ಅವತ್ತು ಪೊಲೀಸರು ಅವನನ್ನ ಚಪ್ಪಲಿ ಇಲ್ಲದೆ ನಿಲ್ಲಿಸಿದ್ರಲ್ಲ, ಆಗ ಯಾರು ಬಂದಿದ್ರು ಅವನ ಸಪೋರ್ಟ್‌ಗೆ: ಜಗ್ಗೇಶ್ ಪ್ರಶ್ನೆ
ನಟ ದರ್ಶನ್ನನ್ನು ನಾನು ಬಹಳ ಪ್ರೀತಿಸುತ್ತೇನೆ. ಅವತ್ತು ಪೋಲಿಸರು ಅವನನ್ನ ಚಪ್ಪಲಿ ಇಲ್ಲದೆ ನಿಲ್ಲಿಸಿದ್ರಲ್ಲ, ಆಗ ಯಾರು ಬಂದಿದ್ರು ಅವನ ಸಪೋರ್ಟ್‌ಗೆ? ಆಗ ಬಂದಿದ್ದು ಜಗ್ಗೇಶ್ ಅಲ್ವಾ ನೀವೇ ಹೇಳಿ. ಮನೆಯೊಳಗೆ ಚಪ್ಪಲಿ ಇಲ್ಲದೆ ನಿಲ್ಲಿಸೋದು ಸರಿಯಲ್ಲ. ದೊಡ್ಡ ನಟನನ್ನ ಸಣ್ಣ ಹೀರೋಯಿನ್ ಮನೆಯಲ್ಲಿ ನಿಲ್ಲಿಸಿದ್ರು. ಕಾನೂನು ಪ್ರಕಾರ ಕ್ರಮ ಕೈಗೊಂಡು ಆತನನ್ನ ಕಳುಹಿಸಿ ಎಂದು ಪೋಲಿಸರಿಗೆ ನಾನು ಹೇಳಿದ್ದೆ.
ಮೈಸೂರು: ಕೆಲ ದಿನಗಳಿಂದ ಸ್ಯಾಂಡಲ್ವುಡ್ನಲ್ಲಿ ನವರಸ ನಾಯಕ ಜಗ್ಗೇಶ್ ಮತ್ತು ದರ್ಶನ್ ಅವರ ಫ್ಯಾನ್ಸ್ ನಡುವೆ ನಡೆಯುತ್ತಿರುವ ಕಾಳಗ ತಾರಕಕ್ಕೇರಿದೆ. ನಟ ಜಗ್ಗೇಶ್ಗೆ ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿದ್ದ ವಿಚಾರಕ್ಕೆ ಸಂಬಂಧಿಸಿ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಬನ್ನೂರಿನಲ್ಲಿ ಹಿರಿಯ ನಟ ಜಗ್ಗೇಶ್ ಸುದ್ದಿಗೋಷ್ಠಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಹಿರಿಯ ನಟ ಜಗ್ಗೇಶ್ ಹೇಳಿದ್ದೇನು?: ಚಿತ್ರೀಕರಣ ವೇಳೆ ಏಕಾಏಕಿ ಹುಡುಗರು ಮುತ್ತಿಗೆ ಹಾಕಿದ್ದರು. ಮುತ್ತಿಗೆ ಹಾಕಿದ ಕೂಡಲೇ ಚಿತ್ರತಂಡ ಆತಂಕಗೊಂಡಿತ್ತು. ಎಷ್ಟು ಜನ ಬಂದರೂ ಈ ಜಗ್ಗೇಶ್ ಹೆದರಲ್ಲ ಎಂದೆ. ಈ ಕೆಲಸ ರಾಮನಗರ ಸರ್ಕಲ್ನಲ್ಲೇ ಮಾಡಲು ಹುನ್ನಾರ ನಡೆದಿತ್ತು. ಇದನ್ನು ನಾನು ಎಲ್ಲಿ ಬೇಕಾದರೂ ಸಾಬೀತು ಮಾಡಬಲ್ಲೆ. ನನ್ನ ಚಲನವಲನ ನಮ್ಮ ಜತೆಗಿದ್ದವರೇ ನೀಡುತ್ತಿದ್ದರು. ಚಲನವಲನದ ಮಾಹಿತಿ ನೀಡಿ ನನ್ನ ವಿರುದ್ಧ ಹುನ್ನಾರ ಮಾಡಿದ್ದಾರೆ. 40-50 ವರ್ಷಗಳಿಂದ ಸೇವೆ ಸಲ್ಲಿಸಿದ್ದಕ್ಕೆ ಒಳ್ಳೇ ಸನ್ಮಾನ ಮಾಡಿದ್ದಾರೆ ಎಂದು ನಟ ಜಗ್ಗೇಶ್ ತಮ್ಮ ನೋವನ್ನು ಹೊರ ಹಾಕಿದ್ದಾರೆ.
ಅವತ್ತು ಪೋಲಿಸರು ಅವನನ್ನ ಚಪ್ಪಲಿ ಇಲ್ಲದೆ ನಿಲ್ಲಿಸಿದ್ರಲ್ಲ, ಆಗ ಯಾರು ಬಂದಿದ್ರು ಅವನ ಸಪೋರ್ಟ್‌ಗೆ? ನಟ ದರ್ಶನ್ನನ್ನು ನಾನು ಬಹಳ ಪ್ರೀತಿಸುತ್ತೇನೆ. ಅವತ್ತು ಪೋಲಿಸರು ಅವನನ್ನ ಚಪ್ಪಲಿ ಇಲ್ಲದೆ ನಿಲ್ಲಿಸಿದ್ರಲ್ಲ, ಆಗ ಯಾರು ಬಂದಿದ್ರು ಅವನ ಸಪೋರ್ಟ್‌ಗೆ? ಆಗ ಬಂದಿದ್ದು ಜಗ್ಗೇಶ್ ಅಲ್ವಾ ನೀವೇ ಹೇಳಿ. ಮನೆಯೊಳಗೆ ಚಪ್ಪಲಿ ಇಲ್ಲದೆ ನಿಲ್ಲಿಸೋದು ಸರಿಯಲ್ಲ. ದೊಡ್ಡ ನಟನನ್ನ ಸಣ್ಣ ಹೀರೋಯಿನ್ ಮನೆಯಲ್ಲಿ ನಿಲ್ಲಿಸಿದ್ರು. ಕಾನೂನು ಪ್ರಕಾರ ಕ್ರಮ ಕೈಗೊಂಡು ಆತನನ್ನ ಕಳುಹಿಸಿ ಎಂದು ಪೋಲಿಸರಿಗೆ ನಾನು ಹೇಳಿದ್ದೆ. ಇದನ್ನ ದರ್ಶನ್ ಕೂಡ ನೆನೆಯಬೇಕು ಎಂದು ಜಗ್ಗೇಶ್ ಹೇಳಿದರು.
ಕನ್ನಡದ ರಜಿನಿಕಾಂತ್ ಅಂತ ನಾನು ದರ್ಶನ್‌ಗೆ ಹೇಳಿದ್ದೆ ಆತ ಈ ಘಟನೆ ಬಳಿಕ ನನಗೆ ಫೋನ್ ಮಾಡಬೇಕಿತ್ತು. ನನ್ನ ಹೆಂಡತಿ ಹೇಳ್ತಿದ ತಕ್ಷಣ ದರ್ಶನ್‌ಗೆ ನಾನು ಕರೆ ಮಾಡಿದ್ದೆ. ದರ್ಶನ್‌ಗೆ ಅಪಘಾತ ಆದಾಗ ಕಾಲ್ ಮಾಡಿ ವಿಚಾರಿಸಿದ್ದೆ. ಈಗ ಎಲ್ಲಿದ್ದಾರೆ ಅವರೆಲ್ಲಾ, ಇದು ಕೃತಜ್ಞತೆ ಇಲ್ಲದ ಸಮಾಜ. ನನ್ನ ಕೈ ಕೆಳಗೆ ಎಷ್ಟೋ ನಟ, ನಟಿಯರು ತಯಾರಾಗಿದ್ದಾರೆ. ನಾನು ಅನ್ನೋದು, ವಯಸ್ಸು ಅನ್ನೋದು ಶಾಶ್ವತವಲ್ಲ. ಕಡೆವರೆಗೂ ಬರುವುದು ನಮ್ಮಲ್ಲಿರುವ ಗುಣ ಅಷ್ಟೇ. ಅವತ್ತು ಗಲಾಟೆ ಮಾಡಲು ಬಂದಿದ್ದ ಒಂದಿಬ್ಬರು ಇರ್ತಾರೆ. ದಿನಬೆಳಗಾದರೆ ಅವರು ನಟ ದರ್ಶನ್ ಜೊತೆ ಇರುತ್ತಾರೆ. ಎಲ್ಲಾ ಕಡೆ ಅವರ ಫೋಟೋ ಇದೆ. ಹಣ ಎಲ್ಲರಿಗೂ ಸಿಗುತ್ತೆ, ಆದರೆ ಗುಣ ಶಾಶ್ವತವಾಗಿರುತ್ತೆ ಎಂದು ನಟ ಜಗ್ಗೇಶ್ ಸುದ್ದಿಗೋಷ್ಠಿ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.
ನಾನು ಹಳೇ ಕಥೆಯನ್ನ ಮತ್ತೆ ಮತ್ತೆ ಹೇಳಲು ಹೋಗಲ್ಲ ನಾನು ಚಿತ್ರರಂಗದ ಎಲ್ಲಾ ವಿಭಾಗದಲ್ಲೂ ಕೆಲಸ ಮಾಡಿದ್ದೀನಿ. ಹಾಗಾಗಿ ಚಿತ್ರರಂಗದ ಹಣೆಬರಹ ನನಗೆ ಗೊತ್ತು. ಮುಂಚೆ ನೂರು ದಿನ ಸಿನಿಮಾ ಓಡುತ್ತಿದ್ದವು. ಆದ್ರೆ ಇವತ್ತು 1-2 ದಿನ ಸಿನಿಮಾ ಓಡಿದ ಮೇಲೆ ಸ್ಟಾರ್ ಡಮ್ (Stardum) ನಿರ್ಧಾರ ಆಗ್ತಿದೆ. ಈ ಪರಿಸ್ಥಿತಿಯಿಂದ ನಮ್ಮಂತ ಸ್ಟಾರ್‌ಗಳಿಗೆ ಹೆಲ್ಪ್ ಆಗ್ತಿದೆ. ಆದರೆ ನಿರ್ಮಾಪಕರಿಗಲ್ಲಿ ಯಾವುದೇ ಸಹಾಯ ಆಗಿಲ್ಲ. ನಾವು ಒಗ್ಗಟ್ಟಿನ ಮೂಲಮಂತ್ರದಲ್ಲಿ ಬೆಳೆದವರು. ಒಂದು ವಿಚಾರವನ್ನ ಅಳೆದು ತೂಗಿ ವಿಮರ್ಶೆ ಮಾಡಬೇಕು. ನಾನು ಹಳೇ ಕಥೆಯನ್ನ ಮತ್ತೆ ಮತ್ತೆ ಹೇಳಲು ಹೋಗಲ್ಲ. ಎಲ್ಲಾ ಮಾಧ್ಯಮ ಮಿತ್ರರಿಗೂ ಧನ್ಯವಾದ. ಜಾಗರೂಕತೆಯಿಂದ ಹ್ಯಾಂಡಲ್ ಮಾಡಿದ್ದೀರಾ. 20 ಹುಡುಗರು ಬಂದು ಅವತ್ತು ಗಲಾಟೆ ಮಾಡಿದ್ದರು. ಆದ್ರೂ ತೋತಾಪುರಿ ಸಿನಿಮಾ ನಿಲ್ಲಬಾರದು ಅನ್ನೋದು ನನ್ನ ಉದ್ದೇಶವಾಗಿತ್ತು. ಬಹಳ ಶಾಂತಿಯುತವಾಗಿ ಇಲ್ಲಿ ಶೂಟಿಂಗ್ ನಡೆಯುತ್ತಿತ್ತು. ನಮ್ಮನ್ನ ಬೆಳೆಸುವವರು, ಚಪ್ಪಾಳೆ ತಟ್ಟುವವರು ದೇವರು. ನಾವೇ ದೇವರು ಅಂತ ಬೋರ್ಡ್ ಹಾಕಿಕೊಂಡವರಲ್ಲ.
ಚಿರು ಸರ್ಜಾ ತೀರಿಕೊಂಡಾಗ ಎಷ್ಟು ಜನ ಬಾಯಿಕೊಂಡಿರಿ? ಆತ ಸತ್ತು ವರ್ಷ ಆಗಿಲ್ಲ, ಎಷ್ಟು ಜನ ಅವರ ಮನೆಗೆ ಹೋಗಿ ಮನೆಯವರನ್ನ ಸಂತೈಸಿದ್ದೀರಿ? ಜಗ್ಗೇಶ್ ಸತ್ತರೂ ಅಷ್ಟೇ… ಎಲ್ಲಾ ಮರೆತು ಹೋಗುತ್ತಾರೆ. ಜಗತ್ತು ನಶ್ವರ. ನಾನು ಎನ್ನುವ ಅಹಂ ಬೇಡ. ಗಲಾಟೆ ನಡೆದ ದಿನ ನಾನು ಅದನ್ನು ದೊಡ್ಡದು ಮಾಡಿದ್ದರೆ ನಿರ್ಮಾಪಕನ ಬದುಕಿಗೆ ಪೆಟ್ಟು ಬಿದ್ದಿರುತ್ತಿತ್ತು. ಕೆಲ ಮಾಧ್ಯಮಗಳು ಈ ವಿಚಾರವನ್ನ ತಣ್ಣಗೆ ಮಾಡಬಹುದಿತ್ತು. ಆದ್ರೆ ಯಾಕೆ ಹೀಗೆ ಮಾಡಿದ್ರೋ ಗೊತ್ತಿಲ್ಲ. ದಯವಿಟ್ಟು ಈ ವಿಚಾರ ಇಲ್ಲಿಗೇ ಬಿಟ್ಟು ಬಿಡಿ ಎಂದು ಪತ್ರಕರ್ತರ ಮರು ಪ್ರಶ್ನೆಗೆ ಉತ್ತರಿಸದೆ ಜಗ್ಗೇಶ್ ಸೀದಾ ಎದ್ದು ಹೋದರು.
ಇದನ್ನೂ ಓದಿ: ‘ಮಲ ತಿಂದು ಹೋಗುವರಯ್ಯ ನಿಂದಕರು..’ ಪುರಂದರ ದಾಸರ ಪದ ಟ್ವೀಟ್ ಮಾಡಿದ ಹಿರಿಯ ನಟ ಜಗ್ಗೇಶ್: ಬೆಂಬಲಿಸಿದ ಕನ್ನಡಮನಗಳಿಗೆ ಕೃತಜ್ಞತೆ
Published On - 3:23 pm, Wed, 24 February 21