Health Insurance Claim: ಆರೋಗ್ಯ ವಿಮೆ ರೀಎಂಬರ್ಸ್ಮೆಂಟ್ ಕ್ಲೇಮ್ ಅರ್ಜಿ ಸಲ್ಲಿಸುವ ಹಂತಹಂತವಾದ ಮಾಹಿತಿ ಇಲ್ಲಿದೆ
Health Insurance Reimbursement: ಆರೋಗ್ಯ ವಿಮೆಯ ರೀಎಂಬರ್ಸ್ಮೆಂಟ್ಗೆ ಕ್ಲೇಮ್ ಮಾಡುವುದಕ್ಕೆ ಹಂತಹಂತವಾದ ಮಾಹಿತಿ ಇಲ್ಲಿ ನಿಮ್ಮೆದುರು ಇದೆ.
ಆರೋಗ್ಯ ವಿಮೆಯಲ್ಲಿ (ಹೆಲ್ತ್ ಇನ್ಷೂರೆನ್ಸ್) ಎರಡು ಬಗೆ. ಅದರಲ್ಲಿ ಒಂದು ಕ್ಯಾಶ್ಲೆಸ್. ಹೆಸರೇ ಹೇಳುವಂತೆ ಇನ್ಷೂರೆನ್ಸ್ ಕಂಪೆನಿಯೇ ಕ್ಲೇಮ್ ಮೊತ್ತವನ್ನು ಪಾಲಿಸಿದಾರರ ಪರವಾಗಿ ಆಸ್ಪತ್ರೆಗೆ ಪಾವತಿಸುತ್ತದೆ. ಎರಡನೆಯದು ರೀ ಎಂಬರ್ಸ್ಮೆಂಟ್. ಅಂದರೆ ಪಾಲಿಸಿದಾರು ತಾವೇ ಆಸ್ಪತ್ರೆಗೆ ಹಣವನ್ನು ಪಾವತಿಸಬೇಕು. ಆ ನಂತರ ಇನ್ಷೂರೆನ್ಸ್ ಕಂಪೆನಿಯಿಂದ ಆ ಮೊತ್ತವನ್ನು ಹಿಂಪಡೆಯಬೇಕು. ಈ ಪೈಕಿ ರೀಎಂಬರ್ಸ್ಮೆಂಟ್ ವ್ಯವಸ್ಥೆ ಇನ್ಷೂರೆನ್ಸ್ ಕಂಪೆನಿಯ ನೆಟ್ವರ್ಕ್ ಹಾಗೂ ನೆಟ್ವರ್ಕ್ ಆಚೆಗೆ ಇರುವ ಆಸ್ಪತ್ರೆಗಳಲ್ಲೂ ನಡೆಯುತ್ತದೆ. ಕ್ಯಾಶ್ಲೆಸ್ ವಿಲೇವಾರಿಗೆ ಒಪ್ಪದ ಕಾರಣಕ್ಕೆ ರೀಎಂರ್ಸ್ಮೆಂಟ್ಗೆ ಸಿಕ್ಕಾಪಟ್ಟೆ ಸಮಯ ತೆಗೆದುಕೊಳ್ಳುತ್ತದೆ ಮತ್ತು ನಿಧಾನ ಆಗುತ್ತದೆ. ಏಕೆಂದರೆ ರೀಎಂಬರ್ಸ್ಮೆಂಟ್ ಅರ್ಜಿ ತುಂಬುವ ಕೆಲವು ಕಡೆ ಚೆಕ್ ಪಾಯಿಂಟ್ಗಳಿದ್ದು, ಅವುಗಳನ್ನು ತಿಳಿಯುವುದು ಬಹಳ ಕಷ್ಟವಾಗಿದೆ.
ಮೊದಲಿಗೆ, ಮೂರನೇ ವ್ಯಕ್ತಿಯಿಂದ (ಥರ್ಡ್ ಪಾರ್ಟಿ- ಟಿಪಿಎ) ನಿರ್ವಹಿಸುವ ಇನ್ಷೂರೆನ್ಸ್ ಒದಗಿಸುವವರಿಗೆ ಆಸ್ಪತ್ರೆಗೆ ದಾಖಲಾಗಿರುವ ಅಥವಾ ಚಿಕಿತ್ಸಾ ವೆಚ್ಚದ ಬಗ್ಗೆ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಮಾಹಿತಿ ನೀಡಬೇಕು. ಒಂದು ವೇಳೆ ತುರ್ತು ಇದ್ದಲ್ಲಿ ಇನ್ಷೂರೆನ್ಸ್ ಕಂಪೆನಿಗಳಿಗೂ ಮಾಹಿತಿ ನೀಡಬೇಕು. ಚಿಕಿತ್ಸೆ ಸಂಪೂರ್ಣವಾದ ಮೇಲೆ ಪಾಲಿಸಿದಾರರು ಎಲ್ಲ ಬಿಲ್ಗಳು, ಇನ್ವಾಯ್ಸ್ಗಳು, ಆಸ್ಪತ್ರೆಯಿಂದ ಹೊರಬಂದು ಫೈಲ್, ಡಿಸ್ಚಾರ್ಜ್ ಪೇಪರ್ಗಳು ಮತ್ತು ಮೆಡಿಕಲ್ ಬಿಲ್ ಇವೆಲ್ಲವನ್ನು ತಮ್ಮ ಬಳಿ ಇಟ್ಟುಕೊಳ್ಳಬೇಕು. ರೀಎಂಬರ್ಸ್ಮೆಂಟ್ ಕ್ಲೇಮ್ ಅರ್ಜಿ ಹಾಗೂ ಜತೆಗೆ ಆಸ್ಪತ್ರೆಗೆ ದಾಖಲಾಗಿದ್ದು ಮತ್ತು ಚಿಕಿತ್ಸೆಗೆ ಸಂಬಂಧಿಸಿದ ಎಲ್ಲ ವೆಚ್ಚಗಳನ್ನು ಭರ್ತಿ ಮಾಡಬೇಕು. ಒಂದು ಸಲ ಸಲ್ಲಿಕೆಯಾದ ಮೇಲೆ ಇನ್ಷೂರೆನ್ಸ್ ಕಂಪೆನಿಯು ಮೌಲ್ಯಮಾಪನ ಮಾಡುತ್ತದೆ ಹಾಗೂ ಕೆಲ ದಿನಗಳನ್ನು ಮೊತ್ತವನ್ನು ರೀಎಂಬರ್ಸ್ ಮಾಡುತ್ತದೆ.
ಈ ರೀಎಂಬರ್ಸ್ಮೆಂಟ್ ಕ್ಲೇಮ್ ಮಾಡುವುದಲ್ಲೆ ಟಿಪಿಎ ವಿತರಿಸಿದ ಹೆಲ್ತ್ ಕಾರ್ಡ್, ಆಸ್ಪತ್ರೆಯ ಡಿಸ್ಚಾರ್ಜ್ ಸಮ್ಮರಿ, ಭರ್ತಿ ಮಾಡಿದ ಕ್ಲೇಮ್ ಅರ್ಜಿ, ಎಲ್ಲ ವೈದ್ಯಕೀಯ ವರದಿಗಳು, ಎಲ್ಲ ಮೆಡಿಕಲ್ ಬಿಲ್ಗಳು ಮತ್ತು ಇನ್ವಾಯ್ಸ್ಗಳು ಹಾಗೂ ಅವುಗಳಿಗೆ ಪೂರಕವಾದ ಪ್ರೆಸ್ಕ್ರಿಪ್ಷನ್ಗಳು, ಕೆವೈಸಿ ದಾಖಲಾತಿಗಳ ನಕಲು, ಹಣವನ್ನು NEFT ಮೂಲಕ ವರ್ಗಾವಣೆ ಮಾಡುವುದಕ್ಕೆ ಬೇಕಾದ ಬ್ಯಾಂಕ್ ಮಾಹಿತಿ ಇವೆಲ್ಲವನ್ನೂ ಸಲ್ಲಿಸಬೇಕು.
ಇನ್ಷೂರರ್ಗೆ ಸಲ್ಲಿಕೆ ಆಗುವ ಮುನ್ನ ಎಲ್ಲ ದಾಖಲಾತಿಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು. ರೀಎಂಬರ್ಸ್ಮೆಂಟ್ ಕ್ಲೇಮ್ಗೆ ಇನ್ಷೂರರ್ಗೆ ಕಳುಹಿಸುವ ಎಲ್ಲ ದಾಖಲಾತಿಗಳ ಒಂದು ಪ್ರತಿಯನ್ನು (ಕಾಪಿ) ಪಾಲಿಸಿದಾರರು ತಮ್ಮ ಬಳಿ ಇರಿಸಿಕೊಳ್ಳಬೇಕು. ಭವಿಷ್ಯದಲ್ಲಿ ಒಂದು ವೇಳೆ ವ್ಯಾಜ್ಯಗಳಿದ್ದಲ್ಲಿ ಅಥವಾ ಸಂವಹನಕ್ಕೆ ಇದರಿಂದ ಅನುಕೂಲ ಆಗುತ್ತದೆ. ಕ್ಲೇಮ್ಗಾಗಿ ದಾಖಲಾತಿಗಳು ಸಲ್ಲಿಕೆ ಆಗುವುದಕ್ಕಿಂತ ಮುಂಚೆ ಸರಿಯಾಗಿ ಪರಿಶೀಲಿಸಬೇಕು. ಅಗತ್ಯ ದಾಖಲೆಗಳು ಇಲ್ಲದಿದ್ದಲ್ಲಿ ಹಾಗೂ ತಪ್ಪಾದ ದಾಖಲೆಗಳು ಇದ್ದಲ್ಲಿ ಕ್ಲೇಮ್ ತಿರಸ್ಕೃತ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ: Health insurance: ಹೆಚ್ಚಿನ ಮೊತ್ತದ ಹೆಲ್ತ್ ಇನ್ಷೂರೆನ್ಸ್ ಖರೀದಿಯೋ ಅಥವಾ ರೀಸ್ಟೋರ್ ಮಾಡಿಸಬೇಕೋ?
(How to claim for health insurance reimbursement claim? Here is the step by step details to follow)
Published On - 11:17 am, Mon, 31 May 21