SBI MOD: ಯಾವುದೇ ದಂಡ ಶುಲ್ಕ ಇಲ್ಲದೆ ಎಸ್​ಬಿಐ ಈ ಟರ್ಮ್​ ಡೆಪಾಸಿಟ್​ನಿಂದ ಹಣ ತೆಗೆಯುವುದು ಹೇಗೆ ಗೊತ್ತಾ?

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಈ ಫಿಕ್ಸೆಡ್ ಡೆಪಾಸಿಟ್ ಖಾತೆಯಿಂದ ಹಣ ವಿಥ್​ಡ್ರಾ ಮಾಡಿದರೂ ಯಾವುದೇ ದಂಡ ಬೀಳುವುದಿಲ್ಲ. ಯಾವುದು ಆ ಖಾತೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

SBI MOD: ಯಾವುದೇ ದಂಡ ಶುಲ್ಕ ಇಲ್ಲದೆ ಎಸ್​ಬಿಐ ಈ ಟರ್ಮ್​ ಡೆಪಾಸಿಟ್​ನಿಂದ ಹಣ ತೆಗೆಯುವುದು ಹೇಗೆ ಗೊತ್ತಾ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jul 30, 2021 | 4:56 PM

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಫಿಕ್ಸೆಡ್​ ಡೆಪಾಸಿಟ್ ಇದ್ದು, ಯಾವುದೇ ದಂಡ ಇಲ್ಲದೆ ಅದನ್ನು ವಿಥ್​ಡ್ರಾ ಮಾಡಬಹುದು. ಇದು ಸ್ಪೆಷಲ್ ಮಲ್ಟಿ-ಆಪ್ಷನ್ ಡೆಪಾಸಿಟ್ ಖಾತೆ. ಇಂಥದ್ದೊಂದು ವ್ಯವಸ್ಥೆಯನ್ನು ಗ್ರಾಹಕರಿಗೆ ನೀಡುತ್ತಿರುವ ಪ್ರಮುಖ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ. ಫಿಕ್ಸೆಡ್​ ಡೆಪಾಸಿಟ್​ನಿಂದ 1000 ರೂಪಾಯಿ ಗುಣಕದಲ್ಲಿ ವಿಥ್​ಡ್ರಾ ಮಾಡಬಹುದು. SBI MOD ಎಂಬುದು ವಿಶೇಷ ಬಗೆಯ ಎಫ್​.ಡಿ. ಖಾತೆ. ಫಿಕ್ಸೆಡ್ ಡೆಪಾಸಿಟ್ಸ್​ನಂತೆ ಅಲ್ಲದೆ ಯಾವುದೇ ಸಂದರ್ಭದಲ್ಲಿ ಹಣ ತೆಗೆದುಕೊಳ್ಳುವುದಕ್ಕೆ ಅವಕಾಶ ನೀಡುತ್ತದೆ. ಯಾವುದೇ ಸಮಯದಲ್ಲಿ ಅಥವಾ ನಿರ್ದಿಷ್ಟ ಅವಧಿಯ ನಂತರ ಯಾವಾಗ ಬೇಕಾದರೂ MOD ಖಾತೆದಾರರು 1000 ರೂಪಾಯಿ ಗುಣಕದಲ್ಲಿ ಹಣ ತೆಗೆದುಕೊಳ್ಳಬಹುದು.

MODS ಖಾತೆಯಲ್ಲಿ ಬಾಕಿ ಮೊತ್ತವು ಬಡ್ಡಿ ಗಳಿಕೆಯನ್ನು ಮುಂದುವರಿಸುತ್ತದೆ. ಆರಂಭದಲ್ಲಿ ಒಟ್ಟು ಠೇವಣಿಗೆ ಯಾವ ದರದಲ್ಲಿ ಬಡ್ಡಿ ದೊರೆಯುತ್ತದೋ ಆ ನಂತರದಲ್ಲಿ ಅದೇ ದರದಲ್ಲೇ ಮುಂದುವರಿಯುತ್ತದೆ. ಈ ಖಾತೆಯು ಸೇವಿಂಗ್ಸ್ ಅಥವಾ ಕರೆಂಟ್ ಅಕೌಂಟ್​ಗೆ ಜೋಡಣೆ ಆಗಿರುತ್ತದೆ. ಉದಾಹರಣೆಗೆ 1 ಲಕ್ಷ ರೂಪಾಯಿ ಮೊತ್ತವನ್ನು 5 ವರ್ಷದ ಅವಧಿಗೆ ಎಫ್​.ಡಿ. ಮಾಡಲಾಗಿದೆ ಅಂದುಕೊಳ್ಳಿ. ದಿಢೀರನೇ ಎರಡನೇ ವರ್ಷದ ಕೊನೆಗೆ ಹಣ ಬೇಕಾದಲ್ಲಿ, 20 ಸಾವಿರ ರೂಪಾಯಿಯನ್ನು ಠೇವಣಿಯಿಂದ ಮುರಿಯಲು ಬಯಸಿದರೆ ಆ ಹಣ ತೆಗೆದುಕೊಳ್ಳಬಹುದು. ಅಷ್ಟು ಮೊತ್ತವನ್ನು ತೆಗೆದುಕೊಂಡ ಮೇಲೆ 80 ಸಾವಿರ ರೂಪಾಯಿಗೆ ಅದಕ್ಕೂ ಮುಂಚೆ ದೊರೆಯುತ್ತಿದ್ದ ಬಡ್ಡಿಯೇ ಮುಂದುವರಿಯುತ್ತದೆ. ಠೇವಣಿದಾರರು ಯಾವುದೇ ದಂಡ ತೆರಬೇಕಾದ ಅಗತ್ಯವಿಲ್ಲ.

ಹೂಡಿಕೆ ಮಿತಿ MODಗೆ ಕನಿಷ್ಠ ಟರ್ಮ್ ಡೆಪಾಸಿಟ್ ಮೊತ್ತ 10,000 ರೂಪಾಯಿ. ಅದಕ್ಕೆ ಮೇಲ್ಪಟ್ಟ ಮೊತ್ತವನ್ನು ಠೇವಣಿ ಮಾಡಬೇಕು ಅಂದರೆ, 1000 ರೂಪಾಯಿ ಗುಣಕದಲ್ಲಿ ಇರಬೇಕು. ಈ ಟರ್ಮ್ ಡೆಪಾಸಿಟ್​ಗೆ ಯಾವುದೇ ಗರಿಷ್ಠ ಮಿತಿ ಇಲ್ಲ. ಎಸ್​ಬಿಐನ ಮಲ್ಟಿ ಆಪ್ಷನ್ ಡೆಪಾಸಿಟ್ ಅಕೌಂಟ್​ಗೆ ಕನಿಷ್ಠ ಅವಧಿ 1 ವರ್ಷ ಮತ್ತು ಗರಿಷ್ಠ ಅವಧಿ 5 ವರ್ಷ. ಬಡ್ಡಿಯ ಆದಾಯದ ಮೇಲೆ ಟಿಡಿಎಸ್ (ಟ್ಯಾಕ್ಸ್ ಡಿಡಕ್ಷನ್ ಅಟ್ ಸೋರ್ಸ್) ಅನ್ವಯ ಆಗುತ್ತದೆ.

ಬಡ್ಡಿ ದರ ಎಸ್​ಬಿಐ MOD ಖಾತೆಗೂ ಆಯಾ ಕಾಲದಲ್ಲಿನ ಟರ್ಮ್​ ಡೆಪಾಸಿಟ್​ನ ನಿರ್ದಿಷ್ಟ ಅವಧಿಗೆ ಇರುವ ಬಡ್ಡಿ ದರವೇ ಅನ್ವಯ ಆಗುತ್ತದೆ. ಆ ಖಾತೆಯನ್ನು ಮುರಿಸಿದಾಗ ಬಡ್ಡಿಯನ್ನು ದಂಡರಹಿತವಾಗಿ ಅನ್ವಯ ಆಗುವ ದರಕ್ಕೆ ಆ ಅವಧಿ ಮೊತ್ತವನ್ನು ನೀಡಲಾಗುತ್ತದೆ. ಬಾಕಿ ಮೊತ್ತಕ್ಕೆ ಮೂಲ ಬಡ್ಡಿ ದರವು ದೊರೆಯುತ್ತದೆ. ಇದನ್ನು ಹೊರತುಪಡಿಸಿ, ಒಟ್ಟು ಹಣದಲ್ಲಿ ಶೇ 60ರ ತನಕ ಸಾಲ ಸೌಲಭ್ಯ ಸಿಗುತ್ತದೆ.

ಈ ಅಂಶಗಳು ಗಮನದಲ್ಲಿರಲಿ ಸಂಪೂರ್ಣ ಅವಧಿಯಲ್ಲಿ ಒಂದು ಸಲಕ್ಕಿಂತ ಹೆಚ್ಚು ಬಾರಿ ವಿಥ್​ಡ್ರಾಗೆ ಅವಕಾಶ ಇಲ್ಲ. ಒಮ್ಮೆ ಮಾತ್ರ ವಿಥ್​ಡ್ರಾ ಮಾಡಬಹುದು. ನಾಮಿನೇಷನ್ ವ್ಯವಸ್ಥೆಯ ಹೊರತಾಗಿ ಆಟೋ ಸ್ವೀಪ್ ವ್ಯವಸ್ಥೆ ಇದೆ. ಇನ್ನು MOD ಖಾತೆಯನ್ನು ಒಂದು ಶಾಖೆಯಿಂದ ಮತ್ತೊಂದಕ್ಕೆ ವರ್ಗಾಯಿಸಲು ಅವಕಾಶ ಇದೆ. MOD ಖಾತೆಯನ್ನು ಮೊಬೈಲ್ ಮತ್ತು ಇಂಟರ್​ನೆಟ್​ ಬ್ಯಾಂಕಿಂಗ್ ಮೂಲಕವೂ ತೆರೆಯಬಹುದು.

ಇದನ್ನೂ ಓದಿ: SBI savings account: ಈ ಉಳಿತಾಯ ಖಾತೆದಾರರಿಗೆ ಎಸ್​ಬಿಐನಿಂದ ರೂ. 2 ಲಕ್ಷದ ಉಚಿತ ಇನ್ಷೂರೆನ್ಸ್

(State Bank Of India Multi Option Deposits Can Withdraw Term Deposits Without Penalty Know How)

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ