ಛಾವ’ ಸಿನಿಮಾದ ಬಗ್ಗೆ ಸ್ವರಾ ಭಾಸ್ಕರ್ ಅವರು ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಅದನ್ನು ನೋಡಿ ಕೆಲವರು ಕಿಡಿಕಾರಲು ಆರಂಭಿಸಿದ್ದಾರೆ.
ಮಹಾಕುಂಭಮೇಳದಲ್ಲಿ ಕಾಲ್ತುಳಿತ ಉಂಟಾಗಿತ್ತು. ಅದರಿಂದ ಅನೇಕರು ಪ್ರಾಣ ಕಳೆದುಕೊಂಡರು. ಆ ಘಟನೆ ಬಗ್ಗೆ ಜನರು ಆಕ್ರೋಶ ತೋರಿಸುತ್ತಿಲ್ಲ. ಆದರೆ ‘ಛಾವ’ ಸಿನಿಮಾದಲ್ಲಿ ಹಿಂದೂಗಳಿಗೆ ಹಿಂಸೆ ಕೊಡುವ ಒಂದು ದೃಶ್ಯ ಇದೆ. ಅದರ ಬಗ್ಗೆ ಈ ಸಮಾಜ ಹೆಚ್ಚು ಕೋಪ ತೋರಿಸುತ್ತಿದೆ ಎಂಬ ಅರ್ಥದಲ್ಲಿ ಸ್ವರಾ ಭಾಸ್ಕರ್ ಅವರು ಪೋಸ್ಟ್ ಮಾಡಿದ್ದಾರೆ.
A society that is more enraged at the heavily embellished partly fictionalised filmy torture of Hindus from 500 years ago than they are at the horrendous death by stampede & mismanagement + then alleged JCB bulldozer handling of corpses – is a brain & soul-dead society. #IYKYK
— Swara Bhasker (@ReallySwara) February 18, 2025
ಈ ಪೋಸ್ಟ್ನಲ್ಲಿ ಸ್ವರಾ ಭಾಸ್ಕರ್ ಅವರು ಮಹಾಕುಂಭಮೇಳದ ಹೆಸರನ್ನಾಗಲೀ, ‘ಛಾವ’ ಸಿನಿಮಾದ ಶೀರ್ಷಿಕೆಯನ್ನಾಗಲೀ ಉಲ್ಲೇಖಿಸಿಲ್ಲ. ಹಾಗಿದ್ದರೂ ಕೂಡ ಅವರು ಅದೇ ವಿಚಾರಗಳ ಬಗ್ಗೆ ಹೇಳುತ್ತಿದ್ದಾರೆ ಎಂಬುದು ಎಲ್ಲರಿಗೂ ಅರ್ಥ ಆಗಿದೆ.
ಇದನ್ನೂ ಓದಿ: ‘ಛಾವ’ ಸಿನಿಮಾ ಪ್ರದರ್ಶನದ ವೇಳೆ ಚಿತ್ರಮಂದಿರದ ಪರದೆ ಹರಿದು ಹಾಕಿದ ಕುಡುಕ
ಈ ಪೋಸ್ಟ್ ಇಟ್ಟುಕೊಂಡು ಸ್ವರಾ ಭಾಸ್ಕರ್ ಅವರನ್ನು ಖಂಡಿಸಲಾಗುತ್ತಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆ ಆಗುತ್ತಿದೆ. ಸ್ವರಾ ಭಾಸ್ಕರ್ ಅವರ ಟ್ವೀಟ್ ವೈರಲ್ ಆಗಿದೆ.
‘ಛಾವ’ ಸಿನಿಮಾ ಬಗ್ಗೆ:
ಫೆಬ್ರವರಿ 14ರಂದು ‘ಛಾವ’ ಸಿನಿಮಾ ಬಿಡುಗಡೆ ಆಯಿತು. ಈ ಸಿನಿಮಾದಲ್ಲಿ ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ, ಅಕ್ಷಯ್ ಖನ್ನಾ ಮುಂತಾದವರು ನಟಿಸಿದ್ದಾರೆ. ಲಕ್ಷ್ಮಣ್ ಉಟೇಕರ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಛತ್ರಪತಿ ಶಂಭಾಜಿ ಮಹಾರಾಜ್ ಜೀವನವನ್ನು ಆಧರಿಸಿ ಈ ಸಿನಿಮಾ ಮೂಡಿಬಂದಿದೆ. ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರ ಉತ್ತಮ ಕಲೆಕ್ಷನ್ ಮಾಡುತ್ತಿದೆ. 5 ದಿನಕ್ಕೆ 175 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:36 pm, Wed, 19 February 25