ಕಳಪೆ ಪ್ರದರ್ಶನದ ಮಧ್ಯೆಯೂ ಬಿಗ್ ಬಾಸ್​ ಇತಿಹಾಸದಲ್ಲೇ ಯಾರೂ ಮಾಡಿರದ ದಾಖಲೆ ಮಾಡಿದ್ದಾರೆ ಶಮಂತ್​!

ಬಿಗ್​ ಬಾಸ್​ನ ಸೂಪರ್ ಸಂಡೆ ವಿತ್ ಸುದೀಪ ಕಾರ್ಯಕ್ರಮದಲ್ಲಿ ಸುದೀಪ್​ ಮಾತನಾಡಿದ್ದಾರೆ. ಈ ವೇಳೆ ಅವರು ಶಮಂತ್​ ಮಾಡಿದ ಸಾಧನೆ ಬಗ್ಗೆ ಹೇಳಿಕೊಂಡಿದ್ದಾರೆ.

ಕಳಪೆ ಪ್ರದರ್ಶನದ ಮಧ್ಯೆಯೂ ಬಿಗ್ ಬಾಸ್​ ಇತಿಹಾಸದಲ್ಲೇ ಯಾರೂ ಮಾಡಿರದ ದಾಖಲೆ ಮಾಡಿದ್ದಾರೆ ಶಮಂತ್​!
ಶಮಂತ್​
Follow us
ರಾಜೇಶ್ ದುಗ್ಗುಮನೆ
|

Updated on:Mar 14, 2021 | 9:40 PM

ಬಿಗ್​ ಬಾಸ್​ ಮನೆಯಲ್ಲಿ ಶಮಂತ್​ ತುಂಬಾನೇ ಚರ್ಚೆ ಆದ ಸ್ಪರ್ಧಿ. ಶಮಂತ್​ ಅವರು ನಿಧಿ ಜೊತೆ ಬೇರೆ ರೀತಿ ನಡೆದುಕೊಂಡರು ಎಂಬ ಆರೋಪ ಕೂಡ ಕೇಳಿಬಂತು. ನಾಯಕನಾಗಿ ಅವರು ಕಳಪೆ ಸಾಧನೆ ಮಾಡಿದ್ದಾರೆ ಎನ್ನುವ ಪಟ್ಟವನ್ನು ಕೂಡ ಹೊತ್ತರು. ಈ ಮಧ್ಯೆ ಬಿಗ್​ ಬಾಸ್​ ಇತಿಹಾಸದಲ್ಲೇ ಶಮಂತ್​ ಯಾರೂ ಮಾಡಿರದ ಸಾಧನೆ ಮಾಡಿದ್ದಾರಂತೆ!

ಬಿಗ್​ ಬಾಸ್​ನ ಸೂಪರ್ ಸಂಡೆ ವಿತ್ ಸುದೀಪ ಕಾರ್ಯಕ್ರಮದಲ್ಲಿ ಸುದೀಪ್​ ಮಾತನಾಡಿದ್ದಾರೆ. ಈ ವೇಳೆ ಅವರು ಶಮಂತ್​ ಮಾಡಿದ ಸಾಧನೆ ಬಗ್ಗೆ ಹೇಳಿಕೊಂಡಿದ್ದಾರೆ. ಶಮಂತ್​ ಅವರೇ ನೀವು ನೇರವಾಗಿ ಎರಡು ವಾರ ಕ್ಯಾಪ್ಟನ್​ ಆಗಿದ್ದೀರಿ. ಬಿಗ್​ ಬಾಸ್​ ಇತಿಹಾಸದಲ್ಲೇ ಯಾರೂ ನೇರವಾಗಿ ಎರಡು ವಾರ ಕ್ಯಾಪ್ಟನ್​ ಆಗಿಲ್ಲ. ಇದು ನೀವು ಮಾಡಿದ ದೊಡ್ಡ ಸಾಧನೆ ಎಂದರು.

ಕ್ಯಾಪ್ಟನ್ಸಿ ಮುಗಿದ ಕೂಡಲೇ ಶಮಂತ್ ಜೈಲು ಸೇರಿದರು. ಈ ಬಗ್ಗೆಯೂ ಸುದೀಪ್ ಮಾತನಾಡಿದ್ದಾರೆ. ಎರಡು ವಾರ ನಾಯಕನಾದ ತಕ್ಷಣವೇ ನೀವು ಜೈಲಿಗೆ ಹೋಗಿದ್ದೀರಾ. ಕಳಪೆ ಸಾಧನೆ ಮಾಡಿದ್ದೀರಿ ಎನ್ನುವ ಪಟ್ಟ ಕಟ್ಟಿಕೊಂಡಿದ್ದೀರಾ. ಇದು ನಿಜಕ್ಕೂ ಬೇಸರದ ಸಂಗತಿ ಎಂದರು ಸುದೀಪ್​.

ವೈಷ್ಣವಿಯ ಬಟ್ಟೆ ಎಳೆದ ಶಮಂತ್​ ಬ್ರೋ ಗೌಡ- ಸನ್ನಿಧಿ 

ಎರಡನೇ ವಾರದಲ್ಲಿ ಮನೆಯೊಳಗಿನ ಸ್ಪರ್ಧಿಗಳಿಗೆ ವೈರಸ್​ ವರ್ಸಸ್​ ಮನುಷ್ಯರು ಎಂಬ ಟಾಸ್ಕ್​ ನೀಡಲಾಗಿತ್ತು. ಅದರಲ್ಲಿ ಎಲ್ಲರೂ ತುಂಬ ಆಕ್ರಮಣಕಾರಿಯಾಗಿ ಆಟ ಆಡಿದರು. ಈ ಟಾಸ್ಕ್​ ನಿಭಾಯಿಸುವಾಗ ಶಮಂತ್​ ಅವರು ತಮ್ಮ ಬಟ್ಟೆ ಎಳೆದರು ಎಂದು ವೈಷ್ಣವಿ ಹೇಳಿದ್ದಾರೆ. ಈ ವಿಚಾರವನ್ನೇ ಇಟ್ಟುಕೊಂಡು ಕಿಚ್ಚ ಸುದೀಪ್​ ವಾರದ ಪಂಚಾಯಿತಿಯಲ್ಲಿ ಮಾತುಕತೆ ಮಾಡಿದ್ದಾರೆ. ಮನೆಯೊಳಗಿನ ಹೆಣ್ಣುಮಕ್ಕಳ ಸುರಕ್ಷತೆ ಬಗ್ಗೆ ಸುದೀಪ್​ ಕಾಳಜಿ ವಹಿಸಿದ್ದಾರೆ.

‘ಶಮಂತ್​ ಮೊದಲ ಬಾರಿಗೆ ನನ್ನ ಬಟ್ಟೆ ಎಳೆದರು. ಕೈ ಕಾಲು ಎಳೆಯಿರಿ. ಆದರೆ ಬಟ್ಟೆ ಎಳೆಯಬೇಡಿ ಎಂದು ನಾನು ಶಮಂತ್​ಗೆ ಹೇಳಿದೆ. ಒಮ್ಮೆ ಸುಮ್ಮನಾದೆ. ಆಮೇಲೆ ಅವರು ಸಾರಿ ಕೇಳಿದರು. ಆದರೆ ಮತ್ತೊಮ್ಮೆ ಅದೇ ರೀತಿ ಮಾಡಿದರು. ಅಲ್ಲದೆ, ನನ್ನನ್ನು ಅವರು ತಳ್ಳಿದರು. ಆಗಲೂ ನನಗೆ ಬೇಜಾರಾಯಿತು’ ಎಂದು ತಮ್ಮ ಅಳಲನ್ನು ವೈಷ್ಣವಿ ತೋಡಿಕೊಂಡಿದ್ದಾರೆ. ನಿಮ್ಮ ಪ್ರಕಾರ ನಿಮ್ಮ ತಂಡದವರು ಎದುರಾಳಿ ತಂಡದವರ ಜೊತೆ ಈ ರೀತಿ ನಡೆದುಕೊಂಡಿಲ್ಲವೇ ಎಂದು ಸುದೀಪ್​ ಕೇಳಿದ್ದಕ್ಕೆ ‘ಇರಬಹುದು’ ಎಂದು ವೈಷ್ಣವಿ ಉತ್ತರ ನೀಡಿದರು.​

ಮಂಜು ಮತ್ತು ಶಮಂತ್​ ಅವರು ನಿಧಿ ಜೊತೆ ಬೇರೆ ರೀತಿ ನಡೆದುಕೊಂಡರು ಎಂಬ ಆರೋಪ ಕೂಡ ಕೇಳಿಬಂತು. ಅದಕ್ಕೂ ಸುದೀಪ್​ ಪ್ರತಿಕ್ರಿಯೆ ನೀಡಿದರು. ‘ಬಿಗ್ ಬಾಸ್ ಮನೆಯಲ್ಲಿ ಈ ರೀತಿಯ ಆರೋಪ ಮೊದಲನೇ ಸಲ ಅಲ್ಲ. ನಿಮಗೆ ಅನ್​ಕಂಫರ್ಟೆಬಲ್ ಆಗಿಲ್ಲ ಎಂದು ನಾನು ಹೇಳ್ತಾ ಇಲ್ಲ. ಆದರೆ ಯಾರಾದರೂ ಕೆಟ್ಟ ಉದ್ದೇಶದಿಂದ, ಅಕಸ್ಮಾತ್ ಆಗಿ ಅಂಥದ್ದೇನಾದರೂ ನಡೆಸ್ತಾ ಇದಾರೆ ಅಂತ ಗೊತ್ತಾದರೆ ಬಿಗ್​ ಬಾಸ್​ ಖಡಾಖಂಡಿತವಾಗಿ ತಕ್ಷಣ ಮಧ್ಯ ಪ್ರವೇಶಿಸ್ತಾರೆ. ನೀವು ನಂಬಲೇ ಬೇಕು. ಬಿಗ್​ ಬಾಸ್​ ನಿಮ್ಮ ಜೊತೆ ಇದ್ದೇ ಇರ್ತಾರೆ’ ಎಂದಿದ್ದಾರೆ ಸುದೀಪ್​.

ಇದನ್ನೂ ಓದಿ: ಸಿಕ್ಕಾಪಟ್ಟೆ ಹಾರಾಡೋ​ ಮಂಜುಗೆ ಅಲ್ಲಿ ಸರ್ಜರಿ ಮಾಡಿಸಬೇಕು; ಸೈಲೆಂಟ್​ ವೈಷ್ಣವಿ ಕೊಟ್ರು ಖಡಕ್​ ಟಾಂಗ್​!

Published On - 9:39 pm, Sun, 14 March 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್