Petrol-Diesel price: ಮನಮೋಹನ್ ಸಿಂಗ್ ಸರ್ಕಾರ ತಪ್ಪಿಗೆ ಪೆಟ್ರೋಲ್ಗೆ ನಾವು ಬೆಲೆ ತೆರುತ್ತಿದ್ದೇವೆ ಎಂದ ನಿರ್ಮಲಾ
ಪೆಡ್ರೋಲ್- ಡೀಸೆಲ್ ಬೆಲೆಗೆ ಸಂಬಂಧಿಸಿದಂತೆ ಮನಮೋಹನ್ ಸಿಂಗ್ ನೇತೃತ್ವದಲ್ಲಿನ ಯುಪಿಎ ಸರ್ಕಾರ ತೆಗೆದುಕೊಂಡ ನಿರ್ಧಾರಕ್ಕೆ ನಾವು ಬೆಲೆ ತೆರುತ್ತಿದ್ದೇವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಕಡಿಮೆ ಮಾಡಿದ್ದರೆ ಬೆಲೆಯನ್ನು ಈಗ ನರೇಂದ್ರ ಮೋದಿ ಸರ್ಕಾರವು ಪಾವತಿಸುತ್ತಿದೆ. ಏಕೆಂದರೆ ಆ ಅವಧಿಯ ತೈಲ ಬಾಂಡ್‌ಗಳ (Oil Bonds) ಮೇಲಿನ ಬಡ್ಡಿ ಮತ್ತು ಅಸಲು ಮೊತ್ತವನ್ನು ಮರುಪಾವತಿ ಮಾಡಬೇಕಾಗುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ, ಆಗಸ್ಟ್ 16ರಂದು ಹೇಳಿದ್ದಾರೆ. ನಿರ್ಮಲಾ ಸೀತಾರಾಮನ್ ಮಾತನಾಡಿ, 31 ಮಾರ್ಚ್, 2021ರ ವೇಳೆಗೆ 1.31 ಲಕ್ಷ ಕೋಟಿ ರೂಪಾಯಿ ಅಸಲು ಬಾಕಿ ಉಳಿದಿದ್ದು ಮತ್ತು 37,340 ಕೋಟಿ ರೂಪಾಯಿಯ ಬಡ್ಡಿಯನ್ನು ಈ ತೈಲ ಬಾಂಡ್‌ಗಳಿಗೆ ಮರುಪಾವತಿ ಮಾಡಬೇಕಿದೆ ಎಂದು ಹೇಳಿದರು.
“ಈ ಹಿಂದಿನ ಸರ್ಕಾರದಿಂದ ಪಡೆದಂಥ ಎಲ್ಲವನ್ನೂ ಪಟ್ಟಿ ಮಾಡುವ ಒಂದು ಶ್ವೇತಪತ್ರವನ್ನು (White Paper) 2014ರಲ್ಲಿ ಬಿಡುಗಡೆ ಮಾಡಬೇಕಿತ್ತು. ತೈಲ ಬಾಂಡ್‌ಗಳು ಅದರ ಒಂದು ದೊಡ್ಡ ಭಾಗವಾಗಿತ್ತು. ಹಿಂದಿನ ಸರ್ಕಾರವು ಬೆಲೆಗಳನ್ನು ಕಡಿಮೆ ಮಾಡಿತ್ತು. ಆದರೆ ಆ ಹೊರೆಯನ್ನು ಈ ತೈಲ ಬಾಂಡ್‌ಗಳ ಮೂಲಕ ತೈಲ ಮಾರುಕಟ್ಟೆಯ ಕಂಪೆನಿಗಳು ತೆಗೆದುಕೊಳ್ಳಬೇಕಾಯಿತು (OMCಗಳು),” ಎಂದು ಅವರು ಉತ್ತರಿಸಿದರು. ಕೇಂದ್ರವು ತಮಿಳುನಾಡಿನ ಮಾದರಿಯನ್ನು ಅನುಸರಿಸುತ್ತದೆಯೇ ಮತ್ತು ಇಂಧನದ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸುತ್ತದೆಯೇ ಎಂದು ಕೇಳಿದಾಗ ಮಾಧ್ಯಮ ಸಂವಾದದಲ್ಲಿ ಸೀತಾರಾಮನ್ ಹೇಳಿದರು.
ತಮಿಳುನಾಡು ಸರ್ಕಾರವು ಆಗಸ್ಟ್ 13ರಂದು ಪೆಟ್ರೋಲ್ ದರವನ್ನು ಪ್ರತಿ ಲೀಟರ್‌ಗೆ 3 ರೂಪಾಯಿಗಳಷ್ಟು ಇಳಿಸಲು ಇಂಧನ ತೆರಿಗೆಯನ್ನು ಕಡಿಮೆ ಮಾಡುವುದಾಗಿ ಘೋಷಿಸಿತ್ತು. ಕಡಿತದಿಂದ ರಾಜ್ಯದ ಬೊಕ್ಕಸಕ್ಕೆ ವರ್ಷಕ್ಕೆ 1,160 ಕೋಟಿ ರೂಪಾಯಿ ನಷ್ಟವಾಗುತ್ತದೆ. 2014 ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಈ ತೈಲ ಬಾಂಡ್‌ಗಳ ಮೇಲಿನ ಬಡ್ಡಿಯ ಪೈಕಿ ಕೇಂದ್ರದಿಂದ 60,206 ಕೋಟಿ ರೂಪಾಯಿ ಪಾವತಿಸಲಾಗಿದೆ.
ಗಮನ ಸೆಳೆಯುವಂಥದ್ದು ಏನೆಂದರೆ, ಅಂದಿನ ಯುಪಿಎ ಸರ್ಕಾರವು 2005 ಮತ್ತು 2010ರ ನಡುವೆ ಸಬ್ಸಿಡಿಗಳಿಗೆ ಬದಲಿಯಾಗಿ ತೈಲ ಬಾಂಡ್‌ಗಳನ್ನು ವಿತರಿಸಲು ನಿರ್ಧಾರ ತೆಗೆದುಕೊಂಡಿತು. ಅಧಿಕ ಕಚ್ಚಾ ಬೆಲೆಗಳು ಮತ್ತು 2008ರ ಆರ್ಥಿಕ ಹಿಂಜರಿತದಿಂದ ಸರ್ಕಾರದ ಮೇಲಿನ ಒತ್ತಡ ಹೆಚ್ಚಾಯಿತು. ಬಾಂಡ್‌ಗಳ ಮೂಲಕ ಬಂಡವಾಳವನ್ನು ಹೆಚ್ಚಿಸುವುರೊಂದಿಗೆ ಈ ಪಾವತಿಗಳನ್ನು ಬೆಲೆಗಳಲ್ಲಿ ದೊಡ್ಡ ಏರಿಕೆ ಉಂಟುಮಾಡದೆ ಮುಂದೂಡುವ (Deferred) ರೀತಿಯಲ್ಲಿ ಮಾಡಬಹುದು, ಹೀಗಾಗಿ ಗ್ರಾಹಕರ ಮೇಲೆ ಹೊರೆ ಆಗದಂತೆ ತಡೆಯುತ್ತದೆ.
ಇದನ್ನೂ ಓದಿ: ತಮಿಳುನಾಡಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ ₹3 ಇಳಿಕೆ: ರಾಜ್ಯ ಬಜೆಟ್ನಲ್ಲಿ ಹಣಕಾಸು ಸಚಿವ ತ್ಯಾಗರಾಜನ್ ಘೋಷಣೆ
(Narendra Modi Government Paying Price For Manmohan Singh Led UPA Government Decision On Petrol Price)