ರಾಜಸ್ಥಾನದ ಬಜೆಟ್ ಕಪ್ಪು ಬಣ್ಣದ ವಧುವಿಗೆ ಮೇಕಪ್ ಮಾಡಿದಂತಿದೆ; ವಿವಾದಕ್ಕೀಡಾಯ್ತು ಬಿಜೆಪಿ ನಾಯಕನ ಹೇಳಿಕೆ

ರಾಜಸ್ಥಾನದ ಬಜೆಟ್ ಕಪ್ಪು ಬಣ್ಣದ ವಧುವಿಗೆ ಮೇಕಪ್ ಮಾಡಿದಂತಿದೆ; ವಿವಾದಕ್ಕೀಡಾಯ್ತು ಬಿಜೆಪಿ ನಾಯಕನ ಹೇಳಿಕೆ
ಸತೀಶ್ ಪುನಿಯಾ

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮಂಡಿಸಿದ ಬಜೆಟ್ ಕಪ್ಪನೆಯ ವಧುವಿಗೆ ಮೇಕಪ್ ಮಾಡಲು ಬ್ಯೂಟಿ ಪಾರ್ಲರ್‌ಗೆ ಕರೆದೊಯ್ಯುವಂತಿದೆ. ಅದರಿಂದಲೇ ಅವಳು ಸುಂದರವಾಗಿ ಕಾಣುತ್ತಾಳೆ ಎಂದು ಬಿಜೆಪಿ ಶಾಸಕ ಸತೀಶ್ ಪುನಿಯಾ ಟೀಕಿಸಿದ್ದಾರೆ.

TV9kannada Web Team

| Edited By: Sushma Chakre

Feb 23, 2022 | 7:02 PM

ಜೈಪುರ: ರಾಜಸ್ಥಾನದ ಬಜೆಟ್ ಕಪ್ಪು ಬಣ್ಣದ ವಧು-ವರರನ್ನು ಸುಂದರವಾಗಿ ಕಾಣುವಂತೆ ಬ್ಯೂಟಿ ಪಾರ್ಲರ್‌ಗೆ ಕರೆದುಕೊಂಡು ಹೋಗಿ ಬಿಳಿ ಮಾಡಿದಂತಿದೆ ಎಂದು ರಾಜಸ್ಥಾನದ ಬಿಜೆಪಿ ಅಧ್ಯಕ್ಷ ಮತ್ತು ಶಾಸಕ ಸತೀಶ್ ಪುನಿಯಾ (Satish Punia) ಇಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಜೆಟ್ ಅನ್ನು ಟೀಕಿಸಿರುವ ವಿರೋಧ ಪಕ್ಷ ಬಿಜೆಪಿ, ರಾಜಸ್ಥಾನ ಸರ್ಕಾರವು ಹಲವಾರು ಘೋಷಣೆಗಳನ್ನು ಮಾಡಿದ್ದರೂ ಅದನ್ನು ಪೂರೈಸಲು ಹಣವಿಲ್ಲ ಎಂದು ಆರೋಪಿಸಿದೆ. “ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಮಂಡಿಸಿದ ಬಜೆಟ್ ಕಪ್ಪನೆಯ ವಧುವಿಗೆ ಮೇಕಪ್ ಮಾಡಲು ಬ್ಯೂಟಿ ಪಾರ್ಲರ್‌ಗೆ ಕರೆದೊಯ್ಯುವಂತಿದೆ. ಅದರಿಂದಲೇ ಅವಳು ಸುಂದರವಾಗಿ ಕಾಣುತ್ತಾಳೆಯೇ ವಿನಃ ಅದು ನೈಜ ಸೌಂದರ್ಯವಲ್ಲ” ಎಂದು ಬಿಜೆಪಿ ಶಾಸಕ ಸತೀಶ್ ಪುನಿಯಾ ಟೀಕಿಸಿದ್ದಾರೆ.

ರಾಜಸ್ಥಾನ ಸರ್ಕಾರ ಒಂದರ ಹಿಂದೆ ಒಂದರಂತೆ ಭರವಸೆಗಳನ್ನು ನೀಡುತ್ತಿದೆ. ಆದರೆ, ಆ ಭರವಸೆಗಳನ್ನು ಈಡೇರಿಸಲು ಹಣ ಎಲ್ಲಿದೆ ಎಂದು ತಿಳಿಯಲು ನಾನು ಬಯಸುತ್ತೇನೆ. ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ನನಗೆ ಖಚಿತವಾಗಿ ಗೊತ್ತಿದೆ ಎಂದು ವಿರೋಧ ಪಕ್ಷದ ನಾಯಕ ಗುಲಾಬ್‌ಚಂದ್ ಕಟಾರಿಯಾ ಹೇಳಿದ್ದರು.

ರಾಜಕಾರಣಿಗಳು ಸದಾ ಒಂದಿಲ್ಲೊಂದು ಒಂದು ಕಾರಣಕ್ಕೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ಕಳೆದ ನವೆಂಬರ್‌ನಲ್ಲಿ ರಾಜಸ್ಥಾನದ ಕಾಂಗ್ರೆಸ್ ಶಾಸಕ ರಾಜೇಂದ್ರ ಸಿಂಗ್ ಗುಧಾ ಅವರು ತಮ್ಮ ಕ್ಷೇತ್ರದ ರಸ್ತೆಗಳು “ಕತ್ರೀನಾ ಕೈಫ್‌ನ ಕೆನ್ನೆಗಳಂತಿರಬೇಕು” ಎಂದು ಹೇಳುವ ಮೂಲಕ ಪೇಚಿಗೆ ಸಿಲುಕಿದ್ದರು. ಈ ಕಾಮೆಂಟ್ ಟ್ವಿಟ್ಟರ್‌ನಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.

2005ರಲ್ಲಿ ಲಾಲು ಪ್ರಸಾದ್ ಯಾದವ್ ಅವರು ಬಿಹಾರದ ರಸ್ತೆಗಳು “ಹೇಮಾ ಮಾಲಿನಿ ಅವರ ಕೆನ್ನೆಗಳಂತೆ” ಸುಗಮವಾಗಿರುತ್ತವೆ ಎಂದು ಭರವಸೆ ನೀಡಿದ್ದರು. 2013ರಲ್ಲಿ ಉತ್ತರ ಪ್ರದೇಶ ಸರ್ಕಾರದ ಸಚಿವರೊಬ್ಬರು ರಾಜ್ಯದ ಪ್ರತಾಪಗಢ ಜಿಲ್ಲೆಯಲ್ಲಿ “ನಟಿಯರಾದ ಹೇಮಾ ಮಾಲಿನಿ ಮತ್ತು ಮಾಧುರಿ ದೀಕ್ಷಿತ್ ಅವರ ಕೆನ್ನೆಗಳಂತೆ” ರಸ್ತೆಗಳನ್ನು ನಿರ್ಮಿಸುವ ಭರವಸೆ ನೀಡುವ ಮೂಲಕ ಕೋಲಾಹಲಕ್ಕೆ ಕಾರಣರಾಗಿದ್ದರು. ಅಂತಿಮವಾಗಿ ಅವರ ಹೇಳಿಕೆಗಾಗಿ ಅವರನ್ನು ಪಕ್ಷದಿಂದ ವಜಾಗೊಳಿಸಲಾಗಿತ್ತು.

ಅದೇ ವರ್ಷ, ಬಿಜೆಪಿ ನಾಯಕ ಮತ್ತು ಆಗಿನ ಛತ್ತೀಸ್‌ಗಢ ಸಚಿವ ಬ್ರಿಜ್‌ಮೋಹನ್ ಅಗರ್‌ವಾಲ್ ರಾಜ್ಯದ ರಸ್ತೆಗಳನ್ನು ನಟಿ ಹೇಮಾ ಮಾಲಿನಿಗೆ ಹೋಲಿಸಿದ್ದರು. ಅವರ ಬೆಂಬಲಿಗರು ಹೇಮಾ ಮಾಲಿನಿಯ ಚಿತ್ರಗಳು ಮತ್ತು ರಾಜ್ಯದ ರಸ್ತೆಗಳ ಪೂರ್ಣ ಪುಟದ ಜಾಹೀರಾತುಗಳನ್ನು ನೀಡಿದ್ದರು. “ಸ್ವಪ್ನ್ ಸುಂದರಿ ಸಮಾನ್ ಪ್ರದೇಶ್ ಕಿ ಚಮ್ಚಮತಿ ಸದ್ಕೇನ್ (ಕನಸಿನ ಹುಡುಗಿಯಂತೆ ಹೊಳೆಯುತ್ತಿರುವ ರಾಜ್ಯದ ಸುಂದರ ರಸ್ತೆಗಳು)” ಎಂದು ಜಾಹೀರಾತು ನೀಡಿದ್ದರು.

ಇದನ್ನೂ ಓದಿ: School Bus Accident: ರಾಜಸ್ಥಾನದಲ್ಲಿ ಶಾಲಾ ಬಸ್ ಅಪಘಾತ; ಇಬ್ಬರು ಮಕ್ಕಳು ಸಾವು, 40 ಜನರಿಗೆ ಗಾಯ

ಹರ್ಷನ ಕೊಲೆ ವಿರುದ್ಧ ಹಿಂದೂ-ಪರ ಸಂಘಟನೆ ಕಾರ್ಯಕರ್ತರೊಂದಿಗೆ ಪ್ರತಿಭಟನೆಗಿಳಿದ ಬಿಜೆಪಿ ಶಾಸಕನಿಗೆ ಮುಖಭಂಗ

Follow us on

Related Stories

Most Read Stories

Click on your DTH Provider to Add TV9 Kannada