ರಾಧಿಕಾ ಹಂಚಿಕೊಂಡ ಬಾತ್ರೂಂ ಚಿತ್ರ ಕಂಡು ನೆಟ್ಟಿಗರು ಆಕ್ರೋಶ, ಅಂಥಹದ್ದೇನಿದೆ ಚಿತ್ರದಲ್ಲಿ
Radhika Apte: ನಟಿ ರಾಧಿಕಾ ಆಪ್ಟೆ ನಟನೆಯ ‘ಸಿಸ್ಟರ್ ಮಿಡ್ನೈಟ್’ ಪ್ರಖ್ಯಾತ ಭಾಫ್ಟಾ ಸಿನಿಮೋತ್ಸವಕ್ಕೆ ಆಯ್ಕೆ ಆಗಿದೆ. ರಾಧಿಕಾ ಸಹ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಕಾರ್ಯಕ್ರಮದ ಹಾಲ್ನ ಬಾತ್ರೂಂನಿಂದ ರಾಧಿಕಾ ಹಂಚಿಕೊಂಡಿರುವ ಚಿತ್ರವೊಂದು ಈಗ ವಿವಾದ ಎಬ್ಬಿಸಿದೆ. ಚಿತ್ರ ನೋಡಿದ ಹಲವು ನೆಟ್ಟಿಗರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಚಿತ್ರದಲ್ಲಿ ಅಂಥಹದ್ದೇನಿದೆ?

ನಟಿ ಅಮಲಾ ಪೌಲ್ ಇತ್ತೀಚೆಗಷ್ಟೆ ತಾಯಿ ಆಗಿದ್ದಾರೆ. ಮೊದಲಿನಿಂದಲೂ ತಮ್ಮ ಬಿಂದಾಸ್ ಜೀವನ ಶೈಲಿಯಿಂದ ಸುದ್ದಿಯಾಗಿರುವ ಅಮಲಾ ಪೌಲ್, ಇದೀಗ ತಾಯಿ ಆದ ಬಳಿಕವೂ ಅದೇ ‘ಬೇಫಿಕರ್’ ಜೀವನ ಶೈಲಿ ಮುಂದುವರೆಸಿದಂತಿದೆ. ಭಾಫ್ಟಾ (ಬ್ರಿಟೀಷ್ ಅಕಾಡೆಮಿ ಫಿಲ್ಮ್ ಅವಾರ್ಡ್ಸ್) ನಲ್ಲಿ ಭಾಗಿ ಆಗಿರುವ ನಟಿ ರಾಧಿಕಾ ಆಪ್ಟೆ, ಸಾಮಾಜಿಕ ಜಾಲತಾಣದಲ್ಲಿ ಚಿತ್ರವೊಂದನ್ನು ಹಂಚಿಕೊಂಡಿದ್ದು, ಈ ಚಿತ್ರ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಭಾಫ್ಟಾನಲ್ಲಿ ಭಾಗಿ ಆಗಿರುವ ರಾಧಿಕಾ ಆಪ್ಟೆ ಬಾತ್ರೂಂನಲ್ಲಿ ಶಾಂಪೇನ್ ಕುಡಿಯುತ್ತಾ, ಮಷೀನ್ ಒಂದರ ಸಹಾಯದಿಂದ ತಮ್ಮ ಮಗುವಿಗಾಗಿ ಎದೆಹಾಲು ಸಂಗ್ರಹಿಸುತ್ತಿದ್ದಾರೆ. ಇದರ ಚಿತ್ರವನ್ನು ನಟಿ ರಾಧಿಕಾ ಹಂಚಿಕೊಂಡಿದ್ದು, ‘ಹೊಸದಾಗಿ ತಾಯಿ ಆಗುವುದು ಹಾಗೂ ಜೊತೆ-ಜೊತೆಗೆ ಕೆಲಸವನ್ನೂ ನಿರ್ವಹಿಸುವುದು ಸುಲಭದ ಕೆಲಸವಲ್ಲ’ ಎಂದು ರಾಧಿಕಾ ಆಪ್ಟೆ ಕ್ಯಾಪ್ಷನ್ ನೀಡಿದ್ದಾರೆ. ಚಿತ್ರ ನೋಡಿದ ಹಲವು ನೆಟ್ಟಿಗರು ಅಸಮಾಧಾನ ಹೊರಹಾಕಿದ್ದಾರೆ.
‘ಇದು ನನ್ನ ಭಾಫ್ಟಾದ ರಿಯಾಲಿಟಿ. ನತಾಶಾಗೆ ಇದಕ್ಕೆ ನಾನು ಧನ್ಯವಾದ ಹೇಳಲೇ ಬೇಕು. ಎದೆಹಾಲು ಸಂಗ್ರಹಿಸುವ ಟೈಮಿಂಗ್ ಅನ್ನು ಆಕೆಯೇ ನೋಡಿಕೊಳ್ಳುತ್ತಿದ್ದಾಳೆ. ಅದಕ್ಕೆ ಸೂಕ್ತ ಸ್ಥಳ, ಸಮಯ ಹುಡುಕಿ ನಾನು ನನ್ನ ಮಗುವಿಗೆ ಫೀಡ್ ಮಾಡಲು ಸಾಧ್ಯವಾಗುವಂತೆ ನೋಡಿಕೊಳ್ಳುತ್ತಿದ್ದಾಳೆ. ಎದೆಹಾಲು ಪಂಪ್ ಮಾಡಲು ಆಕೆ ಸಹಾಯ ಮಾಡುವ ಜೊತೆಗೆ ಶಾಂಪೇನ್ ಅನ್ನು ಬಾತ್ರೂಂಗೆ ತಂದುಕೊಟ್ಟಿದ್ದಾಳೆ. ಹೊಸದಾಗಿ ತಾಯಿ ಆಗಿ ಜೊತೆ-ಜೊತೆಗೆ ಕೆಲಸವನ್ನು ನಿರ್ವಹಿಸುವುದು ಸುಲಭದ ಕಾರ್ಯವಲ್ಲ. ಈ ಹಂತದ ಕಾಳಜಿ ಮತ್ತು ಸೂಕ್ಷ್ಮತೆ ನಮ್ಮ ಚಿತ್ರರಂಗದಲ್ಲಿ ನೋಡಲು ಸಿಗುವುದಿಲ್ಲ’ ಎಂದಿದ್ದಾರೆ ರಾಧಿಕಾ ಆಪ್ಟೆ.
ಇದನ್ನೂ ಓದಿ:ಬೀಚ್ ಸೈಡ್ನಲ್ಲಿ ಸಖತ್ ಆಗಿ ಪೋಸ್ ನೀಡಿದ ರಾಧಿಕಾ ಆಪ್ಟೆ; ಇಲ್ಲಿದೆ ಗ್ಯಾಲರಿ
ರಾಧಿಕಾರ ಪೋಸ್ಟ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮದ್ಯ ಸೇವಿಸುತ್ತಾ ಮಗುವಿಗಾಗಿ ಎದೆಹಾಲು ಪಂಪ್ ಮಾಡುತ್ತಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗೆ ಮಾಡುವುದು ಮಗುವಿನ ಆರೋಗ್ಯದ ಮೇಲೆ ಪರೋಕ್ಷ ಪರಿಣಾಮ ಬೀರಬಹುದು ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ. ರಾಧಿಕಾ ಆಪ್ಟೆ ನಟನೆಯ ‘ಸಿಸ್ಟರ್ ಮಿಡ್ನೈಟ್’ ಸಿನಿಮಾ ಭಾಫ್ಟಾಕ್ಕೆ ನಾಮಿನೇಷನ್ ಪಡೆದುಕೊಂಡಿದೆ. ಹಾಗಾಗಿ ಅವರು ಭಾಫ್ಟಾಕ್ಕೆ ತೆರಳಿದ್ದಾರೆ.
ರಾಧಿಕಾ ಆಪ್ಟೆ ಇತ್ತೀಚೆಗಷ್ಟೆ ಮಗುವಿನ ತಾಯಿಯಾಗಿದ್ದಾರೆ. 2011 ರಲ್ಲಿ ಅವರು ಬೆನಡಿಕ್ಟ್ ಟೇಲರ್ ಜೊತೆಗೆ ಲಿವಿನ್ ರಿಲೇಷನ್ನಲ್ಲಿದ್ದರು. 2013 ರಲ್ಲಿ ಈ ಜೋಡಿ ಸರಳವಾಗಿ ವಿವಾಹವಾದರು. ಇದೀಗ 2024 ರಲ್ಲಿ ಮಗುವಿಗೆ ಪೋಷಕರಾಗಿದ್ದಾರೆ. ರಾಧಿಕಾ ಆಪ್ಟೆ ತಮ್ಮ ಬೋಲ್ಡ್ ಪಾತ್ರಗಳಿಗೆ ಜನಪ್ರಿಯ. ಹಲವು ವೆಬ್ ಸರಣಿ, ಸಿನಿಮಾಗಳಲ್ಲಿ ಗಟ್ಟಿಯಾದ ಪಾತ್ರಗಳಲ್ಲಿ ಅವರು ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ