ಅಭಿಮಾನಿ ಮುಂದೆ ದಾಸನಾದ ದರ್ಶನ್​: ಕಾರು ಫಾಲೋ ಮಾಡಿದವರ ಜತೆ ರಸ್ತೆಯಲ್ಲೇ ಕುಳಿತು ಮಾತನಾಡಿದ ಡಿ ಬಾಸ್

ಬೆಂಗಳೂರಿನಲ್ಲಿ ದರ್ಶನ್​ ಕಾರಿನಲ್ಲಿ ತೆರಳುತ್ತಿದ್ದರು. ದರ್ಶನ್​ ಕಾರಿನಲ್ಲಿ ಇದ್ದಿದ್ದನ್ನು ಗಮನಿಸಿದ ಅಭಿಮಾನಿ ಅವರನ್ನು ಹಿಂಬಾಲಿಸಿದ್ದಾರೆ.

  • TV9 Web Team
  • Published On - 22:05 PM, 24 Feb 2021
ಅಭಿಮಾನಿ ಮುಂದೆ ದಾಸನಾದ ದರ್ಶನ್​: ಕಾರು ಫಾಲೋ ಮಾಡಿದವರ ಜತೆ ರಸ್ತೆಯಲ್ಲೇ ಕುಳಿತು ಮಾತನಾಡಿದ ಡಿ ಬಾಸ್
ಅಭಿಮಾನಿಗಳ ಜೊತೆಗೆ ದರ್ಶನ್ ಚರ್ಚೆ

ನಟ ದರ್ಶನ್​ ಕೇವಲ ನಟನಾಗಿ ಮಾತ್ರ ಉಳಿದಿಲ್ಲ. ತಮ್ಮ ಸಾಮಾಜಿಕ ಕೆಲಸಗಳ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ. ದರ್ಶನ್​ ಮಾಡಿದ ಸಾಮಾಜಿಕ ಕೆಲಸಗಳನ್ನು ಪಟ್ಟಿ ಮಾಡುತ್ತಾ ಹೋದರೆ ಬೆಳೆಯುತ್ತಲೇ ಹೋಗುತ್ತದೆ. ಈಗ ಇದೇ ಮಾದರಿಯ ಕೆಲಸ ಮಾಡಿ ದರ್ಶನ್​ ಮಾದರಿಯಾಗಿದ್ದಾರೆ.

ಅಭಿಮಾನಿಗಳಿಗೆ ದರ್ಶನ್​ ಎಂದರೆ ಪಂಚಪ್ರಾಣ. ಇದೇ ಕಾರಣಕ್ಕೆ, ಅನೇಕ ಅಭಿಮಾನಿಗಳು ಮೈಮೇಲೆ ದರ್ಶನ್​ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ. ಇನ್ನೂ ಕೆಲವರು ದರ್ಶನ್​ ಫೋಟೊವನ್ನೇ ಹಚ್ಚೆಯಾಗಿ ದೇಹದಮೇಲೆ ಹಾಕಿಸಿಕೊಂಡಿದ್ದಿದೆ. ದರ್ಶನ್​ ಸಹ ಅಷ್ಟೇ ಅಭಿಮಾನಿಗಳ ಮೇಲೆ ಅಪಾರ ಗೌರವ ಇಟ್ಟಿದ್ದಾರೆ. ಎಲ್ಲಾದರೂ ತೆರಳಿದಾಗ ಅಭಿಮಾನಿಗಳು ಸಿಕ್ಕರೆ ಮಾತನಾಡಿಸದೇ ಹೋಗುವುದಿಲ್ಲ. ಇಂದು ಕೂಡ ತಮ್ಮನ್ನು ಹಿಂಬಾಲಿಸುತ್ತಿದ್ದ ಅಭಿಮಾನಿಗಳನ್ನು ದರ್ಶನ್​ ಮಾತನಾಡಿಸಿ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಬೆಂಗಳೂರಿನಲ್ಲಿ ದರ್ಶನ್​ ಕಾರಿನಲ್ಲಿ ತೆರಳುತ್ತಿದ್ದರು. ದರ್ಶನ್​ ಕಾರಿನಲ್ಲಿ ಇದ್ದಿದ್ದನ್ನು ಗಮನಿಸಿದ ಅಭಿಮಾನಿಯೊಬ್ಬರು ಆಟೊದಲ್ಲಿ ಅವರನ್ನು ಹಿಂಬಾಲಿಸಿದ್ದಾರೆ. ಇದು ದರ್ಶನ್​ ಗಮನಕ್ಕೆ ಬಂದಿದೆ. ನಂತರ ಚಾಲಕನಿಗೆ ಕಾರು ನಿಲ್ಲಿಸುವಂತೆ ದರ್ಶನ್​ ಸೂಚಿಸಿದ್ದಾರೆ. ದರ್ಶನ್​ ಕಾರು ನಿಲ್ಲಿಸಿದ್ದನ್ನು ನೋಡಿ ದರ್ಶನ್​ ಅಭಿಮಾನಿಗಳು ತುಂಬಾನೇ ಖುಷಿಯಾಗಿದ್ದಾರೆ. ನಂತರ ವಿಕಲಚೇತನ ಅಭಿಮಾನಿ ಜತೆ ದರ್ಶನ್​ ಕುಳಿತು ಮಾತನಾಡಿದ್ದಾರೆ. ದರ್ಶನ್​ ಮಾತನಾಡಿದ್ದನ್ನು ನೋಡಿ ಅಭಿಮಾನಿ ತುಂಬಾನೇ ಖುಷಿಯಾಗಿದ್ದಾರೆ.

ಇದನ್ನೂ ಓದಿ: Darshan Interview | ಜಗ್ಗೇಶ್​ ವಿವಾದಕ್ಕೆ ತೆರೆ: ಅಭಿಮಾನಿಗಳ ಪರವಾಗಿ ಕ್ಷಮೆ ಕೇಳಿದ ನಟ ದರ್ಶನ್​

Darshan Interview: ನಮ್ಮ ಹೀರೋ ಜತೆ ನಟಿಸೋಕೆ ನಮಗೇನು? ಯಶ್​ ಜತೆ ತೆರೆ ಹಂಚಿಕೊಳ್ಳುವ ಬಗ್ಗೆ ದರ್ಶನ್​ ಮಾತು