Mobile recharge hike: ಏರ್ಟೆಲ್, ವೊಡಾಫೋನ್ ಐಡಿಯಾ ಪ್ರೀಪೇಯ್ಡ್ ದರಗಳ ಏರಿಕೆಗೆ ಸಿದ್ಧರಾಗಿ!
ಆಗಸ್ಟ್ ತಿಂಗಳಿನಿಂದ ಅನ್ವಯ ಆಗುವಂತೆ ಮೊಬೈಲ್ ಪ್ರೀಪೇಯ್ಡ್ ರೀಚಾರ್ಜ್ ಹೆಚ್ಚಾಗಲಿವೆ. ಹೇಗೆ, ಏನು, ಎತ್ತ ಎಂಬಿತ್ಯಾದಿ ವಿವರಗಳು ಈ ಲೇಖನದಲ್ಲಿ ಇವೆ.
ನಿಮ್ಮ ಮೊಬೈಲ್ ಫೋನ್ ರೀಚಾರ್ಜ್ಗಳ ಮೇಲೆ ಹೆಚ್ಚಿನ ದರವನ್ನು ಪಾವತಿಸಲು ಮುಂದಾಗಿ. ಏಕೆಂದರೆ ಮುಂದಿನ ತಿಂಗಳಿಂದ ಎರಡು ಪ್ರಮುಖ ಟೆಲಿಕಾಂ ಆಪರೇಟರ್ಗಳಾದ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾದಿಂದ ರೀಚಾರ್ಜ್ ಪ್ಲಾನ್ ದರಗಳ ಏರಿಕೆಗೆ ಎಲ್ಲ ಸಿದ್ಧತೆ ನಡೆದಿದೆ. ಏರ್ಟೆಲ್ನಿಂದ ಈಗಾಗಲೇ ಆರಂಭಿಕ ಹಂತದ ಪ್ಲಾನ್ ಆದ 49 ರೂಪಾಯಿಯದ್ದನ್ನು ಕೊನೆಗೊಳಿಸಲಾಗಿದೆ. ಈಗ ಪ್ಲಾನ್ ದರ ಶೇ 60ರಷ್ಟು ಹೆಚ್ಚಾಗಿ, 79 ರೂಪಾಯಿ ಮುಟ್ಟಿದೆ. ಕಾರ್ಪೊರೇಟ್ ಗ್ರಾಹಕರು ಈ ಬೆಲೆ ಏರಿಕೆ ಬಿಸಿ ತಟ್ಟಿದೆ. ಕನಿಷ್ಠ ಪ್ರಮಾಣ ಕಾರ್ಪೊರೇಟ್ ಪ್ಲಾನ್ನಲ್ಲಿ ಶೇ 30ರಷ್ಟು ಏರಿಕೆ ಮಾಡಲಾಗಿದೆ. ಇನ್ನು ತಜ್ಞರ ಅಭಿಪ್ರಾಯದಂತೆ, ವೊಡಾಫೋನ್ ಐಡಿಯಾ ಸಹ ಬೇಸಿಕ್ ಪ್ರೀಪೇಯ್ಡ್ ಪ್ಲಾನ್ ಹೆಚ್ಚಿಸಲು ಯೋಜನೆ ಹಾಕಿಕೊಂಡಿದೆ.
ನಗದು ಬಿಕ್ಕಟ್ಟಿನಲ್ಲಿ ಇರುವ ಟೆಲಿಕಾಂ ಕಂಪೆನಿ ವೊಡಾಫೋನ್ ಐಡಿಯಾದಿಂದ ಬೇಸ್ ಪ್ರೀಪೇಯ್ಡ್ ದರವನ್ನು ಏರಿಕೆ ಮಾಡುವುದಕ್ಕೆ ಯೋಜನೆ ಮಾಡಿದೆ. ಕೆಲವು ವೃತ್ತಗಳಲ್ಲಿ ವೊಡಾಫೋನ್ ಐಡಿಯಾ ಬೇಸ್ ಹಂತದ ರೀಚಾರ್ಜ್ ದರದಲ್ಲಿ ಬದಲಾವಣೆ ಮಾಡಿದೆ. ಮಹಾರಾಷ್ಟ್ರ ಹಾಗೂ ಗುಜರಾತ್ನಲ್ಲಿ Viನಿಂದ 49 ರೂಪಾಯಿಯ ಪ್ಲಾನ್ ಅನ್ನು 14 ದಿನಕ್ಕೆ ಇಳಿಸಲಾಗಿದೆ. ಈ ಹಿಂದೆ ಅದು 28 ದಿನ ಇತ್ತು. Vi ಗ್ರಾಹಕರು ಈಗ 28 ದಿನದ ಪ್ಲಾನ್ಗೆ ಈ ಮೇಲ್ಕಂಡ ಪ್ರದೇಶಗಳಲ್ಲಿ 79 ರೂಪಾಯಿ ಪಾವತಿಸಬೇಕು. ಸದ್ಯದಲ್ಲಿ ಪ್ರೀಪೇಯ್ಡ್ ಪ್ಲಾನ್ಗಳ ದರವನ್ನು ದೇಶದಾದ್ಯಂತ ಬದಲಾಯಿಸಲಾಗುತ್ತದೆ. ಏರ್ಟೆಲ್ನಿಂದ ಬದಲಾವಣೆ ಮಾಡಿದ ಮೇಲೆ, ಎಂಟರ್ಪ್ರೈಸ್ ಗ್ರಾಹಕರ ಬಿಜಿನೆಸ್ ಪ್ಲಸ್ ಪೋಸ್ಟ್ಪೇಯ್ಡ್ ಪ್ಲಾನ್ಗಳ ಮೇಲೆ ಡೇಟಾ ಅನುಕೂಲಗಳು ಕಡಿಮೆ ಮಾಡಲಾಗಿದೆ.
ನಗದು ಹರಿವನ್ನು ಹೆಚ್ಚು ಮಾಡಿಕೊಳ್ಳಲು ಟೆಲಿಕಾಂ ಕಂಪೆನಿಗಳು ನಾನಾ ದಾರಿಗಳನ್ನು ಎದುರು ನೋಡುತ್ತಿದೆ. ಮುಂಬರುವ ಅಡ್ಜಸ್ಟಡ್ ಗ್ರಾಸ್ ರೆವೆನ್ಯೂ (ಎಜಿಆರ್) ಬಾಕಿಯನ್ನು ಪಾವತಿಸಬೇಕಿದೆ. ವೊಡಾಫೋನ್ ಐಡಿಯಾ ಹಾಗೂ ಏರ್ಟೆಲ್ ಎಜಿಆರ್ನ ಗ್ರಾಸ್ ಆದಾಯ ಬಾಕಿ ಕ್ರಮವಾಗಿ 9000 ಕೋಟಿ ರೂಪಾಯಿ ಹಾಗೂ 4,100 ಕೋಟಿ ರೂಪಾಯಿ ಮೊತ್ತವನ್ನು ಮಾರ್ಚ್ 22ನೇ ತಾರೀಕಿನೊಳಗೆ ಪಾವತಿಸಬೇಕು. ಈ ದರ ಹೆಚ್ಚಳದಿಂದ ಟೆಲಿಕಾಂ ಕಂಪೆನಿಗಳ ಆ್ಯವರೇಜ್ ರೆವೆನ್ಯೂ ಪರ್ ಯೂಸರ್ (ARPU) ಚೇತರಿಸಿಕೊಳ್ಳುವುದಕ್ಕೆ ಈ ಹೆಚ್ಚಳದಿಂದ ಅನುಕೂಲ ಆಗುತ್ತದೆ.
ಇದನ್ನೂ ಓದಿ: Vodafone Idea: ಅನಿಯಮಿತ ಕರೆ ಮತ್ತು 100 GB ಡೇಟಾ: ಅತ್ಯುತ್ತಮ ರಿಚಾರ್ಜ್ ಪ್ಲ್ಯಾನ್ ಪರಿಚಯಿಸಿದ VI
ಇದನ್ನೂ ಓದಿ: Jio-Airtel-Vi ನಡುವೆ ಭರ್ಜರಿ ಪೈಪೋಟಿ: 28 ದಿನಗಳ ವ್ಯಾಲಿಡಿಟಿ ಪ್ಲಾನ್ನಲ್ಲಿ ಬಂಪರ್ ಬೆನಿಫಿಟ್
(Your Mobile Prepaid Charge Become Costly From August Know Why And How)