ಧ್ರುವ ಸರ್ಜಾರನ್ನು ನೋಡಲು ಮುಗಿಬಿದ್ದ ಅಭಿಮಾನಿಗಳಿಗೆ ಬಿತ್ತು ಪೊಲೀಸ್ ಲಾಠಿ ಏಟು

ಪೊಗರು ಚಿತ್ರದ ಪ್ರಚಾರಕ್ಕಾಗಿ ನಟ ಧ್ರುವಸರ್ಜಾ ಚಿಕ್ಕಬಳ್ಳಾಪುರಕ್ಕೆ ತೆರಳಿದ್ದಾಗ, ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಲು ಮುಗಿಬಿದ್ದಿದ್ದಾರೆ. ಇದರಿಂದಾಗಿ ಉಂಟಾದ ನೂಕುನುಗ್ಗಲನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯಿತು.

  • TV9 Web Team
  • Published On - 11:34 AM, 27 Feb 2021
ಧ್ರುವ ಸರ್ಜಾರನ್ನು ನೋಡಲು ಮುಗಿಬಿದ್ದ ಅಭಿಮಾನಿಗಳಿಗೆ ಬಿತ್ತು ಪೊಲೀಸ್ ಲಾಠಿ ಏಟು
ಚಿಕ್ಕಬಳ್ಳಾಪುರದಲ್ಲಿ ಧ್ರುವ ಸರ್ಜಾ ಅಭಿಮಾನಿಗಳ ಮೇಲೆ ಲಾಠಿ ಚಾರ್ಜ್​

ಪೊಗರು ಚಿತ್ರದ ಪ್ರಚಾರಕ್ಕಾಗಿ ನಟ ಧ್ರುವ ಸರ್ಜಾ ಮತ್ತು ಚಿತ್ರತಂಡದವರು ಚಿಕ್ಕಬಳ್ಳಾಪುರಕ್ಕೆ ತೆರಳಿದ್ದಾರೆ. ಈ ಸಮಾರಂಭದಲ್ಲಿ ಅಭಿಮಾನಿಗಳು ತುಂಬ ಜನ ಸೇರಿದ್ದರು. ಧ್ರುವ ಮೇಲೆ ಹೂವಿನ ಅಭಿಷೇಕ ಮಾಡಿದ್ದಲ್ಲದೆ, ಅವರನ್ನ ನೋಡಲು ತಾ ಮುಂದು, ನಾ ಮುಂದು ಎಂದು ನುಗ್ಗಿದ್ದಾರೆ.

ದೊಡ್ಡದಾಗಿ ಗಲಾಟೆಯನ್ನೂ ಮಾಡಿದ್ದಾರೆ. ಈ ವೇಳೆ ಪೊಲೀಸರು ಅನಿವಾರ್ಯವಾಗಿ ಲಾಠಿ ಬೀಸಬೇಕಾಗಿ ಬಂತು. ನಂತರ ಧ್ರುವ ಸರ್ಜಾ ಥಿಯೇಟರ್ ಹೊರಗೆ ತಮ್ಮ ಕಾರ್​ ಮೇಲೆ