ರಾಬರ್ಟ್‌ ಪ್ರೀ ರಿಲೀಸ್.. ಹೈದರಾಬಾದ್​ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಡಿ ಬಾಸ್ ದರ್ಶನ್!

ರಾಬರ್ಟ್‌ ಪ್ರೀ ರಿಲೀಸ್.. ಹೈದರಾಬಾದ್​ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಡಿ ಬಾಸ್ ದರ್ಶನ್!
ಹೈದರಾಬಾದ್​ಗೆ ಬಂದಿಳಿದ ಡಿ ಬಾಸ್ ದರ್ಶನ್

ಹೈದರಾಬಾದ್​ನಲ್ಲಿ ಇಂದು ರಾಬರ್ಟ್‌ ಪ್ರೀ ರಿಲೀಸ್ ಕಾರ್ಯಕ್ರಮ ಹಿನ್ನೆಲೆ ನಟ ದರ್ಶನ್​ಗೆ ಏರ್ಪೋರ್ಟ್​ನಲ್ಲಿ ಅದ್ದೂರಿಯಾಗಿ ಬರಮಾಡಿಕೊಳ್ಳಲಾಗಿದೆ. ಹೈದರಾಬಾದ್​ನ ಫಿಲ್ಮ್ ನಗರ್ JRC ಕನ್ವೇನ್ಷನ್ ಹಾಲ್​ನಲ್ಲಿ ರಾಬರ್ಟ್ ಚಿತ್ರದ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ ಕಾರ್ಯಕ್ರಮಕ್ಕಾಗಿ ಹೈದರಾಬಾದ್​ ದಾಸ ದರ್ಶನ್ ಎಂಟ್ರಿ ಕೊಟ್ಟಿದ್ದಾರೆ.

Ayesha Banu

|

Feb 26, 2021 | 10:35 AM


ಟಾಲಿವುಡ್​ನಲ್ಲೂ ರಾಬರ್ಟ್ ದರ್ಶನಕ್ಕೆ ಕೌಂಟ್ ಡೌನ್ ಶುರುವಾಗಿದೆ. ಹೈದರಾಬಾದ್​ನಲ್ಲಿ ರಾಬರ್ಟ್ ಪ್ರಿ ಲಾಂಚ್ ಇವೆಂಟ್ ಹೇಗಿರುತ್ತೆ ಅನ್ನೋ ಕುತೂಹಲ ಹೆಚ್ಚಾಗಿದೆ. ಸದ್ಯ ನಟ ದರ್ಶನ್ ಹೈದರಾಬಾದ್ ಏರ್ಪೋರ್ಟ್​ಗೆ ಬಂದಿಳಿದಿದ್ದು ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಗಿದೆ. ಇಂದು ದರ್ಶನ್ ಹೈದರಾಬಾದ್​ನಲ್ಲಿ ನಡೆಯುವ ರಾಬರ್ಟ್ ಪ್ರಿ ಲಾಂಚ್ ಇವೆಂಟ್​ನಲ್ಲಿ ಭಾಗವಹಿಸಲಿದ್ದಾರೆ.

ಇಂದು ಸಂಜೆ 6 ಘಂಟೆ ನಂತರ ಹೈದರಾಬಾದ್​ನ ಫಿಲ್ಮ್ ನಗರದಲ್ಲಿ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮದಲ್ಲಿ ಟಾಲಿವುಡ್ ನಿರ್ಮಾಪಕರು, ವಿತರಕರು ಭಾಗಿಯಾಗಲಿದ್ದಾರೆ. ಕಲರ್ ಫುಲ್ ಕಾರ್ಯಕ್ರಮದಲ್ಲಿ ಇಂದು ರಾಬರ್ಟ್ ತಂಡ ಕಮಾಲ್ ಮಾಡಲಿದೆ. ರವಿ ಶಂಕರ್, ರವಿ ಕಿಶನ್, ವಿನೋದ್ ಪ್ರಭಾಕರ್, ಜಗಪತಿಬಾಗು, ದೇವರಾಜ್, ಆಶಾ ಭಟ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಹಾಗೂ ಹಲವು ಅಭಿಮಾನಿಗಳು ಸಹ ಭಾಗಿಯಾಗಲಿದ್ದಾರೆ. ಕರ್ನಾಟಕದಿಂದಲೂ 50 ಬಸ್​ಗಳಲ್ಲಿ ದರ್ಶನ್ ಅಭಿಮಾನಿಗಳು ಹೈದರಾಬಾದ್​ಗೆ ತೆರಳಿದ್ದಾರೆ ಅನ್ನೋ ಮಾಹಿತಿ ಇದೆ. ದರ್ಶನ್ ಸಿನಿ ಜರ್ನಿಯಲ್ಲಿ ಪರಭಾಷೆ ನೆಲದಲ್ಲಿ ನಡೆಯುತ್ತಿರೋ ಅದ್ದೂರಿ ಕಾರ್ಯಕ್ರಮ ಇದಾಗಿದೆ.

Darshan arrived to hyderabad

ಹೈದರಾಬಾದ್​ಗೆ ಬಂದಿಳಿದ ಡಿ ಬಾಸ್ ದರ್ಶನ್

Darshan arrived to hyderabad

ಹೈದರಾಬಾದ್​ಗೆ ಬಂದಿಳಿದ ಡಿ ಬಾಸ್ ದರ್ಶನ್

Darshan arrived to hyderabad

ಹೈದರಾಬಾದ್​ಗೆ ಬಂದಿಳಿದ ಡಿ ಬಾಸ್ ದರ್ಶನ್

Darshan arrived to hyderabad

ಹೈದರಾಬಾದ್​ಗೆ ಬಂದಿಳಿದ ಡಿ ಬಾಸ್ ದರ್ಶನ್

ಇದನ್ನೂ ಓದಿ: D Boss Darshan: ಜಮೀರ್​ ಅಹ್ಮದ್​ ಖಾನ್​ ಭವ್ಯ ಬಂಗಲೆಗೆ ಭೇಟಿ ನೀಡಿದ ಡಿ ಬಾಸ್​​ ದರ್ಶನ್​


Follow us on

Related Stories

Most Read Stories

Click on your DTH Provider to Add TV9 Kannada