ಹಣಕಾಸು ಅಕ್ರಮ ಆರೋಪ: ಭಾರತ್‌ಪೇ ಸಂಸ್ಥೆಯ ಸಹ ಸಂಸ್ಥಾಪಕ ಅಶ್ನೀರ್ ಗ್ರೋವರ್​ ಪತ್ನಿ ಮಾಧುರಿ ಜೈನ್ ವಜಾ

Madhuri Jain ಮಾಧುರಿ ಜೈನ್ ಗ್ರೋವರ್ ಅವರು ತಮ್ಮ ವೈಯಕ್ತಿಕ ಸೌಂದರ್ಯ ಚಿಕಿತ್ಸೆಗಳಿಗೆ, ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಖರೀದಿಸಲು ಮತ್ತು ಯುಎಸ್ ಮತ್ತು ದುಬೈಗೆ ಕುಟುಂಬ ಪ್ರವಾಸಗಳಿಗೆ ಕಂಪನಿಗೆ ಬಿಲ್ ಮಾಡಿದ್ದಾರೆ ಎಂಬ ಆರೋಪವಿದೆ.

ಹಣಕಾಸು ಅಕ್ರಮ ಆರೋಪ: ಭಾರತ್‌ಪೇ ಸಂಸ್ಥೆಯ ಸಹ ಸಂಸ್ಥಾಪಕ ಅಶ್ನೀರ್ ಗ್ರೋವರ್​ ಪತ್ನಿ ಮಾಧುರಿ ಜೈನ್ ವಜಾ
ಮಾಧುರಿ ಜೈನ್ ಗ್ರೋವರ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Feb 23, 2022 | 7:59 PM

ಭಾರತ್‌ಪೇ (BharatPe) ಫಿನ್‌ಟೆಕ್ ಸಂಸ್ಥೆಯ ಸಹ-ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಶ್ನೀರ್ ಗ್ರೋವರ್ (Ashneer Grover) ಅವರ ಪತ್ನಿ ಮಾಧುರಿ ಜೈನ್ ಗ್ರೋವರ್ (Madhuri Jain Grover) ಅವರನ್ನು ಹಣಕಾಸು ಅಕ್ರಮಗಳ ಆರೋಪದ ಮೇಲೆ ವಜಾಗೊಳಿಸಿದೆ ಮತ್ತು ಅವರ ಬಳಿ ಇದ್ದ ಇಎಸ್ಒಪಿ(Employee stock ownership plan) ಗಳನ್ನು ರದ್ದುಗೊಳಿಸಿದೆ. ಮಾಧುರಿ ಅವರು ವೈಯಕ್ತಿಕ ಸೌಂದರ್ಯ ಚಿಕಿತ್ಸೆಗಳು, ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸಲು ಮತ್ತು ಯುಎಸ್ ಮತ್ತು ದುಬೈಗೆ ಕುಟುಂಬ ಪ್ರವಾಸಗಳಿಗೆ ಕಂಪನಿಯ ಹಣವನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ವಿಷಯದ ಬಗ್ಗೆ ತಿಳಿದಿರುವ ಮೂಲಗಳು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಇದಲ್ಲದೆ, ಅವರು ಕಂಪನಿಯ ಖಾತೆಗಳಿಂದ ತನ್ನ ವೈಯಕ್ತಿಕ ಸಿಬ್ಬಂದಿಗೆ ಪಾವತಿಸಿದ್ದಾರೆ. ಅದೇ ವೇಳೆ ತಿಳಿದಿರುವ ಜನರಿಂದ ನಕಲಿ ಇನ್ವಾಯ್ಸ್ಗಳನ್ನು ತಯಾರಿಸಿದ್ದಾರೆ ಎಂಬ ಆರೋಪವೂ ಇದೆ. ಈ ಬಗ್ಗೆ ಪ್ರತಿಕ್ರಿಯೆ ಕೋರಿ ಪತ್ರಿಕೆ ಕಳುಹಿಸಿದ ಇಮೇಲ್‌ಗೆ ಅವರು ಉತ್ತರಿಸಿಲ್ಲ. ಆದರೆ ಅವರನ್ನು ವಜಾ ಮಾಡಲಾಗಿದೆ ಎಂದು ಕಂಪನಿಯ ವಕ್ತಾರರು ಹೇಳಿದ್ದಾರೆ.  “ನಿಮ್ಮ ಪ್ರಶ್ನೆಯ ಪ್ರಕಾರ, ಮಾಧುರಿ ಜೈನ್ ಗ್ರೋವರ್ ಅವರ ಉದ್ಯೋಗ ಒಪ್ಪಂದದ ನಿಯಮಗಳಿಗೆ ಅನುಸಾರವಾಗಿ ಅವರ ಸೇವೆಗಳನ್ನು ಕೊನೆಗೊಳಿಸಲಾಗಿದೆ ಎಂದು ನಾವು ಖಚಿತಪಡಿಸಬಹುದು” ಎಂದು ವಕ್ತಾರರು ಹೇಳಿರುವುದಾಗಿ ಇಂಡಿಯನ್ ಎಕ್ಸ್ ಪ್ರೆಸ್ ವರದಿಯಲ್ಲಿ ಹೇಳಿದೆ. ವಕ್ತಾರರು ವಜಾಗೊಳಿಸಿದ ಕಾರಣಗಳನ್ನು ನೀಡಿಲ್ಲ.

ಆದಾಗ್ಯೂ, ಗ್ರೋವರ್‌ಗಳ ನಡವಳಿಕೆಯನ್ನು ಪರಿಶೀಲಿಸಲು ಭಾರತ್‌ಪೇ ಮಂಡಳಿಯು ನಿಯೋಜಿಸಿದ ಬಾಹ್ಯ ಲೆಕ್ಕಪರಿಶೋಧನೆಯ ನಂತರ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಮಾಧುರಿಯವರ ಬಳಿ ಇರುವ ಸ್ಟಾಕ್ ಆಯ್ಕೆಗಳನ್ನು ಸಹ ರದ್ದುಗೊಳಿಸಲಾಗಿದೆ, ಆಪಾದಿತ ಹಣಕಾಸಿನ ಅಕ್ರಮಗಳನ್ನು ಟರ್ಮಿನೇಷನ್ ಪತ್ರದಲ್ಲಿ ವಿವರಿಸಲಾಗಿದೆ ಎಂದು ಅವರು ಹೇಳಿದರು.

ಕೋಟಕ್ ಮಹೀಂದ್ರಾ ಬ್ಯಾಂಕ್ ಸಿಬ್ಬಂದಿ ವಿರುದ್ಧ ನಿಂದನೀಯ ಪದಗಳನ್ನು ಬಳಸಿದ ಆರೋಪ ಮತ್ತು ಮೋಸದ ಅಭ್ಯಾಸಗಳ ಹಿನ್ನೆಲೆಯಲ್ಲಿ ಆಕೆಯ ಪತಿಯನ್ನು ಮೂರು ತಿಂಗಳ ರಜೆಯ ಮೇಲೆ ಕಳುಹಿಸಲಾಗಿದೆ. ಅವರು ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ.

ಭಾರತ್‌ಪೇ ಸಹ-ಸಂಸ್ಥಾಪಕರ ಪತ್ನಿ ಮಾಧುರಿ ಜೈನ್ ಗ್ರೋವರ್ ವಜಾ; ಕಾರಣಗಳಿವು

  1. ಮಾಧುರಿ ಜೈನ್ ಗ್ರೋವರ್ ಅವರು ತಮ್ಮ ವೈಯಕ್ತಿಕ ಸೌಂದರ್ಯ ಚಿಕಿತ್ಸೆಗಳಿಗೆ, ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಖರೀದಿಸಲು ಮತ್ತು ಯುಎಸ್ ಮತ್ತು ದುಬೈಗೆ ಕುಟುಂಬ ಪ್ರವಾಸಗಳಿಗೆ ಕಂಪನಿಗೆ ಬಿಲ್ ಮಾಡಿದ್ದಾರೆ ಎಂಬ ಆರೋಪವಿದೆ.
  2. ಕಂಪನಿಯ ಖಾತೆಗಳಿಂದ ತನ್ನ ವೈಯಕ್ತಿಕ ಸಿಬ್ಬಂದಿಗೆ ಪಾವತಿಸಿದ ಮತ್ತು ನಕಲಿ ರಸೀದಿಗಳನ್ನು ತಯಾರಿಸಿದ ಆರೋಪವೂ ಆಕೆಯ ಮೇಲಿದೆ. ಇನ್‌ವಾಯ್ಸ್‌ಗಳನ್ನು ಸಂಗ್ರಹಿಸಲು ಬಳಸಲಾದ ಗೌಪ್ಯ ಮಾಹಿತಿಯನ್ನು ಈಕೆ ತನ್ನ ಸಹೋದರನೊಂದಿಗೆ ಹಂಚಿಕೊಂಡಿದ್ದಾರೆ ಎಂದು ವರದಿಗಳು ಹೇಳುತ್ತವೆ.
  3. ಕಳೆದ ತಿಂಗಳು, ಕೋಟಕ್ ಮಹೀಂದ್ರಾ ಬ್ಯಾಂಕ್ ಉದ್ಯೋಗಿಯೊಂದಿಗೆ ನಿಂದನೀಯ ಪದಗಳನ್ನು ಬಳಸಿದ ವೈರಲ್ ವಿಡಿಯೊದ ಕುರಿತು ಭಾರೀ ವಿವಾದದ ನಂತರ ಆಕೆಯ ಪತಿ ಮೂರು ತಿಂಗಳ ರಜೆಯನ್ನು ಘೋಷಿಸಿದ ದಿನಗಳ ನಂತರ ಕಳೆದ ತಿಂಗಳು ಜೈನ್ ಅವರನ್ನು ರಜೆಯ ಮೇಲೆ ಕಳುಹಿಸಲಾಯಿತು.
  4. ಮಾಧುರಿ ಜೈನ್ ಗ್ರೋವರ್ ಅವರು 2018 ರಲ್ಲಿ ಶಾಶ್ವತ್ ನಕ್ರಾಣಿ ಜೊತೆಗೆ ಅವರ ಪತಿ ಅಶ್ನೀರ್ ಗ್ರೋವರ್ ಸ್ಥಾಪಿಸಿದ ಭಾರತ್‌ಪೇಯ ನಿಯಂತ್ರಣಗಳ ಮುಖ್ಯಸ್ಥರಾಗಿದ್ದರು.
  5. ಬುಧವಾರ ಬೆಳಗ್ಗೆ, ಮಾಧುರಿ ಗ್ರೋವರ್ ಅವರು ಕಂಪನಿಯ ಉನ್ನತ ಅಧಿಕಾರಿಗಳ ವಿರುದ್ಧ ಸರಣಿ ಟ್ವೀಟ್‌ಗಳ ಪೋಸ್ಟ್ ಮಾಡಿದರು.ಅವರು ಕಚೇರಿಯಲ್ಲಿ ” drunken orgies ” ಎಂದು ಹೆಸರಿಸಿರುವ ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:SBI Multicap Fund: ಮತ್ತೊಂದು ಎನ್​ಎಫ್​ಒ ಘೋಷಿಸಿದ ಎಸ್​ಬಿಐ: ಇನ್ವೆಸ್ಟ್ ಮಾಡೋ ಆಸೆ ಇದ್ರೆ ಈ ಮಾಹಿತಿ ಗೊತ್ತಿರಲಿ

Published On - 7:57 pm, Wed, 23 February 22