ವೈವಾಹಿಕ ಜೀವನಕ್ಕೆ ಕಾಲಿಟ್ಟ ಎಸ್. ನಾರಾಯಣ್ ಪುತ್ರ ಪವನ್
ಕನ್ನಡ ಚಿತ್ರರಂಗದ ನಿರ್ದೇಶಕ, ನಿರ್ಮಾಪಕ, ಚಿತ್ರ ಸಾಹಿತಿ ಹಾಗೂ ನಟ ಆಗಿರುವ ಎಸ್.ನಾರಾಯಣ್ ಅವರ ಪುತ್ರ ಪವನ್ ಹಸೆ ಮಣೆ ಏರಿದ್ದಾರೆ.

ಬೆಂಗಳೂರು: ಚಂದನವನದಲ್ಲಿಂದು ಮದುವೆಯ ಸಂಭ್ರಮ ಮನೆ ಮಾಡಿದೆ. ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ, ನಿರ್ಮಾಪಕ, ಚಿತ್ರ ಸಾಹಿತಿ ಹಾಗೂ ನಟ ಆಗಿರುವ ಎಸ್.ನಾರಾಯಣ್ ಅವರ ಪುತ್ರ ಪವನ್ ಹಸೆ ಮಣೆ ಏರಿದ್ದಾರೆ. ಇಂದು ಬೆಳಗ್ಗೆ 7.30 ರಿಂದ 08.30ಕ್ಕೆ ನಡೆದ ಶುಭ ಮುಹೂರ್ತದಲ್ಲಿ ಪವಿತ್ರಾಳನ್ನು ವರಿಸಿದ್ದಾರೆ. ಸದ್ಯ 10.30 ರ ನಂತರ ಆರತಕ್ಷತೆ ನಡೆದಿದೆ.
ಆರತಕ್ಷತೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ, ನಟ ಶರಣ್, ನಟ ಶ್ರೀ ಮುರಳಿ, ಸುಧಾರಾಣಿ, ಮಾಳವಿಕಾ ಅವಿನಾಶ್, ಮುಖ್ಯಮಂತ್ರಿ ಚಂದ್ರು, ಅಮೂಲ್ಯ, ಸಚಿವ ಗೋಪಾಲಯ್ಯ , ಸಂಸದೆ ಸುಮಲತಾ, ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಕೆಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಶುಭ ಹಾರೈಸಿದ್ದಾರೆ.

ಎಸ್ ನಾರಾಯಣ್ ಪುತ್ರ ಪವನ್ ಮದುವೆ ಸಂಭ್ರಮ

ಎಸ್ ನಾರಾಯಣ್ ಪುತ್ರ ಪವನ್ ಮದುವೆ ಸಂಭ್ರಮ

ಎಸ್ ನಾರಾಯಣ್ ಪುತ್ರ ಪವನ್ ಮದುವೆ ಸಂಭ್ರಮ
ಇದನ್ನೂ ಓದಿ: ‘ಚಿ.ರಾ. ಮುತ್ತು’ ಎಸ್.ನಾರಾಯಣ್ ಮತ್ತೊಬ್ಬ ಪುತ್ರ ಪವನ್ ಸಿನಿರಂಗಕ್ಕೆ ಎಂಟ್ರಿ
Published On - 12:35 pm, Mon, 22 February 21