ಪುದುಚೇರಿಯಲ್ಲಿ ಆದಿನ ಸಿಕ್ಸ್ತ್​​ ಸೆನ್ಸ್​ ವರ್ಕ್​ ಆಗಿರಲಿಲ್ಲ ಅಂದ್ರೆ.. ತಪ್ಪಿದ​ ಅವಘಡದ ಬಗ್ಗೆ ದರ್ಶನ್​ ಮಾತು

ವಿಶೇಷ ಫೈಟ್​ ಸೀನ್​ ಶೂಟಿಂಗ್​ ಮಾಡೋಕೆ ನಾವು ಪಾಂಡಿಚೇರಿಗೆ ತೆರಳಿದ್ದೆವು. ಈ ವೇಳೆ ಸಮುದ್ರದ ದಡವೊಂದರಲ್ಲಿ ಶೂಟ್​ ಮಾಡುತ್ತಿದ್ದೆವು ಎಂದು ದರ್ಶನ್​ ರಾಬರ್ಟ್​ ಶೂಟಿಂಗ್​ ದಿನವನ್ನು ನೆನೆದಿದ್ದಾರೆ.

ಪುದುಚೇರಿಯಲ್ಲಿ ಆದಿನ ಸಿಕ್ಸ್ತ್​​ ಸೆನ್ಸ್​ ವರ್ಕ್​ ಆಗಿರಲಿಲ್ಲ ಅಂದ್ರೆ.. ತಪ್ಪಿದ​ ಅವಘಡದ ಬಗ್ಗೆ ದರ್ಶನ್​ ಮಾತು
ನಟ ದರ್ಶನ್​(ಸಾಂದರ್ಭಿಕ ಚಿತ್ರ)
Follow us
ರಾಜೇಶ್ ದುಗ್ಗುಮನೆ
|

Updated on:Feb 24, 2021 | 8:47 PM

ಇದೇ ಮಾರ್ಚ್​​ 11ರಂದು ನಟ ದರ್ಶನ್​ ನಟನೆಯ ರಾಬರ್ಟ್​ ಸಿನಿಮಾ ತೆರೆಗೆ ಬರುತ್ತಿದೆ. ಈ ಸಿನಿಮಾದ ವಿಶೇಷತೆಗಳ ಬಗ್ಗೆ ನಟ ದರ್ಶನ್​ ಮಾತನಾಡಿದ್ದಾರೆ.  ಆ ಶೂಟಿಂಗ್​ ವೇಳೆ ನಡೆದ ಕಹಿ ಘಟನೆಯ ಬಗ್ಗೆ ದರ್ಶನ್​ ಮಾತನಾಡಿದ್ದಾರೆ. ಫೈಟ್​​ ಸೀನ್​ ಮಾಡೋ ವೇಳೆ ತಪ್ಪಿದ ಅವಘಡವನ್ನು ದರ್ಶನ್​ ನೆನಪಿಸಿಕೊಂಡಿದ್ದಾರೆ. ವಿಶೇಷ ಫೈಟ್​ ಸೀನ್​ ಶೂಟಿಂಗ್​ ಮಾಡೋಕೆ ನಾವು ಪುದುಚೇರಿಗೆ ತೆರಳಿದ್ದೆವು. ಈ ವೇಳೆ ಸಮುದ್ರದ ದಡವೊಂದರಲ್ಲಿ ಶೂಟ್​ ಮಾಡುತ್ತಿದ್ದೆವು. ಶೂಟಿಂಗ್​ಗೆ ಬೇಕಾದ ಸೆಟ್​ ಹಾಗೂ ವಾಹನಗಳನ್ನು ನಾವು ಅಲ್ಲಿ ನಿಲ್ಲಿಸಿದ್ದೆವು. ನಾಲ್ಕೈದು ದಿನ ಶೂಟಿಂಗ್​ ಕೂಡ ಪೂರ್ಣಗೊಂಡಿತ್ತು.

ಈ ವೇಳೆ ನಾವು ರಾತ್ರಿ ತಿನ್ನೋಕೆಂದು ಹೊರಗೆ ಹೋಗಿದ್ದೆವು. ಆಗ ವಾತಾವರಣ ಚೇಂಜ್​ ಆಗೋಕೆ ಶುರುವಾಗಿತ್ತು. ನಿರ್ದೇಶಕರು, ಇದೇಕೋ ಸರಿ ಹೋಗುತ್ತಿಲ್ಲ. ಹೊರಟು ಬಿಡೋಣ. ಉಳಿದ ಭಾಗವನ್ನು ಬೇರೆ ಕಡೆ ಶೂಟಿಂಗ್​ ಮಾಡೋಣ. ನಾನು ಅದನ್ನು ಮ್ಯಾಚ್​ ಮಾಡಿಕೊಳ್ಳುತ್ತೇನೆ ಎಂದಿದ್ದರು.

ನಿರ್ದೇಶಕ ತರುಣ್​ ಸುಧೀರ್ ಅವರು ಹೇಳಿದಂತೆ ನಾವು ಶೂಟಿಂಗ್​ ಜಾಗವನ್ನು ಖಾಲಿ ಮಾಡಿದೆವು. ರಾತ್ರಿ ಮಳೆ ಬರೋಕೆ ಆರಂಭವಾಗಿದ್ದು ನಿಲ್ಲಲೇ ಇಲ್ಲ. ನಾವು ಶೂಟಿಂಗ್​ ಮಾಡುತ್ತಿದ್ದ ಜಾಗ ಮರಳು ಗಾಡಿನಂತೆ ಇತ್ತು. ಆದರೆ, ಮಳೆಯಿಂದಾಗಿ ಆ ಜಾಗ ಸಂಪೂರ್ಣವಾಗಿ ಮುಳುಗಿ ಹೋಗಿತ್ತು. ಒಂದೊಮ್ಮೆ ನಾವು ಸೆಟ್​ ಖಾಲಿ ಮಾಡದೆ ಇದ್ದಿದ್ದರೆ ತುಂಬಾನೇ ತೊಂದರೆ ಉಂಟಾಗುತ್ತಿತ್ತು. ನಿಜಕ್ಕೂ ಸಿಕ್ಸ್ತ್​​​ ಸೆನ್ಸ್​ ನಮ್ಮನ್ನು ಅಲ್ಲಿಂದ ಹೊರಡುವಂತೆ ಮಾಡಿತ್ತು ಎಂದಿದ್ದಾರೆ.

ಜಗ್ಗೇಶ್​ ಬಳಿ  ಕ್ಷಮೆ ಕೇಳಿದ ದರ್ಶನ್​ ಈ ಬಗ್ಗೆ ಮಾತನಾಡಿರುವ ದರ್ಶನ್​, ಸೀನಿಯರ್​ಗಳು ಯಾವಾಗಲೂ ಮುಂದಿರಬೇಕು. ಕಿರಿಯರು ಹಿಂದಿರಬೇಕು. ವಿವಾದ ಆಗುವ ದಿನ ನಾನು ತಿರುಪತಿಗೆ ಹೋಗಿದ್ದೆ. ತಿರುಪತಿಯಿಂದ ಮನೆಗೆ ಬರೋದು ರಾತ್ರಿ 2 ಗಂಟೆ ಆಗಿತ್ತು. ಮನೆಗೆ ಬಂದು ಮೊಬೈಲ್​ ನೋಡಿದಾಗ ನಿರ್ಮಾಪಕ ವಿಖ್ಯಾತ್​​​ದು 50-60 ಮಿಸ್​ ಕಾಲ್​ಗಳಿದ್ದವು. ಮಧ್ಯರಾತ್ರಿ ಕಾಲ್​ ಮಾಡೋದು ಸರಿಯಲ್ಲ ಎನ್ನುವ ಕಾರಣಕ್ಕೆ, ಬೆಳಗ್ಗೆ ಜಿಮ್​ ಮುಗಿಸಿ ಬಂದು ಕರೆ ಮಾಡಿದೆ. ಆಗ ವಿಚಾರ ತಿಳಿತು.

ನನ್ನ ಅಭಿಮಾನಿಗಳು ಜಗ್ಗೇಶ್​ ಸೆಟ್​​ಗೆ ಹೋಗೋ ವಿಚಾರ ನನಗೆ ಗೊತ್ತಿರಲಿಲ್ಲ. ಈ ವಿಚಾರ ನನ್ನ ಗಮನಕ್ಕೆ ಬಂದಿದ್ದರೆ ನಾನು ಅಭಿಮಾನಿಗಳ ಬಳಿ ಹೋಗೋದೇ ಬೇಡ ಎನ್ನುತ್ತಿದೆ. ಅವರು ನಮ್​ ಸೀನಿಯರ್​. ಅವರು ಮಾತನಾಡಿದ್ದರೆ ಅದು ನಮ್ಮ ಬಗ್ಗೆಯೇ ತಾನೆ. ಸೀನಿಯರ್​ಗಳು ನಮ್ಮ ಬಗ್ಗೆ ಮಾತನಾಡದೆ ಇನ್ಯಾರ ಬಗ್ಗೆ ಮಾತನಾಡೋಕಾಗುತ್ತದೆ? ನನ್ನ ಅಭಿಮಾನಿಗಳಿಂದ ಬೇಸರ ಆಗಿದ್ದರೆ ಅವರ ಪರವಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: Darshan Interview | ಜಗ್ಗೇಶ್​ ವಿವಾದಕ್ಕೆ ತೆರೆ: ಅಭಿಮಾನಿಗಳ ಪರವಾಗಿ ಕ್ಷಮೆ ಕೇಳಿದ ನಟ ದರ್ಶನ್​

Published On - 6:28 pm, Wed, 24 February 21

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್