SBI Pension Portal: ಸ್ಟೇಟ್ ಬ್ಯಾಂಕ್ ಆಫ್​ ಇಂಡಿಯಾದಿಂದ ಪಿಂಚಣಿದಾರರಿಗಾಗಿಯೇ ಹೊಸ ಪೋರ್ಟಲ್

ಸ್ಟೇಟ್​ ಬ್ಯಾಂಕ್​ ಆಫ್ ಇಂಡಿಯಾದಿಂದ ಪಿಂಚಣಿದಾರರಿಗೆ ಅಂತಲೇ ವೆಬ್​ಪೋರ್ಟಲ್ ಮಾಡಲಾಗಿದೆ. ಏನು ಇದರ ಅನುಕೂಲ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

SBI Pension Portal: ಸ್ಟೇಟ್ ಬ್ಯಾಂಕ್ ಆಫ್​ ಇಂಡಿಯಾದಿಂದ ಪಿಂಚಣಿದಾರರಿಗಾಗಿಯೇ ಹೊಸ ಪೋರ್ಟಲ್
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Aug 16, 2021 | 5:37 PM

ಸ್ಟೇಟ್ ಬ್ಯಾಂಕ್ ಆಫ್​ ಇಂಡಿಯಾದಲ್ಲಿ (SBI) 8.5 ಕೋಟಿಗೂ ಹೆಚ್ಚು ಪೆನ್ಷನ್ ಖಾತೆದಾರರು ಇದ್ದು, ಈಗ ಅವರಿಗಾಗಿಯೇ ಮೀಸಲಾದ (ಡೆಡಿಕೇಟೆಡ್) ಪೆನ್ಷನ್ ವೆಬ್‌ಸೈಟ್ ಹೊಂದಿದ್ದು, ಇದು ಆ ಗ್ರಾಹಕರಿಗೆ ಮಾತ್ರವೇ ಇರುವಂಥ ಪೋರ್ಟಲ್ ಆಗಿದೆ. ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದಲ್ಲಿ ವಿವಿಧ ಉದ್ಯಮ, ವಲಯಗಳಿಗೆ ಸೇರಿದ ದೊಡ್ಡ ಪ್ರಮಾಣದ ಪಿಂಚಣಿದಾರರು ಅಪಾರ ಸಂಖ್ಯೆಯಲ್ಲಿ ಖಾತೆ​ ಹೊಂದಿದ್ದಾರೆ. ಪಿಂಚಣಿದಾರರ ಎಲ್ಲ ಅಗತ್ಯಗಳನ್ನೂ ಈ ವೆಬ್​ಸೈಟ್​ ಮೂಲಕವಾಗಿ ಪೂರೈಸಲಾಗುತ್ತದೆ ಎಂದು ಬ್ಯಾಂಕ್ ಟ್ವೀಟ್ ಮಾಡಿದೆ. ಪ್ರತಿ ಪಿಂಚಣಿದಾರರು ವರ್ಷಕ್ಕೊಮ್ಮೆ “ಜೀವಂತ” ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ. ಎಸ್‌ಬಿಐ ಪಿಂಚಣಿ ಖಾತೆದಾರರು ಈಗ ತಮ್ಮ ಜೀವಂತ ಪ್ರಮಾಣಪತ್ರ ಅಥವಾ ಜೀವನ್ ಪ್ರಮಾಣ ಪತ್ರವನ್ನು ಈ ವೆಬ್‌ಸೈಟ್ ಮೂಲಕ ಸಲ್ಲಿಸಬಹುದು. ಇದಕ್ಕಾಗಿಯೇ ಪೆನ್ಷನ್​ದಾರರು ಅಥವಾ ಅವರ ಪ್ರತಿನಿಧಿಗಳು ಶಾಖೆಗೆ ಭೇಟಿ ನೀಡಿ, ಸರದಿಯಲ್ಲಿ ನಿಲ್ಲಬೇಕಾಗಿಲ್ಲ. ಪಿಂಚಣಿದಾರರು ಪಿಂಚಣಿ, ಬಡ್ಡಿ ಠೇವಣಿ ಮತ್ತು ಬ್ಯಾಲೆನ್ಸ್ ಸಂಬಂಧಿತ ಮಾಹಿತಿಯಂತಹ ವಿವರಗಳನ್ನು ಲಾಗಿನ್ ಮಾಡಿ, ತಕ್ಷಣ ಪಡೆಯಬಹುದು ಮತ್ತು ಪರಿಶೀಲಿಸಬಹುದು.

ಲಭ್ಯ ಇರುವ ಸೇವೆಗಳು ಜೀವಂತ ಪ್ರಮಾಣಪತ್ರವನ್ನು ಸಲ್ಲಿಸುವುದು ಮತ್ತು ಬ್ಯಾಲೆನ್ಸ್ ಪರಿಶೀಲಿಸುವುದರ ಜೊತೆಗೆ ಈ ಪೋರ್ಟಲ್ ಮೂಲಕ ಅನೇಕ ಸೇವೆಗಳನ್ನು ಪಡೆಯಬಹುದು. ಬಾಕಿ ಲೆಕ್ಕಾಚಾರದ ಶೀಟ್​ಗಳ ಡೌನ್‌ಲೋಡ್, ಪಿಂಚಣಿ ಸ್ಲಿಪ್‌ಗಳು ಅಥವಾ ಫಾರ್ಮ್- 16 ಡೌನ್‌ಲೋಡ್ ಕೂಡ ಇಲ್ಲಿ ಲಭ್ಯವಿದೆ. ಪಿಂಚಣಿ ವಿವರಗಳು, ಆರ್‌ಡಿ, ಎಫ್‌ಡಿ, ಮ್ಯೂಚುವಲ್‌ ಫಂಡ್‌ಗಳಂತಹ ಎಲ್ಲ ರೀತಿಯ ಹೂಡಿಕೆಗಳಿಗೆ ಸಂಬಂಧಿಸಿದ ಮಾಹಿತಿ ಮತ್ತು ಜೀವಂತ ಪ್ರಮಾಣಪತ್ರದ ಸ್ಥಿತಿಯನ್ನು (Status) ಸಹ ಪಿಂಚಣಿ ಪೋರ್ಟಲ್ ಮೂಲಕ ಪಡೆಯಬಹುದು ಎಂದು ಎಸ್‌ಬಿಐ ಹೇಳಿದೆ. ಬ್ಯಾಂಕ್​ಗೆ ಬರುವ ಮಾಸಿಕ ಪಿಂಚಣಿ ಮೊತ್ತದ ಮೇಲೆ ಎಸ್‌ಬಿಐ ವೈಯಕ್ತಿಕ ಸಾಲವನ್ನು ನೀಡುತ್ತದೆ. ಪಿಂಚಣಿದಾರರು ಈ ಪೋರ್ಟಲ್ ಮೂಲಕ ಆ ಸೌಲಭ್ಯವನ್ನು ಪಡೆಯಬಹುದು.

ಹೆಚ್ಚುವರಿ ಪ್ರಯೋಜನಗಳು ಸಾಮಾನ್ಯ ಎಸ್ಸೆಮ್ಮೆಸ್ ಅಲರ್ಟ್​​ಗಳು ಮತ್ತು ಮಾಸಿಕ ಪಿಂಚಣಿ ಸ್ಲಿಪ್‌ಗಳಂತಹ ಇನ್ನೂ ಕೆಲವು ಸೌಲಭ್ಯಗಳು ಇವೆ. ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ಮತ್ತು ರಕ್ಷಣಾ, ರೈಲ್ವೆ, ಸಿಪಿಎಒ ಪಿಂಚಣಿದಾರರಿಗೆ ಇಪಿಪಿಒ ಸೌಲಭ್ಯವೂ ಪೋರ್ಟಲ್‌ನಲ್ಲಿವೆ.

ನೋಂದಣಿ ನೀವು ಎಸ್‌ಬಿಐನ ನೋಂದಾಯಿತ ಪಿಂಚಣಿ ಹೊಂದಿರುವವರಾಗಿದ್ದರೆ ಈ ಸೌಲಭ್ಯಕ್ಕೆ ಅರ್ಹರಾಗಿರುತ್ತೀರಿ. ಮೊದಲಿಗೆ ನೀವು ಯೂಸರ್​ ಐ.ಡಿ.ಯನ್ನು ಸೃಷ್ಟಿಸಬೇಕು ಮತ್ತು ನಿಮ್ಮ ಪಿಂಚಣಿ ಖಾತೆ ಸಂಖ್ಯೆಯನ್ನು ನಮೂದಿಸಬೇಕು. ಆ ನಂತರ ನಿಮ್ಮ ಜನ್ಮ ದಿನಾಂಕವನ್ನು ಹಾಕಿ ಮತ್ತು ಶಾಖೆಗೆ ಸಲ್ಲಿಸಿದಂತೆಯೇ ಪಿಂಚಣಿ ಪಾವತಿಸುವ ಶಾಖೆಯ ಕೋಡ್ ಮತ್ತು ನೋಂದಾಯಿತ ಇಮೇಲ್ ಐಡಿಯನ್ನು ನಮೂದಿಸಿ. ಪಾಸ್​ವರ್ಡ್ ಅನ್ನು ನಮೂದಿಸಿ, ಆ ನಂತರ ಪಾಸ್ವರ್ಡ್ ಅನ್ನು ದೃಢೀಕರಿಸಿ. ಈಗ ನಿಮ್ಮ ಪಿಂಚಣಿ ಖಾತೆ ಬಳಕೆಗೆ ಸಿದ್ಧವಾಗುತ್ತದೆ.

ಇದನ್ನೂ ಓದಿ: SBI Branch Transfer: ಎಸ್​ಬಿಐ ಗ್ರಾಹಕರು ಒಂದು ಶಾಖೆಯಿಂದ ಮತ್ತೊಂದಕ್ಕೆ ಖಾತೆ ವರ್ಗಾವಣೆ ಮಾಡೋದು ಹೀಗೆ

(State Bank Of India Dedicated Web Portal For Pension Account Holders Know The Benefits)

ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ