School Bus Accident: ರಾಜಸ್ಥಾನದಲ್ಲಿ ಶಾಲಾ ಬಸ್ ಅಪಘಾತ; ಇಬ್ಬರು ಮಕ್ಕಳು ಸಾವು, 40 ಜನರಿಗೆ ಗಾಯ

TV9 Digital Desk

| Edited By: Sushma Chakre

Updated on: Feb 17, 2022 | 4:49 PM

ಜೈಸಲ್ಮೇರ್​​ನಲ್ಲಿ ಇಂದು ಮುಂಜಾನೆ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಶಾಲಾ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. 40 ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ಅವರಲ್ಲಿ ಅನೇಕ ಮಕ್ಕಳ ಸ್ಥಿತಿ ಗಂಭೀರವಾಗಿದೆ.

School Bus Accident: ರಾಜಸ್ಥಾನದಲ್ಲಿ ಶಾಲಾ ಬಸ್ ಅಪಘಾತ; ಇಬ್ಬರು ಮಕ್ಕಳು ಸಾವು, 40 ಜನರಿಗೆ ಗಾಯ
ಅಪಘಾತ

ಜೈಸಲ್ಮೇರ್: ರಾಜಸ್ಥಾನದ ಜೈಸಲ್ಮೇರ್ (Jaisalmer) ಜಿಲ್ಲೆಯಲ್ಲಿ ಇಂದು ಶಾಲಾ ಬಸ್ ಅಪಘಾತಕ್ಕೀಡಾಗಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ ಮತ್ತು 40 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಫಾಲ್ಸುಂಡಾ ಪ್ರದೇಶದಲ್ಲಿ ಈ ಭೀಕರ ಅಪಘಾತ (Accident) ನಡೆದಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಬೆಳಗ್ಗೆ ಮಕ್ಕಳನ್ನು ಶಾಲೆಗೆ ಕರೆದೊಯ್ಯುವಾಗ ಶೆಯೋ ರಸ್ತೆಯಲ್ಲಿ ಶಾಲಾ ವಾಹನ (School Bus) ಅಪಘಾತಕ್ಕೀಡಾಗಿದೆ.

‘ಇಂದು ಮುಂಜಾನೆ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಶಾಲಾ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. 40 ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ಅವರಲ್ಲಿ ಅನೇಕ ಮಕ್ಕಳ ಸ್ಥಿತಿ ಗಂಭೀರವಾಗಿದೆ. ಅವರೆಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಪಘಾತದಲ್ಲಿ ಮೃತಪಟ್ಟ ಇಬ್ಬರು ಮಕ್ಕಳನ್ನು ಹಸಮ್ ಖಾನ್ ಮತ್ತು ಕಸಮ್ ಖಾನ್ ಎಂದು ಗುರುತಿಸಲಾಗಿದೆ. ಇಂದು ಆಸ್ಪತ್ರೆಗೆ ಆದ ವಿದ್ಯಾರ್ಥಿಗಳಲ್ಲಿ ಕೆಲವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಗಾಯಗೊಂಡಿದ್ದ 40 ವಿದ್ಯಾರ್ಥಿಗಳಲ್ಲಿ 20 ಮಕ್ಕಳು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

(ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಿ)

ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ 20 ಅಡಿ ಆಳಕ್ಕೆ ಬಿದ್ದ ಕಾರು; ಅಪಘಾತದಲ್ಲಿ ವ್ಯಕ್ತಿ ದವಡೆ ಹೊಕ್ಕಿದ ಕಟ್ಟಿಗೆಯ ತುಂಡು

Shocking News: ಹಾವುಗಳನ್ನೇ ಹಸಿಯಾಗಿ ತಿಂಡಿ ರೀತಿ ತಿನ್ನುತ್ತಾನೆ ಆಂಧ್ರದ ಈ ವ್ಯಕ್ತಿ; ಏನ್ ಕಾಲ ಬಂತಪ್ಪಾ!

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada