ಚಾಲಕನ ನಿಯಂತ್ರಣ ತಪ್ಪಿ 20 ಅಡಿ ಆಳಕ್ಕೆ ಬಿದ್ದ ಕಾರು; ಅಪಘಾತದಲ್ಲಿ ವ್ಯಕ್ತಿ ದವಡೆ ಹೊಕ್ಕಿದ ಕಟ್ಟಿಗೆಯ ತುಂಡು

ತೆಂಗಿನತೋಟದಲ್ಲಿ ಕಾರು ಬಿದ್ದ ರಭಸಕ್ಕೆ ಕಟ್ಟಿಗೆಯ ತುಂಡು ದವಡಗೆ ಸಿಲುಕಿದೆ. ಕುಣಿಗಲ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರೂ ಕಟ್ಟಿಗೆ ತೆಗೆಯಲಾಗಿಲ್ಲ. ಹೀಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಚಾಲಕನ ನಿಯಂತ್ರಣ ತಪ್ಪಿ 20 ಅಡಿ ಆಳಕ್ಕೆ ಬಿದ್ದ ಕಾರು; ಅಪಘಾತದಲ್ಲಿ ವ್ಯಕ್ತಿ ದವಡೆ ಹೊಕ್ಕಿದ ಕಟ್ಟಿಗೆಯ ತುಂಡು
ವ್ಯಕ್ತಿ ದವಡೆ ಹೊಕ್ಕಿದ ಕಟ್ಟಿಗೆಯ ತುಂಡು
TV9kannada Web Team

| Edited By: preethi shettigar

Feb 11, 2022 | 9:36 AM

ತುಮಕೂರು: ಚಾಲಕನ ನಿಯಂತ್ರಣ ತಪ್ಪಿ 20 ಅಡಿ ಆಳಕ್ಕೆ ಕಾರು(Car) ಬಿದ್ದ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಬಿದನಗೆರೆ ಗ್ರಾಮದ ಬಳಿ ನಡೆದಿದೆ. ಅಪಘಾತದಲ್ಲಿ ಕಟ್ಟಿಗೆಯ ತುಂಡು ವ್ಯಕ್ತಿ ದವಡೆಗೆ ಹೊಕ್ಕಿದ್ದು, ಸದ್ಯ ಗಾಯಾಳುವನ್ನು ಬೆಂಗಳೂರಿನ ಆಸ್ಪತ್ರೆಗೆ(Hospital) ದಾಖಲಿಸಲಾಗಿದೆ. ಬೆಂಗಳೂರಿನ ಮಾದನಾಯಕನಹಳ್ಳಿ ಹರ್ಷ, ತಾಯಿ ಶಿವಮ್ಮ, ಪತ್ನಿ ಮಕ್ಕಳೊಂದಿಗೆ ತುಮಕೂರು ಜಿಲ್ಲೆಯ ದೇವಾಲಯಗಳಿಗೆ ಭೇಟಿ ನೀಡಿ ವಾಪಸ್ ಆಗುತ್ತಿದ್ದಾಗ ಅಪಘಾತ (Accident) ಸಂಭವಿಸಿದೆ. ತೆಂಗಿನತೋಟದಲ್ಲಿ ಕಾರು ಬಿದ್ದ ರಭಸಕ್ಕೆ ಕಟ್ಟಿಗೆಯ ತುಂಡು ದವಡಗೆ ಸಿಲುಕಿದೆ. ಕುಣಿಗಲ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರೂ ಕಟ್ಟಿಗೆ ತೆಗೆಯಲಾಗಿಲ್ಲ. ಹೀಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ತುಮಕೂರು: ದ್ವಿಚಕ್ರ ವಾಹನ ಹರಾಜು

ತುಮಕೂರು ತಾಲೂಕಿನ ಕೋರ ಪೊಲೀಸ್ ಠಾಣೆ ಆವರಣದಲ್ಲಿ ನಿಲ್ಲಿಸಿಕೊಂಡಿರುವ ದ್ವಿಚಕ್ರ ವಾಹನಗಳ ಹರಾಜು ಪ್ರಕ್ರಿಯೆ ಫೆಬ್ರವರಿ 15 ರಂದು ನಡೆಯಲಿದೆ. 9 ದ್ವಿಚಕ್ರ ವಾಹನಗಳು ಇದ್ದು, ನ್ಯಾಯಾಲಯ ಹಾಗೂ ಎಸ್​ಪಿ ಆದೇಶದ ಮೇರೆಗೆ ಬೆಳಿಗ್ಗೆ 10 ಗಂಟೆಗೆ ತುಮಕೂರು ವೃತ್ತ ನಿರಿಕ್ಷಕರ ಸಮಕ್ಷಮದಲ್ಲಿ ಸಾರ್ವಜನಿಕ ಬಹಿರಂಗ ಹರಾಜು ಪ್ರಕ್ರಿಯೆ ನಡೆಯಲಿದೆ.

ಇಬ್ಬರು ವ್ಯಕ್ತಿಗಳು ಕಾಣೆ

ತುಮಕೂರು ತಾಲೂಕಿನ ಬೆಳ್ಳಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವೆಂಕಟೇಶ 40 ಹಾಗೂ ಎಸ್ ಲೋಹಿತ 29 ಎಂಬ ವ್ಯಕ್ತಿಗಳು ಕಾಣೆಯಾಗಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ಪ್ರಕರಣಗಳು ದಾಖಲಾಗಿವೆ. ವೆಂಕಟೇಶ ಜನವರಿ 27 ರಂದು ಕೆಲಸಕ್ಕೆಂದು ತನ್ನ ಸಲೂನ್​ಗೆ ಹೋಗಿ ವಾಪಸ್ ಬಂದಿಲ್ಲ ಎಂದು ಪತ್ನಿ ಪದ್ಮ ದೂರು ನೀಡಿದ್ದಾರೆ. ಲೋಹಿತ್ ಫೆಬ್ರವರಿ 1 ರಂದು ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಎಲ್​ಟಿ ಪೈನಾನ್ಸ್ ಕಂಪನಿಗೆ ಕೆಲಸಕ್ಕೆಂದು ಹೋದವರು ಬಂದಿಲ್ಲ ಎಂದು ದೂರು ನೀಡಲಾಗಿದೆ.

ವಿದ್ಯುತ್ ವ್ಯತ್ಯಯ

ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿ ತುರ್ತು ನಿರ್ವಹಣಾ ಕಾಮಗಾರಿಯಿಂದ ಇಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ.ತಾಲೂಕಿನ ಕೋಳಾಲ, ಚಿನ್ನಹಳ್ಳಿ, ಪಾತಗಾನಹಳ್ಳಿ, ವಜ್ಜನಕುರಿಕೆ, ಎಲೆರಾಮ್ ಪುರ, ಮಾವತ್ತೂರು ದೊಡ್ಡ ಸಾಗ್ಗೆರೆ ಗ್ರಾ.ಪಂ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಸಿ.ಎಸ್.​ಪುರ ಪೊಲೀಸ್ ಠಾಣೆಯಲ್ಲಿ ಇಲ್ಲ ಪಿಎಸ್​ಐ

ತುಮಕೂರು: ಗುಬ್ಬಿ ತಾಲೂಕಿನ ಸಿ.ಎಸ್.ಪುರ ಠಾಣೆಯಲ್ಲಿ 3 ತಿಂಗಳಿಂದ ಪಿಎಸ್‌ಐ ಇಲ್ಲ. ಈ ಹಿಂದೆ ಇದ್ದ ಪಿಎಸ್‌ಐ ಎಸಿಬಿ ದಾಳಿಗೆ ಒಳಗಾಗಿದ್ದರು. ಸದ್ಯ ಸಿ.ಎಸ್.ಪುರ ಠಾಣೆಗೆ ಬರಲು ಪಿಎಸ್‌ಐಗಳು ಹಿಂದೇಟು ಹಾಕುತ್ತಿದ್ದಾರೆ. ಠಾಣೆ ವ್ಯಾಪ್ತಿಯಲ್ಲಿ ಅತಿಹೆಚ್ಚು ರಾಜಕೀಯ ಕಿತ್ತಾಟ, ಕೌಟುಂಬಿಕ ಕಲಹ, ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಆದರೆ ಇದುವರೆಗೂ ಪಿಎಸ್​ಐ ಬಂದಿಲ್ಲ. ಗೃಹ ಸಚಿವ ಆರಗ ಜ್ಞಾನೇಂದ್ರ ಉಸ್ತುವಾರಿಯಾಗಿರುವ ಜಿಲ್ಲೆಯಲ್ಲಿ ಪಿಎಸ್​ಐ ಇಲ್ಲದಂತಾಗಿದೆ.

ಇದನ್ನೂ ಓದಿ: ಅಪಘಾತದಿಂದ ಚೇತರಿಸಿಕೊಂಡ ಬೆನ್ನಲ್ಲೇ ಸಾಯಿ ಧರಮ್​ ತೇಜ್​ ಕಡೆಯಿಂದ ಗುಡ್​ ನ್ಯೂಸ್​; ಮಾವನ ​ ಜತೆ ಸಿನಿಮಾ?

ರೆಮ್​ಡೆಸಿವರ್​ ಸಾಗಿಸುತ್ತಿದ್ದ ವಿಮಾನ ಅಪಘಾತ: 85 ಕೋಟಿ ರೂಪಾಯಿ ಬಿಲ್​ ನೀಡಿ, ಕಕ್ಕಾಬಿಕ್ಕಿಯಾದ ಮಧ್ಯ ಪ್ರದೇಶ ಸರ್ಕಾರ!

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada