AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Darshan Interview: ನಮ್ಮ ಹೀರೋ ಜತೆ ನಟಿಸೋಕೆ ನಮಗೇನು? ಯಶ್​ ಜತೆ ತೆರೆ ಹಂಚಿಕೊಳ್ಳುವ ಬಗ್ಗೆ ದರ್ಶನ್​ ಮಾತು

2019ರ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್​ ಅವರನ್ನು ಗೆಲ್ಲಿಸುವಲ್ಲಿ ನಟ ದರ್ಶನ್​ ಹಾಗೂ ಯಶ್​ ತುಂಬಾನೇ ಪ್ರಮುಖ ಪಾತ್ರವಹಿಸಿದ್ದರು. ಆ ನಂತರ ಜೋಡೆತ್ತಿನ ಸಿನಿಮಾ ಯಾವಾಗ ಬರುತ್ತದೆ ಎನ್ನುವ ಪ್ರಶ್ನೆ ಅನೇಕರದ್ದಾಗಿತ್ತು.

Darshan Interview: ನಮ್ಮ ಹೀರೋ ಜತೆ ನಟಿಸೋಕೆ ನಮಗೇನು? ಯಶ್​ ಜತೆ ತೆರೆ ಹಂಚಿಕೊಳ್ಳುವ ಬಗ್ಗೆ ದರ್ಶನ್​ ಮಾತು
ದರ್ಶನ್​-ಯಶ್​
ರಾಜೇಶ್ ದುಗ್ಗುಮನೆ
|

Updated on:Feb 24, 2021 | 8:47 PM

Share

ಟಿವಿ9 ಕನ್ನಡ ನಡೆಸಿದ ವಿಶೇಷ ಸಂದರ್ಶನದಲ್ಲಿ ನಟ ದರ್ಶನ್ ಮಾತನಾಡಿದ್ದಾರೆ. ಈ ವೇಳೆ ಅವರು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಯಶ್​​ ಜತೆ ಸಿನಿಮಾ ಮಾಡೋ ವಿಚಾರವೂ ಕೂಡ ಒಂದು. ಈ ಬಗ್ಗೆ ದರ್ಶನ್​ ಏನು ಉತ್ತರ ಕೊಟ್ರು? ಆ ಬಗ್ಗೆ ಇಲ್ಲಿದೆ ಮಾಹಿತಿ.

2019ರ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್​ ಅವರನ್ನು ಗೆಲ್ಲಿಸುವಲ್ಲಿ ನಟ ದರ್ಶನ್​ ಹಾಗೂ ಯಶ್​ ತುಂಬಾನೇ ಪ್ರಮುಖ ಪಾತ್ರವಹಿಸಿದ್ದರು. ಇವರನ್ನು ಮಾಜಿ ಮುಖ್ಯಮಂತ್ರಿ ಎಚ್​​.ಡಿ.ಕುಮಾರಸ್ವಾಮಿ ಜೋಡೆತ್ತು ಎಂದು ಕರೆದಿದ್ದರು. ನಂತರ ದರ್ಶನ್​-ಯಶ್​ ಜೋಡಿಗೆ ಜೋಡೆತ್ತು ಎನ್ನುವ ಹೆಸರು ಬಿದ್ದಿತ್ತು. ಜೋಡೆತ್ತಿನ ಸಿನಿಮಾ ಯಾವಾಗ ಬರುತ್ತದೆ ಎನ್ನುವ ಪ್ರಶ್ನೆ ಅನೇಕರದ್ದಾಗಿತ್ತು.

ಮೊದಲನೆಯದಾಗಿ ಮಲ್ಟಿ ಸ್ಟಾರರ್​ ಸಿನಿಮಾ ಬಗ್ಗೆ ಮಾತನಾಡಿದ ದರ್ಶನ್​, ಮಲ್ಟಿ ಸ್ಟಾರರ್​ ಸಿನಿಮಾ ಮಾಡೋದು ಸುಲಭದ ಮಾತಲ್ಲ. ಇಬ್ಬರು ಹೀರೋಗಳನ್ನು ನಿಭಾಯಿಸಿಕೊಂಡು ಹೋಗುವ ನಿರ್ದೇಶಕರು ಬೇಕು. ಎರಡು ನಟರನ್ನು ಹಾಕಿ ಸಿನಿಮಾ ಮಾಡುವಾಗ ಇಬ್ಬರಿಗೂ ಅಭಿಮಾನಿಗಳು ಇರುತ್ತಾರೆ. ಒಬ್ಬ ನಟನಿಗೆ ಹೊಡೆದರೆ ಮತ್ತೋರ್ವನಿಗೆ ಬೇಸರ ಆಗುತ್ತದೆ. ಹೀಗಾಗಿ, ಪ್ರತಿ ದೃಶ್ಯಗಳನ್ನು ಅಳೆದು ತೂಗಿ ಸಿದ್ಧಪಡಿಸುವ ನಿರ್ದೇಶಕರು ಬೇಕು ಎಂದಿದ್ದಾರೆ ದರ್ಶನ್​.

ಈ ವೇಳೆ ಜೋಡೆತ್ತಿನ ಸಿನಿಮಾ ಬರೋದು ಯಾವಾಗ ಎನ್ನುವ ಪ್ರಶ್ನೆಗೆ ದರ್ಶನ್​ ಉತ್ತರ ನೀಡಿದ್ದಾರೆ. ಎಲ್ಲದಕ್ಕೂ ಸಮಯ ಕೂಡಿ ಬರಬೇಕು. ನಮ್ಮ ಹೀರೋ ಜತೆ ನಟಿಸೋಕೆ ನಮಗೇನು ಎಂದು ಕೇಳಿದ್ದಾರೆ. ಈ ಮೂಲಕ ಯಾವುದಾದರೂ ಒಳ್ಳೆಯ ನಿರ್ದೇಶಕರು ಸಿಕ್ಕರೆ ಸಿನಿಮಾ ಮಾಡುವ ಸೂಚನೆ ನೀಡಿದ್ದಾರೆ.

ಜಗ್ಗೇಶ್​ ಬಳಿ ಕ್ಷಮೆಯಾಚನೆ.. ಸೀನಿಯರ್​ಗಳು ಯಾವಾಗಲೂ ಮುಂದಿರಬೇಕು. ಕಿರಿಯರು ಹಿಂದಿರಬೇಕು. ವಿವಾದ ಆಗುವ ದಿನ ನಾನು ತಿರುಪತಿಗೆ ಹೋಗಿದ್ದೆ. ತಿರುಪತಿಯಿಂದ ಮನೆಗೆ ಬರೋದು ರಾತ್ರಿ 2 ಗಂಟೆ ಆಗಿತ್ತು. ಮನೆಗೆ ಬಂದು ಮೊಬೈಲ್​ ನೋಡಿದಾಗ ನಿರ್ಮಾಪಕ ವಿಖ್ಯಾತ್​​​ದು 50-60 ಮಿಸ್​ ಕಾಲ್​ಗಳಿದ್ದವು. ಮಧ್ಯರಾತ್ರಿ ಕಾಲ್​ ಮಾಡೋದು ಸರಿಯಲ್ಲ ಎನ್ನುವ ಕಾರಣಕ್ಕೆ, ಬೆಳಗ್ಗೆ ಜಿಮ್​ ಮುಗಿಸಿ ಬಂದು ಕರೆ ಮಾಡಿದೆ. ಆಗ ವಿಚಾರ ತಿಳಿತು. ನನ್ನ ಅಭಿಮಾನಿಗಳು ಜಗ್ಗೇಶ್​ ಸೆಟ್​​ಗೆ ಹೋಗೋ ವಿಚಾರ ನನಗೆ ಗೊತ್ತಿರಲಿಲ್ಲ. ಈ ವಿಚಾರ ನನ್ನ ಗಮನಕ್ಕೆ ಬಂದಿದ್ದರೆ ನಾನು ಅಭಿಮಾನಿಗಳ ಬಳಿ ಹೋಗೋದೇ ಬೇಡ ಎನ್ನುತ್ತಿದೆ. ಅವರು ನಮ್​ ಸೀನಿಯರ್​. ಅವರು ಮಾತನಾಡಿದ್ರೆ ನಮ್ಮ ಬಗ್ಗೆ ತಾನೇ. ಸೀನಿಯರ್​ಗಳು ನಮ್ಮ ಬಗ್ಗೆ ಮಾತನಾಡದೆ ಇನ್ಯಾರ ಬಗ್ಗೆ ಮಾತನಾಡೋಕಾಗುತ್ತದೆ. ನನ್ನ ಅಭಿಮಾನಿಗಳಿಂದ ಬೇಸರ ಆಗಿದ್ದರೆ ಅವರ ಪರವಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: Darshan Interview | ಜಗ್ಗೇಶ್​ ವಿವಾದಕ್ಕೆ ತೆರೆ: ಅಭಿಮಾನಿಗಳ ಪರವಾಗಿ ಕ್ಷಮೆ ಕೇಳಿದ ನಟ ದರ್ಶನ್​

Published On - 7:29 pm, Wed, 24 February 21

Daily Devotional: ಶಿಶು ಮರಣಕ್ಕೆ ಶ್ರಾದ್ಧ ಕಾರ್ಯ ಮಾಡಬೇಕಾ?
Daily Devotional: ಶಿಶು ಮರಣಕ್ಕೆ ಶ್ರಾದ್ಧ ಕಾರ್ಯ ಮಾಡಬೇಕಾ?
Daily horoscope: ರವಿ ಕರ್ಕಾಟಕ ರಾಶಿಯಲ್ಲಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
Daily horoscope: ರವಿ ಕರ್ಕಾಟಕ ರಾಶಿಯಲ್ಲಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
2 ಅಂಕ ಕಡಿಮೆ ಬಂದಿದ್ದಕ್ಕೆ ಶಿಕ್ಷಕಿಯನ್ನು ಚಪ್ಪಲಿಯಿಂದ ಥಳಿಸಿದ ವಿದ್ಯಾರ್ಥಿ
2 ಅಂಕ ಕಡಿಮೆ ಬಂದಿದ್ದಕ್ಕೆ ಶಿಕ್ಷಕಿಯನ್ನು ಚಪ್ಪಲಿಯಿಂದ ಥಳಿಸಿದ ವಿದ್ಯಾರ್ಥಿ
ನಿಮಗಿಂತ ಹೆಚ್ಚೇ ವಿದ್ಯಾವಂತ; ಬಿಜೆಪಿ ಎಂಎಲ್‌ಸಿ ಮಗನಿಗೆ ಪೊಲೀಸ್ ಕ್ಲಾಸ್
ನಿಮಗಿಂತ ಹೆಚ್ಚೇ ವಿದ್ಯಾವಂತ; ಬಿಜೆಪಿ ಎಂಎಲ್‌ಸಿ ಮಗನಿಗೆ ಪೊಲೀಸ್ ಕ್ಲಾಸ್
ವಿಷ್ಣುವರ್ಧನ್ ಸಮಾಧಿ ನೆಲಸಮ: ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ಏನು?
ವಿಷ್ಣುವರ್ಧನ್ ಸಮಾಧಿ ನೆಲಸಮ: ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ಏನು?
ಸೋರುತಿಹುದು ಸಾರಿಗೆ ಬಸ್ ಮೇಲ್ಚಾವಣಿ, ಛತ್ರಿ ಹಿಡಿದು ಕುಳಿತ ಪ್ರಯಾಣಿಕ
ಸೋರುತಿಹುದು ಸಾರಿಗೆ ಬಸ್ ಮೇಲ್ಚಾವಣಿ, ಛತ್ರಿ ಹಿಡಿದು ಕುಳಿತ ಪ್ರಯಾಣಿಕ
ವಿಷ್ಣುವರ್ಧನ್ ಸಮಾಧಿ ಬಗ್ಗೆ ಅಂಬಿ ಮನೆಯಲ್ಲಿ ಸಭೆ ನಡೆದಾಗ ಏನೆಲ್ಲ ಆಯ್ತು?
ವಿಷ್ಣುವರ್ಧನ್ ಸಮಾಧಿ ಬಗ್ಗೆ ಅಂಬಿ ಮನೆಯಲ್ಲಿ ಸಭೆ ನಡೆದಾಗ ಏನೆಲ್ಲ ಆಯ್ತು?
ಮೈಸೂರಿನಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಕುಟುಂಬ ಒಪ್ಪಿದ್ದೇಕೆ?
ಮೈಸೂರಿನಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಕುಟುಂಬ ಒಪ್ಪಿದ್ದೇಕೆ?
ಕಾಂಗ್ರೆಸ್ ನಾಯಕರಿಗೆ ಸುಧಾಕರ್ ಏಳ್ಗೆ ಸಹಿಸಲಾಗುತ್ತಿಲ್ಲ: ವಿಜಯೇಂದ್ರ
ಕಾಂಗ್ರೆಸ್ ನಾಯಕರಿಗೆ ಸುಧಾಕರ್ ಏಳ್ಗೆ ಸಹಿಸಲಾಗುತ್ತಿಲ್ಲ: ವಿಜಯೇಂದ್ರ
ಸಿಎಂ, ಡಿಸಿಎಂ ಮತ್ತು ಹೆಚ್​ಎಂ ನಾಡಿನ ಬೇಷರತ್ ಕ್ಷಮೆ ಕೇಳಬೇಕು: ಸುರೇಶ್
ಸಿಎಂ, ಡಿಸಿಎಂ ಮತ್ತು ಹೆಚ್​ಎಂ ನಾಡಿನ ಬೇಷರತ್ ಕ್ಷಮೆ ಕೇಳಬೇಕು: ಸುರೇಶ್