13 ಸಾವಿರ ಕೋಟಿ ರೂ. ಹಗರಣದ ರುವಾರಿ ನೀರವ್ ಮೋದಿ ಮೇಲೆ ಸಿನಿಮಾ
Nirav Modi: ಆರ್ಥಿಕ ಅಪರಾಧಿಗಳ ಜೀವನ ಆಧರಿಸಿ ಸಿನಿಮಾ, ವೆಬ್ ಸರಣಿಗಳು ಇತ್ತೀಚೆಗೆ ಜನಪ್ರಿಯತೆ ಗಳಿಸುತ್ತಿವೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ಬರೋಬ್ಬರಿ 13 ಸಾವಿರ ಕೋಟಿ ರೂಪಾಯಿ ಸಾಲ ಪಡೆದು ಪರಾರಿಯಾಗಿರುವ ವಜ್ರದ ಉದ್ಯಮಿ ನೀರವ್ ಮೋದಿ ಜೀವನ ಆಧರಿಸಿ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ.

ದೇಶದ ವಿವಿಧ ಕಡೆಗಳಲ್ಲಿ ನಡೆದ ಸ್ಕ್ಯಾಮ್ಗಳನ್ನು (Scam) ಆಧರಿಸಿ ಸಿನಿಮಾ ಹಾಗೂ ಸೀರಿಸ್ಗಳನ್ನು ಮಾಡುತ್ತಿರುವುದು ತಿಳಿದೇ ಇದೆ. ಇದಕ್ಕಾಗಿ ಒಟಿಟಿ (OTT) ಪ್ಲಾಟ್ಫಾರ್ಮ್ಗಳ ಮಧ್ಯೆ ಸ್ಪರ್ಧೆ ಜೋರಾಗಿದೆ. ಅದರಲ್ಲೂ ಹರ್ಷದ್ ಮೆಹ್ತಾ ಅವರ ಹೀವನ ಆಧರಿಸಿ ಮಾಡಲಾದ ‘ಸ್ಕ್ಯಾಮ್ 1992’ ಸರಣಿಯು ಸಾಕಷ್ಟು ಜನಪ್ರಿಯತೆ ಪಡೆಯಿತು. ಇದು ಷೇರು ಮಾರುಕಟ್ಟೆಯಲ್ಲಿ ನಡೆದ ಹಗರಣದ ಮೇಲೆ ನಿರ್ಮಿತವಾಯಿತು. ಈಗ ಉದ್ಯಮಿ ನೀರವ್ ಮೋದಿ ಮೇಲೆ ಸಿನಿಮಾ ಮಾಡಲಾಗುತ್ತಿದೆ ಎನ್ನಲಾಗಿದೆ.
ವಿಕ್ರಮ್ ಮಲ್ಹೋತ್ರಾ ಅವರು ನೀರವ್ ಮೋದಿ ಮೇಲೆ ಸಿನಿಮಾ ಮಾಡುತ್ತಿದ್ದಾರೆ. ಪಲಾಶ್ ವಸ್ವಾನಿ ಅವರು ಇದನ್ನು ಸಿನಿಮಾ ರೂಪಕ್ಕೆ ತರುತ್ತಿದ್ದಾರೆ. ಈ ಮೊದಲು ಅವರು ‘ಗುಲ್ಲಕ್’ ಹೆಸರಿನ ಸರಣಿಯನ್ನು ಮಾಡಿದ್ದರು. ನೀರವ್ ಮೋದಿಯ ಜೀವನವನ್ನು ಸಿನಿಮಾ ಮಾಡಲಾಗುತ್ತದೆಯೇ ಅಥವಾ ಸರಣಿ ಮಾಡಲಾಗುತ್ತುದೆಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟನೆ ಇಲ್ಲ.
ನಿಜ ಜೀವನದ ವಿಚಾರಗಳನ್ನು ಹೇಳುವಾಗ ಸಾಕಷ್ಟು ಎಚ್ಚರಿಕೆ ಬೇಕಾಗುತ್ತದೆ. ಕೊಂಚ ಆಚೀಚೆ ಆದರೂ ಸಾಕಷ್ಟು ವಿರೋಧಗಳನ್ನು ಎದುರಿಸಬೇಕಾದ ಪರಿಸ್ಥಿತಿ ಬಂದೊದಗುತ್ತದೆ. ಈ ಕಾರಣಕ್ಕೆ ಬಹಳ ಎಚ್ಚರಿಕೆಯ ಈ ಸರಣಿ ಮಾಡಲಾಗುತ್ತಿದೆ. ಪತ್ರಕರ್ತ ಪವನ್ ಸಿ ಲಾಲ್ ಅವರು ಬರೆದ ‘ಫ್ಲಾವ್ಡ್: ದಿ ರೈಸ್ ಆ್ಯಂಡ್ ಫಾಲ್ ಆಫ್ ಇಂಡಿಯಾಸ್ ಡೈಮಂಡ್ ಮೊಗುಲ್ ನೀರವ್ ಮೋದಿ’ ಪುಸ್ತಕವನ್ನು ಆಧರಿಸಿದೆ.
ಇದನ್ನೂ ಓದಿ:PNB Scam: ಮೆಹುಲ್ ಚೋಕ್ಸಿ, ನೀರವ್ ಮೋದಿ 13,000 ಕೋಟಿ ರೂ ಪಂಗನಾಮ ಹಾಕಿ ದೇಶ ಬಿಟ್ಟುಹೋದ ಕಥೆ
ಈ ಸರಣಿಯು ಮೋದಿ ಅವರ ಡೈಮಂಡ ಇಂಡಸ್ಟ್ರಿಯ ಆರಂಭ, ಅವರ ಐಷಾರಾಮಿ ಜೀವನ ಹಾಗೂ 13 ಸಾವಿರ ಕೋಟಿ ರೂಪಾಯಿ ಹಗರಣದ ಬಗ್ಗೆ ಇರಲಿದೆ. ಹಾಗಾದರೆ ಈ ಚಿತ್ರದಲ್ಲಿ ನಟಿಸೋ ಹೀರೋ ಯಾರು? ಅದಕ್ಕೆ ಇನ್ನೂ ಸರಿಯಾದ ಉತ್ತರ ಸಿಕ್ಕಿಲ್ಲ. ಬಾಲಿವುಡ್ನ ಎ ಲಿಸ್ಟರ್ ಹೀರೋ ಈ ಸಿನಿಮಾ ಮಾಡಲಿದ್ದಾರೆ. ಈ ಹೆಸರು ಇನ್ನೂ ಅಧಿಕೃತ ಆಗಿಲ್ಲ. ಈ ಸರಣಿ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುವ ಸಾಧ್ಯತೆ ಇದೆ.
ನೀರವ್ ಮೋದಿ ಹಾಗೂ ಅವರ ಸೋದರ ಮಾವ ಮೆಹುಲ್ ಚೋಕ್ಸಿ ಇಬ್ಬರೂ ವಜ್ರೋದ್ಯಮಿಗಳು. ಪಂಜಾಬ್ ನ್ಯಾಷನಲ್ ಬ್ಯಾಂಕ್ನಿಂದ 13 ಸಾವಿರ ಕೋಟಿ ರೂಪಾಯಿ ಸಾಲ ಪಡೆದು ಬ್ಯಾಂಕ್ಗೆ ಹಣ ಪಾವತಿಸದೇ ನಾಮ ಹಾಕಿದ್ದರು. ಇಬ್ಬರೂ ದೇಶಬಿಟ್ಟು ಪರಾರಿ ಆಗಿದ್ದಾರೆ. ಮೆಹಲ್ ಅವರ ಬಂಧನ ಇತ್ತೀಚೆಗೆ ಆಗಿದೆ. 2025ರಲ್ಲಿ ಈ ಸಿನಿಮಾ ಸೆಟ್ಟೇರಲಿದೆ. 2026ರಲ್ಲಿ ಇದು ರಿಲೀಸ್ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ