SBI Loan Offers: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಾಲಗಳ ಮೇಲೆ ಆಫರ್ಗಳ ಸುರಿಮಳೆ
ಹಬ್ಬದ ಋತುವಿನ ಪ್ರಯುಕ್ತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ವಿವಿಧ ಆಫರ್ಗಳನ್ನು ನೀಡಲಾಗುತ್ತಿದೆ. ಆ ಬಗೆಗಿನ ವಿವರ ಇಲ್ಲಿದೆ.

ದೇಶದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ರೀಟೇಲ್ ಗ್ರಾಹಕರಿಗಾಗಿ ಹಬ್ಬದ ಸೀಸನ್ ಪ್ರಯುಕ್ತ ವಿವಿಧ ಆಫರ್ಗಳನ್ನು ಸೋಮವಾರ ಘೋಷಣೆ ಮಾಡಿದೆ. ಕಾರು ಲೋನ್ ಪಡೆಯುವ ಗ್ರಾಹಕರಿಗೆ ಶೇ 100ರಷ್ಟು ಪ್ರೊಸೆಸಿಂಗ್ ಶುಲ್ಕ ಮನ್ನಾ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇನ್ನು ಕಾರು ಲೋನ್ ಪಡೆಯುವಂಥ ಗ್ರಾಹಕರಿಗೆ ಆನ್ ರೋಡ್ ಬೆಲೆಯ ಶೇ 90ರ ತನಕ ಹಣಕಾಸಿನ ಸಾಲ ದೊರೆಯುತ್ತದೆ. ಯಾರು YONO ಮೂಲಕವಾಗಿ ಕಾರು ಖರೀದಿಗಾಗಿ ಸಾಲಕ್ಕೆ ಅರ್ಜಿ ಸಲ್ಲಿಸುತ್ತಾರೋ ಅಂಥವರಿಗೆ 25 ಬೇಸಿಸ್ ಪಾಯಿಂಟ್ (ಬಿಪಿಎಸ್) ವಿನಾಯಿತಿ ಸಿಗುತ್ತದೆ. YONO (You Only Need One App) ಎಂಬುದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಷನ್ ಆಗಿದೆ. YONO ಬಳಕೆದಾರರು ಕಾರ್ ಲೋನ್ ಅನ್ನು ವಾರ್ಷಿಕವಾಗಿ ಶೇ 7.5ರ ಆರಂಭಿಕ ಬಡ್ಡಿ ದರದಲ್ಲಿ ಪಡೆಯುತ್ತಾರೆ ಎಂದು ಮಾಹಿತಿ ನೀಡಲಾಗಿದೆ.
ಚಿನ್ನವನ್ನು ಅಡಮಾನ ಮಾಡಿ ಪಡೆಯುವ ಸಾಲಕ್ಕೆ ಬ್ಯಾಂಕ್ನಿಂದ 75 ಬಿಪಿಎಸ್ ಇಳಿಕೆ ಮಾಡಲಾಗಿದೆ. ಗ್ರಾಹಕರು ಗೋಲ್ಡ್ ಲೋನ್ ಅನ್ನು ವಾರ್ಷಿಕ ಬಡ್ಡಿ ದರವಾದ ಶೇ 7.5ಕ್ಕೆ ಪಡೆಯುತ್ತಾರೆ. YONO ಮೂಲಕ ಗೋಲ್ಡ್ ಲೋನ್ಗೆ ಅಪ್ಲೈ ಮಾಡುವ ಎಲ್ಲ ಗ್ರಾಹಕರಿಗೆ ಪ್ರೊಸೆಸಿಂಗ್ ಫೀ ಮನ್ನಾ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪರ್ಸನಲ್ ಹಾಗೂ ಪೆನ್ಷನ್ ಲೋನ್ ಗ್ರಾಹಕರಿಗೆ ಎಸ್ಬಿಐನಿಂದ ಪ್ರೊಸೆಸೆಂಗ್ ಫೀ ಶೇ 100ರಷ್ಟು ಮನ್ನಾ ಮಾಡಲಾಗಿದೆ. ಕೋವಿಡ್ ವಾರಿಯರ್ಗಳಿಗೆ ಪರ್ಸನಲ್ ಲೋನ್ಗಳ ಮೇಲೆ ವಿಶೇಷ ಬಡ್ಡಿ ರಿಯಾಯಿತಿ 50 ಬಿಪಿಎಸ್ ಘೋಷಿಸಲಾಗಿದೆ. ಈ ಆಫರ್ ಸದ್ಯದಲ್ಲೇ ಕಾರು, ಚಿನ್ನದ ಮೇಲಿನ ಸಾಲಕ್ಕೂ ದೊರೆಯಲಿದೆ ಎಂದು ಬ್ಯಾಂಕ್ನಿಂದ ತಿಳಿಸಲಾಗಿದೆ.
ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆಯ ಸಂಭ್ರಮಕ್ಕಾಗಿ ಠೇವಣಿದಾರರಿಗೆ ಪ್ಲಾಟಿನಂ ಟರ್ಮ್ ಡೆಪಾಸಿಟ್ಸ್ ಎಂಬುದನ್ನು ಪರಿಚಯಿಸಲಾಗಿದೆ. ಈ ಆಫರ್ ಅಡಿಯಲ್ಲಿ ಗ್ರಾಹಕರಿಗೆ ಹೆಚ್ಚುವರಿಯಾಗಿ 15 ಬಿಪಿಎಸ್ ತನಕ ಬಡ್ಡಿ ದರ ಸಿಗುತ್ತದೆ. ಅದು 75 ದಿನ, 75 ವಾರ ಮತ್ತು 75 ತಿಂಗಳ ಅವಧಿಗೆ ಮಾಡಿದ ಡೆಪಾಟ್ಸ್ಗೆ ಅನ್ವಯಿಸುತ್ತದೆ. ಈ ಆಫರ್ ಆಗಸ್ಟ್ 15, 2021ರಿಂದ ಸೆಪ್ಟೆಂಬರ್ 14, 2021ರ ತನಕ ಇರುತ್ತದೆ. “ಈ ಆಫರ್ಗಳಿಂದ ಗ್ರಾಹಕರು ತಮ್ಮ ಸಾಲದ ಮೇಲೆ ಹೆಚ್ಚಿ ಉಳಿತಾಯ ಮಾಡಬಹುದು ಹಾಗೂ ಅದೇ ಸಮಯಕ್ಕೆ ಹಬ್ಬದ ಸಂಭ್ರಮಾಚರಣೆಗೆ ಇನ್ನಷ್ಟು ಮೌಲ್ಯವನ್ನು ಸೇರ್ಪಡೆ ಮಾಡಬಹುದು,” ಎಂದು ಬ್ಯಾಂಕ್ನ ರೀಟೇಲ್ ಮತ್ತು ಡಿಜಿಟಲ್ ಬ್ಯಾಂಕಿಂಗ್ ಮ್ಯಾನೇಜಿಂಗ್ ಡೈರೆಕ್ಟರ್ ಸಿ.ಎಸ್.ಶೆಟ್ಟಿ ಹೇಳಿದ್ದಾರೆ. ಕಳೆದ ತಿಂಗಳು ಬ್ಯಾಂಕ್ ಘೋಷಣೆ ಮಾಡಿರುವ ಪ್ರಕಾರ, ಆಗಸ್ಟ್ 31, 2021ರ ತನಕ ಹೋಮ್ ಲೋನ್ ಮೇಲೆ ಶೇ 100ರಷ್ಟು ಪ್ರೊಸೆಸಿಂಗ್ ಶುಲ್ಕ ಮನ್ನಾ ಮಾಡಲಾಗುತ್ತದೆ ಹಾಗೂ ಬಡ್ಡಿ ದರ ಶೇ 6.70 ಇರುತ್ತದೆ.
ಇದನ್ನೂ ಓದಿ: SBI Branch Transfer: ಎಸ್ಬಿಐ ಗ್ರಾಹಕರು ಒಂದು ಶಾಖೆಯಿಂದ ಮತ್ತೊಂದಕ್ಕೆ ಖಾತೆ ವರ್ಗಾವಣೆ ಮಾಡೋದು ಹೀಗೆ
SBI MOD: ಯಾವುದೇ ದಂಡ ಶುಲ್ಕ ಇಲ್ಲದೆ ಎಸ್ಬಿಐ ಈ ಟರ್ಮ್ ಡೆಪಾಸಿಟ್ನಿಂದ ಹಣ ತೆಗೆಯುವುದು ಹೇಗೆ ಗೊತ್ತಾ?
(SBI Offering Various Loan Offers To Customers Here Is The Details)